RNI NO. KARKAN/2006/27779|Friday, May 9, 2025
You are here: Home » breaking news » ಬೆಟಗೇರಿ:ಕರೋನಾ ಭೀತಿ ಹಿನ್ನಲೆಯಲ್ಲಿ ರೈತರು ಬೆಳೆದ ವಿವಿಧ ಬೆಳೆಗಳಿಗೆ ಮಾರಾಟಕ್ಕೆ ಮಾರುಕಟ್ಟೆ ಸಮಸ್ಯೆ

ಬೆಟಗೇರಿ:ಕರೋನಾ ಭೀತಿ ಹಿನ್ನಲೆಯಲ್ಲಿ ರೈತರು ಬೆಳೆದ ವಿವಿಧ ಬೆಳೆಗಳಿಗೆ ಮಾರಾಟಕ್ಕೆ ಮಾರುಕಟ್ಟೆ ಸಮಸ್ಯೆ 

ಕರೋನಾ ಭೀತಿ ಹಿನ್ನಲೆಯಲ್ಲಿ ರೈತರು ಬೆಳೆದ ವಿವಿಧ ಬೆಳೆಗಳಿಗೆ ಮಾರಾಟಕ್ಕೆ ಮಾರುಕಟ್ಟೆ ಸಮಸ್ಯೆ

 

 
ವಿಶೇಷ ವರದಿ : ಅಡಿವೇಶ ಮುಧೋಳ.ಬೆಟಗೇರಿ

 

 

ಗ್ರಾಮದ ರೈತರೊಬ್ಬರೂ ತಮ್ಮ ತೋಟದಲ್ಲಿ ಟಮೆಟೂ ಬೆಳೆ ಹುಲಸಾಗಿ ಬೆಳೆದು ಇನ್ನೇನು ಕೈತುಂಬಾ ಆದಾಯ ದೊರೆಯುತ್ತದೆ ಎಂಬ ಆಶಾಭಾವನೆ ಮೂಡಿಸಿತ್ತು. ಆದರೆ ಈಗ ಕರೋನಾ ವೈರಸ್ ಹರಡುವ ಭೀತಿ ಹಿನ್ನಲೆಯಲ್ಲಿ ಕಣ್ಣಿರು ಹಾಕುವ ಪರಿಸ್ಥಿತಿ ಈ ರೈತನಿಗೆ ಎದುರಾಗಿದೆ.
ಸ್ಥಳೀಯ ರೈತ ಪ್ರಕಾಶ ಹಾಲಣ್ಣವರ ಅವರು ತಮ್ಮ ತೋಟದಲ್ಲಿ ಸುಮಾರು ಮೂರುವರೆ ಎಕರೆಯಷ್ಟು ಜಮೀನದಲ್ಲಿ ಸುಮಾರು 1 ಲಕ್ಷ ರೂಪಾಯಿಗಳಷ್ಟು ಸಾಲಶೂಲ ಮಾಡಿ ಕಷ್ಟ ಪಟ್ಟು ಟಮೆಟೂ ಬೆಳೆ ಬೆಳೆದಿದ್ದಾರೆ. ಈಗ ಟಮೆಟೂ ಪೂರ್ಣ ಪ್ರಮಾಣದಲ್ಲಿ ಕಟಾವು ಹಂತಕ್ಕೆ ಬಂದು ತಲುಪಿದಿದ್ದರಿಂದ ಕರೋನಾ ಭೀತಿ ಹಿನ್ನಲೆಯಲ್ಲಿ ಟಮೆಟೂ ಮಾರಾಟಕ್ಕೆ ಮಾರುಕಟ್ಟೆ ಕೊರತೆಯಿಂದ ರೈತ ಪ್ರಕಾಶ ಕಣ್ಣಿರುಡುವಂತಾಗಿದೆ.
ಕರೋನಾ ವೈರಸ್ ಹರಡದಂತೆ ಮುನ್ನಚ್ಚರಿಕೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಲಾಕ್ ಡೌನ್ ಆದ ಪ್ರಯುಕ್ತ ಬೇರೆ ಕಡೆ ಮಾರುಕಟ್ಟೆಗೆ ಸಾಗಿಸಲು ಸಾರಿಗೆ ಮತ್ತು ಮಾರಾಟದ ಮಾರುಕಟ್ಟೆ ಸಮಸ್ಯೆಯಿಂದ ತೋಟದಲ್ಲಿಯೇ ಟಮೆಟೂ ಸಂರ್ಪೂಣ ಹಣ್ಣುಗಳಾಗಿ ಅಲ್ಲಿಯೇ ಕೊಳೆತು ಹೋಗುತ್ತಿದೆ. ಇನ್ನೂ 17 ದಿನ ಸಾರಿಗೆ ಸಂಪರ್ಕ, ಮಾರಾಟಕ್ಕೆ ಮಾರುಕಟ್ಟೆಯ ಸಮಸ್ಯೆ ಇದ್ದುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅಂಬುವಂತಾಗಿದೆ ಎಂದು ರೈತ ಪ್ರಕಾಶ ಹಾಲಣ್ಣವರ ಹೇಳುತ್ತಿದ್ದಾರೆ.
ಕರೋನಾ ಭೀತಿ ಹಿನ್ನಲೆಯಲ್ಲಿ ರೈತರು ಬೆಳೆದ ವಿವಿಧ ಬೆಳೆಗಳಿಗೆ ಮಾರಾಟಕ್ಕೆ ಮಾರುಕಟ್ಟೆ ಸಮಸ್ಯೆಯಿಂದ ನಷ್ಟ ಸಂಭವಿಸಿದ ಬೆಳೆಗಳ ರೈತರಿಗೆ ಶೀಘ್ರ ಸೂಕ್ತ ಪರಿಹಾರ ನೀಡುಬೇಕೆಂದು ಸ್ಥಳೀಯ ರೈತರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
“ಸಾಲ-ಶೂಲ ಮಾಡಿ ತೋಟದಲ್ಲಿ ಟಮೆಟೂ ಬೆಳೆ ಹಾಕಿದೆ. ಇನ್ನೇನೂ ಆದಾಯ ನೀಡುತ್ತದೆ ಎಂಬ ಆಶಾ ಭಾವ ಹೊಂದ್ದಿದೆ. ಕರೋನಾ ರೋಗ ಹರಡುವ ಭೀತಿಯ ಹಿನ್ನಲೆಯಲ್ಲಿ ತಾಲೂಕು, ನಗರ ಬೇರೆ ಹಳ್ಳಿಗಳಿಗೂ ಸಹ ಹೋಗದಂತೆ ಜಿಲ್ಲೆಯಾದ್ಯಂತ ಲಾಕ್ ಡೌನ್ ಮಾಡಿದ್ದರಿಂದ ಮಾರಾಟದ ಸಮಸ್ಯೆಯಿಂದ ತೋಟದಲ್ಲಿ ಟಮೆಟೂ ಬೆಳೆ ಕೊಳೆತು ಹೋಗುತ್ತಿದೆ. ಹೀಗಾಗಿ ನಮ್ಮ ಕುಟುಂಬ ಮತ್ತಷ್ಟು ಆರ್ಥಿಕವಾಗಿ ಸಂಕಷ್ಟ ಎದುರಿಸುವಂತಾಗಿದೆ. * ಪ್ರಕಾಶ ಹಾಲಣ್ಣವರ. ನಷ್ಟಕ್ಕೊಳಗಾದ ರೈತ

Related posts: