RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ಪೋಟೋಗ್ರಾಫರ್ ಹಾಗೂ ವಿಡಿಯೋ ಗ್ರಾಫರಗಳಿಗೆ ಪರಿಹಾರ ಧನ ನೀಡುವಂತೆ ಆಗ್ರಹಿಸಿ ಮನವಿ

ಗೋಕಾಕ:ಪೋಟೋಗ್ರಾಫರ್ ಹಾಗೂ ವಿಡಿಯೋ ಗ್ರಾಫರಗಳಿಗೆ ಪರಿಹಾರ ಧನ ನೀಡುವಂತೆ ಆಗ್ರಹಿಸಿ ಮನವಿ 

ಪೋಟೋಗ್ರಾಫರ್ ಹಾಗೂ ವಿಡಿಯೋ ಗ್ರಾಫರಗಳಿಗೆ ಪರಿಹಾರ ಧನ ನೀಡುವಂತೆ ಆಗ್ರಹಿಸಿ ಮನವಿ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 28 :

 

 

ಕೊರೋನಾ ವೈರಸನಿಂದ ಸಂಕಷ್ಟಕ್ಕಿಡಾಗಿರುವ ಪೋಟೋಗ್ರಾಫರ್ ಹಾಗೂ ವಿಡಿಯೋ ಗ್ರಾಫರಗಳಿಗೆ ಪರಿಹಾರ ಧನ ನೀಡುವಂತೆ ಆಗ್ರಹಿಸಿ ಗೋಕಾಕ ತಾಲೂಕಾ ವೃತ್ತಿ ನಿರತ ಛಾಯಾ ಗ್ರಾಹಕರ ಸಂಘದವರು ಬುಧವಾರದಂದು ಸಚಿವ ರಮೇಶ ಜಾರಕಿಹೊಳಿ ಅವರಿಗೆ ನಗರದ ಅವರ ಕಾರ್ಯಾಲಯದಲ್ಲಿ ಮನವಿ ಅರ್ಪಿಸಿದರು.

ಕೊರೋನಾ ವೈರಸ್ ತಡೆಗಟ್ಟಲು ಲಾಕಡೌನ ಘೋಷಿಸಿದ್ದರಿಂದ ಮದುವೆ ಹಾಗೂ ಇತರ ಸಮಾರಂಭಗಳು ನಡೆಯದೆ ಈ ವೃತ್ತಿಯನ್ನೇ ಅವಲಂಬಿತರಾದ ಪೋಟೋ ಗ್ರಾಫರ್ ಹಾಗೂ ವಿಡಿಯೋ ಗ್ರಾಫರಗಳು ಆರ್ಥಿಕವಾಗಿ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ . ಸರಕಾರದಿಂದ ಸಿಗುವ ಸಹಾಯ ಧನದ ಸೌಲಭವನ್ನು ಕಲ್ಪಿಸುವಂತೆ ಮನವಿಯಲ್ಲಿ ವಿನಂತಿಸಿದ್ದಾರೆ

ಈ ಸಂದರ್ಭದಲ್ಲಿ ಅಧ್ಯಕ್ಷ ಆನಂದ ವಣ್ಣೂರ , ಕಾರ್ಯದರ್ಶಿ ರಾಜು ಗಂಡಗಾಳೆ , ಸದಸ್ಯರಾದ ಮುಕೇಶ ಹಾದರಗಿ, ರವಿ ಉಪ್ಪಿನ , ಲಕ್ಷ್ಮಣ ಯಮಕನಮರಡಿ , ಆನಂದ ಹಳಕಟ್ಟಿ , ಬಿ.ಪ್ರಭಾಕರ , ಸುರೇಶ ರಜಪೂತ ಸೇರಿದಂತೆ ಅನೇಕರು ಇದ್ದರು .

Related posts: