ಬೆಟಗೇರಿ:ಕೊರೋನಾ ಹಿನ್ನೆಲೆ:ಗ್ರಾಮದ ಪ್ರಮುಖ ಸ್ಥಳ, ಓಣಿಗಳಲ್ಲಿ ಆಗಾಗ ಫಾಗಿಂಗ್ ಮಾಡುತ್ತಿರುವ ಕಾರ್ಯ
ಕೊರೋನಾ ಹಿನ್ನೆಲೆ:ಗ್ರಾಮದ ಪ್ರಮುಖ ಸ್ಥಳ, ಓಣಿಗಳಲ್ಲಿ ಆಗಾಗ ಫಾಗಿಂಗ್ ಮಾಡುತ್ತಿರುವ ಕಾರ್ಯ
ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಎ 6 :
ವಿಶ್ವದಾದ್ಯಂತ ಹರಡಿರುವ ಕರೊನಾ ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಗ್ರಾಪಂ ಸಿಬ್ಬಂದಿ ಅವರು ಕಳೆದೊಂದು ವಾರದಿಂದ ಗ್ರಾಮದ ಪ್ರಮುಖ ಸ್ಥಳ, ಓಣಿಗಳಲ್ಲಿ ಆಗಾಗ ಫಾಗಿಂಗ್ ಮಾಡುತ್ತಿರುವ ಕಾರ್ಯ ನಡೆದಿದೆ.
ಗ್ರಾಮ ಪಂಚಾಯಿತಿ ಅಧ್ಯಕ್ಷ ಈಶ್ವರ ಬಳಿಗಾರ, ಪಿಡಿಒ ಎಚ್.ಎನ್.ಬಾವಿಕಟ್ಟಿ ಅವರು ಸ್ಥಳೀಯ ಸಾರ್ವಜನಿಕರು ತಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಚವಾಗಿರಿಸಿಕೊಳ್ಳಬೇಕು. ಕರೊನಾ ವೈರಸ್ ಹರಡದಂತೆ ಗ್ರಾಮಸ್ಥರು ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಅನುಸರಿಸಬೇಕು ಎಂದು ಸ್ಥಳೀಯರಿಗೆ ತಿಳಿಸಿದ್ದಾರೆ. ಕಾರ್ಯದರ್ಶಿ ಪರಶುರಾಮ ಇಟಗೌಡ್ರ, ಗೌಡಪ್ಪ ಮಾಳೇದ, ಸುರೇಶ ಬಾಣಸಿ, ಶಿವಾನಂದ ಐದುಡ್ಡಿ, ಈರಣ್ಣ ದಂಡಿನ, ಗ್ರಾಪಂ ಸದಸ್ಯರು, ಇತರರು ಇದ್ದರು.
Related posts:
ಗೋಕಾಕ:ಗೋಕಾಕಕ್ಕೆ ನಾಳೆ ಯಡಿಯೂರಪ್ಪ : ಪ್ರಚಾರ ಸಭೆಯಲ್ಲಿ 10 ಸಾವಿರ ಕಾರ್ಯಕರ್ತರು ಭಾಗಿ : ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ:ಭರದಿಂದ ಸಾಗಿದೆ ಬಂಡೆಗಲ್ಲುಗಳ ಕೋರೆಯುವ ಕಾರ್ಯ : ಸಾಯಂಕಾಲದ ವರೆಗೆ ಪೂರ್ಣಗೊಂಡ 221 ಟನ್ ಗಾತ್ರದ ಬಂಡೆಗಲ್ಲು ತೆ…
ಬೆಟಗೇರಿ:ಬೆಳಗ್ಗೆ 7 ರಿಂದ 11 ಗಂಟೆಯವರೆಗೆ ಅಂಗಡಿಗಳ ಬಾಗಿಲು ತೆರೆದು ಗ್ರಾಹಕರಿಗೆ ವಸ್ತುಗಳನ್ನು ಕೂಡಬೇಕು : ಬಿ.ಬಿ.ಬಿ…