ಗೋಕಾಕ:ನಾಳೆ ಬೆಳಿಗ್ಗೆ 10.00 ಗಂಟೆಯಿಂದ 3 ದಿನಗಳವರೆಗೆ ಗೋಕಾಕ ತಾಲೂಕ ಸಂಪೂರ್ಣ ಲಾಕಡೌನ : ತಹಶೀಲ್ದಾರ ಪ್ರಕಾಶ ಮಾಹಿತಿ
ನಾಳೆ ಬೆಳಿಗ್ಗೆ 10.00 ಗಂಟೆಯಿಂದ 3 ದಿನಗಳವರೆಗೆ ಗೋಕಾಕ ತಾಲೂಕ ಸಂಪೂರ್ಣ ಲಾಕಡೌನ : ತಹಶೀಲ್ದಾರ ಪ್ರಕಾಶ ಮಾಹಿತಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 5 :
ನಾಳೆ ಬೆಳಿಗ್ಗೆ 10.00 ಗಂಟೆಯಿಂದ 3 ದಿನಗಳವರೆಗೆ ಗೋಕಾಕ ನಗರ ಸೇರಿದಂತೆ ಸಂಪೂರ್ಣ ತಾಲೂಕು ಲಾಕ್ ಡೌನ್ ಮಾಡಲಾಗುವದು ಎಂದು ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ತಿಳಿಸಿದ್ದಾರೆ
ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು ಈ ಮೂರು ದಿನಗಳ ಅವಧಿಯಲ್ಲಿ ರೇಷನ್ ಹಂಚಿಕೆ, ಬಿಸಿ ಊಟದ ರೇಷನ್ ಹಂಚಿಕೆ ಸಹ ಸ್ಥಗಿತಗೊಳಿಸಲಾಗಿದ್ದು , ಆಸ್ಪತ್ರೆ , ಔಷಧ ಅಂಗಡಿ , ಹಾಲು, ನೀರು ಮತ್ತು ದಿನ ಪತ್ರಿಕೆಗಳ ಸೇವೆಗಳು ಮಾತ್ರ ಚಾಲ್ತಿಯಲ್ಲಿ ಇರುತ್ತವೆ.
ತಾಲೂಕಿನ ಎಲ್ಲ ನೋಡಲ್ ಅಧಿಕಾರಿಗಳು ಗ್ರಾಮ ಮಟ್ಟದ ಕಾರ್ಯಪಡೆಯ ಸದಸ್ಯರ ಹಾಗೂ ಪಿಡಿಓಗಳು ಇಂದೇ ಡಂಗುರ ಸಾರಿ ಗ್ರಾಮಗಳ ಸಿಮೆಗಳನ್ನು ಸಹ ಬಂದ ಮಾಡಿಕೊಳ್ಳಲು ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ತಿಳಿಸಿದ್ದಾರೆ