ನೇಗಿನಾಳ:ನಾಳೆ ಬುಧವಾರ ನೇಗಿನಹಾಳ ಗ್ರಾಮದ ಸಂತೆ ರದ್ದು.
ನಾಳೆ ಬುಧವಾರ ನೇಗಿನಹಾಳ ಗ್ರಾಮದ ಸಂತೆ ರದ್ದು.
ನಮ್ಮ ಬೆಳಗಾವಿ ಇ – ವಾರ್ತೆ , ನೇಗಿನಹಾಳ ಮಾ 23 :
ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳು ಮಾರ್ಚ ೩೧ ರವರಿಗೆ ಜನತಾ ಕರ್ಪ್ಯೂ ಆದೇಶದ ಮೇರೆಗೆ ನೇಗಿನಹಾಳ ಗ್ರಾಮದಲ್ಲಿ ಬುಧವಾರ ಸಂಜೆ ವೇಳೆ ನಡೆಯುವ ಸಂತೆಯನ್ನು ರದ್ದುಗೊಳಿಸಲಾಗಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಚ್ ವಿಶ್ವನಾಥ ತಿಳಿಸಿದ್ದಾರೆ.
ಗ್ರಾಮದ ಸೂತ್ತಮುತ್ತಲಿನ ಯರಡಾಲ, ಕುರಗುಂದ, ಹೊಳಿಹೊಸುರ, ಕೆಸರಕೊಪ್ಪ ಹಾಗೂ ಇತರೆ ಸಮೀಪದ ಹಳ್ಳಿಗಳಿಂದ ಸೇರುವ ಕಾಯಿಪಲ್ಯ, ದಿನಸಿ ವ್ಯಾಪಾರಸ್ಥರು, ಹಾಗೂ ಸಾರ್ವಜನಿಕರು ಒಂದೆಡೆ ಸೇರುವುದರಿಂದ ಜನದಟ್ಟಣೆ ಹೆಚ್ಚುತ್ತದೆ ಇದರಿಂದ ಕ್ರೂರವಾದಂತಹ ಕೊರೊನಾ ಸೊಂಕು ಹರಡುವ ಸಾಧ್ಯತೆಗಳಿದ್ದು ಅದನ್ನು ತಡೆಗಟ್ಟುವ ಉದ್ದೇಶದಿಂದ ನಾಳೆಯ ಸಂತೆಯನ್ನು ರದ್ದುಗೊಳಿಸಲಾಗಿದೆ. ಇದನ್ನು ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇಗಾಗಲೇ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಗ್ರಾಮದಲ್ಲಿ ಪ್ರಚಾರ ಕಾರ್ಯಕೈಗೊಳ್ಳಲಾಗಿದ್ದು ದಯವಿಟ್ಟು ಪ್ರತಿಯೊಬ್ಬರೂ ಸಹಕರಿಸಬೇಕಾಗಿ ವಿನಂತಿ. ಗ್ರಾಮಕ್ಕೆ ವಿದೇಶದಿಂದ ಬಂದವರ ಕುರಿತು ಗ್ರಾಮ ಪಂಚಾಯತಿಗೆ ಮಾಹಿತಿ ನೀಡಬೇಕು ಹಾಗೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕೆಂದು ವಿನಂತಿಸುತ್ತೇವೆ.
ನೇಗಿನಹಾಳ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಆದಿತ್ಯಾ ಹಾಲು ಹಾಗೂ ಆಹಾರ ಪದಾರ್ಥಗಳ ಉತ್ಪಾದನಾ ಘಟಕವಿದ್ದು ಇಲ್ಲಿ ಪ್ರತಿದಿನ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದು ಅಲ್ಲಿನ ಹಾಲು ಮಾರಾಟ ಹಾಗೂ ಶೇಖರಣೆಗಾಗಿ ಬೇರೆ-ಬೇರೆ ಜಿಲ್ಲೆ ಹಾಗೂ ರಾಜ್ಯದಿಂದ ನೂರಾರು ಜನರು ಆಗಮಿಸುತ್ತಾರೆ ಹಾಗೂ ಪ್ರತಿದಿನ ಹಾಲು ಹಾಗೂ ಇತರ ಆಹಾರ ಪಧಾರ್ಥಗಳನ್ನು ನೀಡಲು ರಾಜ್ಯದ ತುಂಬೆಲ್ಲಾ ವಾಹನಗಳು ಸಂಚರಿಸುತ್ತಿದ್ದು ದಯವಿಟ್ಟು ಅಲ್ಲಿನ ಉದ್ಯೋಗಿಗಳು ಮುಂಜಾಗೃತ ಕ್ರಮ ವಹಿಸಿಕೊಂಡು ಆರೋಗ್ಯದ ಬಗ್ಗೆ ಬಹಳಷ್ಟು ಎಚ್ಛರಿಕೆ ವಹಿಸಬೇಕು ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಚ್ ವಿಶ್ವನಾಥ ಕಂಪನಗೆ ನೋಟೀಸ್ ಜಾರಿಗೊಳಿಸಿದ್ದಾರೆ.