RNI NO. KARKAN/2006/27779|Tuesday, October 14, 2025
You are here: Home » breaking news » ಕೌಜಲಗಿ:ಕರೊನಾ ತಡೆಗಟ್ಟಲು ಮಾಸ್ಕ ಧರಿಸಿ – ಶಿವಲಿಂಗ ಬಳಿಗಾರ

ಕೌಜಲಗಿ:ಕರೊನಾ ತಡೆಗಟ್ಟಲು ಮಾಸ್ಕ ಧರಿಸಿ – ಶಿವಲಿಂಗ ಬಳಿಗಾರ 

ಕರೊನಾ ತಡೆಗಟ್ಟಲು ಮಾಸ್ಕ ಧರಿಸಿ – ಶಿವಲಿಂಗ ಬಳಿಗಾರ

 

 

ನಮ್ಮ ಬೆಳಗಾವಿ ಇ – ವಾರ್ತೆ , ಕೌಜಲಗಿ ಮಾ 29 :

 

 
ಸಮೀಪದ ಗೋಸಬಾಳ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಬಗರನಾಳ, ಬಿಲಕುಂದಿ, ಗೋಸಬಾಳ ಗ್ರಾಮಗಳಲ್ಲಿ ಕೊರೊನಾ ವೈರಸ್ ತಡೆಗಟ್ಟುವ ಮುನ್ನೆಚ್ಚರಿಕೆ ಜಾಥಾ ಬಿಲಕುಂದಿ ಗ್ರಾಮದಲ್ಲಿ ಇತ್ತೀಚೆಗೆ ಜರುಗಿತು.
ಗೋಸಬಾಳ ಗ್ರಾ.ಪಂ. ಅಧ್ಯಕ್ಷ ಶಿವಲಿಂಗ ಬಳಿಗಾರ ಜಾಥಾದ ನೇತೃತ್ವ ವಹಿಸಿ ಮಾತನಾಡಿ ಕೊರೊನಾ ಮಹಾಮಾರಕವಾಗಿದೆ. ಕೊರೊನಾ ಸೊಂಕು ನಮ್ಮ ನಮ್ಮ ಗ್ರಾಮಗಳಲ್ಲಿ ಹರಡದಂತೆ ಮುನ್ನೆಚ್ಚರಿಕೆಯಾಗಿ ಪ್ರತಿಯೊಬ್ಬರು ಮಾಸ್ಕ ಧರಿಸಬೇಕೆಂದು ಹೇಳಿದರು.
ಊರಿನ ಪ್ರತಿಯೊಂದು ಮನೆ ಮನೆಗೆ ತೆರಳಿ ಗ್ರಾಮಸ್ಥರಿಗೆ ಮಾಸ್ಕ ವಿತರಿಸಲಾಯಿತು. ಜಾಥಾದಲ್ಲಿ ಪಿ.ಡಿ.ಓ. ಯಲ್ಲಪ್ಪ ಹೊಸಮನಿ, ಶಿವರಾಯ ಇಟ್ನಾಳ, ತಳಕಟ್ನಳ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮಂಜು, ಆರೋಗ್ಯ ಸಹಾಯಕಿ ಸುರೇಖಾ ಹಿರೇಹೊಳಿ, ಪರಮೇಶ ಕಡಕೋಳ ಮುಂತಾದವರಿದ್ದರು.

Related posts: