RNI NO. KARKAN/2006/27779|Tuesday, October 14, 2025
You are here: Home » breaking news » ಗೋಕಾಕ:ಸ್ನಾನಕ್ಕೆ ತೆರಳಿದ ಇಬ್ಬರು ಯುವಕರು ನದಿಯಲ್ಲಿ ಮುಳುಗಿ ನಾಪತ್ತೆ : ಮಕ್ಕಳಿಗಾಗಿ ಯೋಗಿ ಕೊಳ್ಳದಲ್ಲಿ ಶೋಧ ಕಾರ್ಯ

ಗೋಕಾಕ:ಸ್ನಾನಕ್ಕೆ ತೆರಳಿದ ಇಬ್ಬರು ಯುವಕರು ನದಿಯಲ್ಲಿ ಮುಳುಗಿ ನಾಪತ್ತೆ : ಮಕ್ಕಳಿಗಾಗಿ ಯೋಗಿ ಕೊಳ್ಳದಲ್ಲಿ ಶೋಧ ಕಾರ್ಯ 

ಸ್ನಾನಕ್ಕೆ ತೆರಳಿದ ಇಬ್ಬರು ಯುವಕರು ನದಿಯಲ್ಲಿ ಮುಳುಗಿ ನಾಪತ್ತೆ  :  ಮಕ್ಕಳಿಗಾಗಿ ಯೋಗಿ ಕೊಳ್ಳದಲ್ಲಿ ಶೋಧ ಕಾರ್ಯ 

ಗೋಕಾಕ ಅ 15: ಇಲ್ಲಿಗೆ ಸಮೀಪದ ಯೋಗಿಕೊಳ್ಳ ಮಾರ್ಕಂಡೇಯ ನದಿಯಲ್ಲಿ ಮಂಗಳವಾರ ಮಧ್ಯಾಹ್ನ ಸ್ನಾನಕ್ಕೆ ತೆರಳಿದ್ದ ಕೆಎಲ್ಇ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ.

ನಾಪತ್ತೆಯಾದ ವಿದ್ಯಾರ್ಥಿಗಳನ್ನು ನೀಲ ಮುನವಳ್ಳಿ (15), ಸಾಹೀಲ್ ಸಿದ್ಧಕಿ (15)   ಎಂದು ಗುರುತಿಸಲಾಗಿದೆ. ಈ ವಿದ್ಯಾರ್ಥಿಗಳು 9ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದರು. ಸ್ವಾತಂತ್ರ್ಯ ದಿನಾಚರಣೆ ರಜೆ ಹಿನ್ನೆಲೆಯಲ್ಲಿ ಈಜಲು ತೆರಳಿದ್ದ ಅವರು ಯೋಗಿಕೊಳ್ಳದ ಅಪಾಯಕಾರಿ ಸ್ಥಳದ ಬಳಿ ಮುಳುಗಿದ್ದಾರೆ ಎಂದು ಹೇಳಲಾಗುತ್ತಿದೆ.

ನಾಪತ್ತೆಯಾದ ಇಬ್ಬರು ಮಕ್ಕಳಿಗಾಗಿ ಯೋಗಿ ಕೊಳ್ಳದಲ್ಲಿ ಶೋಧ ಕಾರ್ಯ ಚುರುಕುಗೊಳಿಸಲಾಗಿದೆ.

 ಘಟನೆ ನಡೆದ ಸ್ಥಳಕ್ಕೆ ಅಗ್ನಿಶಾಮಕ ದಳ, ಈಜು ತಜ್ಞರು ಬಂದಿದ್ದು, ಸ್ಥಳದಲ್ಲಿ ಸಾವಿರಾರು ಜನ ಧಾವಿಸಿದ್ದಾರೆ

Related posts: