RNI NO. KARKAN/2006/27779|Wednesday, October 15, 2025
You are here: Home » breaking news » ಮೂಡಲಗಿ:ಬಸಮ್ಮ ಸವಸುದ್ದಿಯವರಿಗೆ ರಾಜ್ಯದ ಅತ್ಯುತ್ತಮ ಶಾಖಾ ನಾಯಕಿ ಪ್ರಶಸ್ತಿ

ಮೂಡಲಗಿ:ಬಸಮ್ಮ ಸವಸುದ್ದಿಯವರಿಗೆ ರಾಜ್ಯದ ಅತ್ಯುತ್ತಮ ಶಾಖಾ ನಾಯಕಿ ಪ್ರಶಸ್ತಿ 

ಬಸಮ್ಮ ಸವಸುದ್ದಿಯವರಿಗೆ ರಾಜ್ಯದ ಅತ್ಯುತ್ತಮ ಶಾಖಾ ನಾಯಕಿ ಪ್ರಶಸ್ತಿ

 
ನಮ್ಮ ಬೆಳಗಾವಿ ಇ – ವಾರ್ತೆ , ಮೂಡಲಗಿ ಫೆ 5 :

 

 

ದೊಡ್ಡಬಳ್ಳಾಪೂರದ ಭಗತಸಿಂಗ ಮೈದಾನದಲ್ಲಿ ಜರುಗಿದ ರಾಜ್ಯಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳದಲ್ಲಿ ಬೆಂಗಳೂರಿನ ಭಾರತ ಸೇವಾದಳದ ವತಿಯಿಂದ ಬಸಮ್ಮ ಸವಸುದ್ದಿಯವರಿಗೆ ರಾಜ್ಯದ ಅತ್ಯುತ್ತಮ ಶಾಖಾ ನಾಯಕಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಸಮೀಪದ ಲೋಳಸುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕಿಯಾಗಿ ಬಸಮ್ಮ ಸವಸುದ್ದಿ ಕಾರ್ಯನಿರ್ವಹಿಸುತ್ತಿದ್ದಾರೆ. 1998 ರಿಂದ ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮ, ರಾಷ್ಟ್ರ ಭಕ್ತಿ, ರಾಷ್ಟ್ರೀಯ ಭಾವೈಕ್ಯತೆ ಸೇರಿದಂತೆ ಮುಂತಾದ ಸದ್ಗುಣಗಳನ್ನು ಮೂಡಿಸಿರುತ್ತಾರೆ. 23 ವರ್ಷಗಳ ತಮ್ಮ ಸೇವಾವಧಿಯಲ್ಲಿ ತಾಲೂಕು ಮತ್ತು ಜಿಲ್ಲಾ ಆದರ್ಶ ಶಿಕ್ಷಕಿ, ನೆಷನ್ ಬಿಲ್ಡರ್ ಅವಾರ್ಡ್, ಇನ್ನರ ವಿಲ್ ಸಂಸ್ಥೆಯಿಂದ ಆದರ್ಶ ಶಿಕ್ಷಕಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸಂಪನ್ಮೂಲ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದಕ್ಕೆ ಬಿಇಒ ಎ.ಸಿ ಮನ್ನಿಕೇರಿ, ಸೇವಾದಳದ ರಾಜ್ಯ ಉಪದಳಪತಿ ಬಸವರಾಜ ಹಟ್ಟಿಗೌಡರ, ಮುಖ್ಯೋಪಾಧ್ಯಾಯ ಎಸ್.ಬಿ ಕುಂಬಾರ, ಎಸ್.ಡಿ.ಎಮ್.ಸಿ ಅಧ್ಯಕ್ಷರು ಸದಸ್ಯರು ಅಭಿನಂದಿಸಿದ್ದಾರೆ.

Related posts: