RNI NO. KARKAN/2006/27779|Saturday, August 2, 2025
You are here: Home » breaking news » ಕೌಜಲಗಿ:ಅರವಿಂದ ದಳವಾಯಿ ಅವರಿಂದ ಬಡವರಿಗೆ ದಿನಸಿ ವಸ್ತುಗಳ ವಿತರಣೆ

ಕೌಜಲಗಿ:ಅರವಿಂದ ದಳವಾಯಿ ಅವರಿಂದ ಬಡವರಿಗೆ ದಿನಸಿ ವಸ್ತುಗಳ ವಿತರಣೆ 

ಅರವಿಂದ ದಳವಾಯಿ ಅವರಿಂದ
ಬಡವರಿಗೆ ದಿನಸಿ ವಸ್ತುಗಳ ವಿತರಣೆ

 

 
ನಮ್ಮ ಬೆಳಗಾವಿ ಇ – ವಾರ್ತೆ , ಕೌಜಲಗಿ ಎ 11 :

 

 
ಕೊರೊನಾ ಸೊಂಕು ತಡೆಗಟ್ಟುವಿಕೆ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ದೇಶಾದ್ಯಂತ ಕರೆಯಲಾದ ಜನತಾ ಕಪ್ರ್ಯೂದಿಂದಾಗಿ ಬಡವರಿಗೆ ಕೂಲಿಕರ್ಮಿಗಳಿಗಾದ ತೊಂದರೆಯನ್ನು ನೀಗಿಸುವ ನಿಟ್ಟಿನಲ್ಲಿ ಕೌಜಲಗಿಯಲ್ಲಿ ಶನಿವಾರದಂದು ಕೌಜಲಗಿ ಮತ್ತು ಅರಭಾವಿ ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ ದಿನಸಿ ವಸ್ತುಗಳನ್ನು ವಿತರಿಸಲಾಯಿತು.
ಕಾಂಗ್ರೆಸ್ ಮುಖಂಡ ಅರವಿಂದ ದಳವಾಯಿ ಅವರೊಂದಿಗೆ ಕೌಜಲಗಿ, ಅರಭಾವಿ ಬ್ಲಾಕ್ ಕಾಂಗ್ರೇಸ್ ಪದಾಧಿಕಾರಿಗಳು ದಳವಾಯಿ ಅವರ ತೋಟದಲ್ಲಿ ಅಗತ್ಯ ವಸ್ತುಗಳಾದ ಅಕ್ಕಿ, ಬೇಳೆ, ಸಾಬೂನು, ಸಾಬೂನುಪುಡಿ, ಮಾಸ್ಕ್ ಮುಂತಾದವುಗಳನ್ನು ವಿತರಿಸಿದ ಅರವಿಂದ ದಳವಾಯಿ ಮಾತನಾಡಿ, ಕೊರೊನಾ ಮಾರಕ ರಾಷ್ಟ್ರೀಯ ವಿಪತ್ತಾಗಿ ಪರಿಣಮಿಸಿದೆ. ನಾವೆಲ್ಲರೂ ಪಕ್ಷಾತೀತ, ಜಾತ್ಯಾತೀತವಾಗಿ ಎದುರಿಸಬೇಕಾಗಿದೆ. ಈ ದೆಸೆಯಲ್ಲಿ ಕೌಜಲಗಿ ಮತ್ತು ಅರಭಾವಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಬಡವರಿಗೆ ಕೂಲಿಕರ್ಮಿಗಳಿಗೆ ದಿನಸಿ ವಸ್ತುಗಳನ್ನು ವಿತರಿಸುತ್ತಿದ್ದೇವೆ. ಯಾದವಾಡ ಮತ್ತು ಮೂಡಲಗಿ ಕೇಂದ್ರಗಳಲ್ಲಿಯೂ ದಿನಸಿ ವಸ್ತುಗಳನ್ನು ವಿತರಿಸಲಾಗುತ್ತದೆಂದು ಹೇಳಿದರು.
ಈ ಸಂದರ್ಭದಲ್ಲಿ ಲಗಮನ್ನ ಕಳಸನ್ನವರ, ಗುರುರಾಜ ಪೂಜೇರಿ, ಲಕ್ಷ್ಮಣ ಅಲಕನೂರ, ಇಮಾಮಸಾಬ ಹುನ್ನೂರ, ಭೀಮಶಿ ಕಾರದಗಿ, ನಿಂಗಪ್ಪ ಬ್ಯಾಗಿ, ಮಹಾದೇವ ತಪಸಿ ಸಂಗಯ್ಯ ಮಠದ, ವಸಂತ ದಳವಾಯಿ, ಮಾರುತಿ ರಾವುತ, ಮೈಬೂಬಸಾಬ ಮುಲ್ತಾನಿ, ಭೀಮಶಿ ಬೆಣ್ಣಿ ಹಾಗೂ ಕೌಜಲಗಿ ಗ್ರಾಮಸ್ಥರು ಇದ್ದರು.

Related posts: