RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ಮಾನವೀಯ ಸಂಬಂಧಗಳನ್ನು ಬೆಸೆಯುವಲ್ಲಿ ಸಾಹಿತ್ಯದ ಪಾತ್ರ ಬಹು ಮುಖ್ಯವಾಗಿದೆ : ವಸಂತರಾವ್ ಕುಲಕರ್ಣಿ

ಗೋಕಾಕ:ಮಾನವೀಯ ಸಂಬಂಧಗಳನ್ನು ಬೆಸೆಯುವಲ್ಲಿ ಸಾಹಿತ್ಯದ ಪಾತ್ರ ಬಹು ಮುಖ್ಯವಾಗಿದೆ : ವಸಂತರಾವ್ ಕುಲಕರ್ಣಿ 

ಮಾನವೀಯ ಸಂಬಂಧಗಳನ್ನು ಬೆಸೆಯುವಲ್ಲಿ ಸಾಹಿತ್ಯದ ಪಾತ್ರ ಬಹು ಮುಖ್ಯವಾಗಿದೆ : ವಸಂತರಾವ್ ಕುಲಕರ್ಣಿ

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 3 : 

 

 

 

ನಾಡು , ನುಡಿಯನ್ನು ಗಟ್ಟಿಗೊಳಿಸುವಲ್ಲಿ ಮತ್ತು ಮಾನವೀಯ ಸಂಬಂಧಗಳನ್ನು ಬೆಸೆಯುವಲ್ಲಿ ಸಾಹಿತ್ಯದ ಪಾತ್ರ ಬಹು ಮುಖ್ಯವಾದದು, ಮಾನವೀಯ ಮೌಲ್ಯವನ್ನು ಬೆಳೆಸುವಂತಹ ಸಾಹಿತ್ಯದ ಅವಶ್ಯಕತೆ ಇದೆ, ಎಂದು ಹಿರಿಯ ಚಿಂತಕ ಸಾಹಿತಿ ವಸಂತರಾವ್ ಕುಲಕರ್ಣಿ ಹೇಳಿದರು.
ಅವರು ನಗರದ ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯದಲ್ಲಿ ರವಿವಾರದಂದು ಮಕ್ಕಳ ಸಾಹಿತಿ ಲಕ್ಷ್ಮಣ ಚೌರಿಯವರ ಒತ್ತಕ್ಷರ ವಿಲ್ಲದ ಕಥಾ ಸಂಕಲನ ಕೃತಿ “ಚೌರಿಶನ ಕಥೆಗಳು” ವಿಶ್ವ ದಾಖಲೆ ಪಡೆದಿರುವ ನಿಮಿತ್ಯ ಗೋಕಾವಿ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಆತ್ಮಿಯ ಅಭಿನಂದನ ಸಮಾರಂಭದ ಅಧ್ಯಕ್ಷತೆ ವಹಿಸಿ  ಅವರು   ಮಾತನಾಡಿದರು.
ಪ್ರಾಧ್ಯಾಪಕ ಸುರೇಶ ಮುದ್ದಾರ ಕೃತಿ ಪರಿಚಯಿಸಿ ಮಕ್ಕಳ ಸಾಹಿತ್ಯದ ಈ ಕೃತಿಯು ಉತ್ಕುಷ್ಟ ಮೌಲ್ಯದಿಂದ ಕೂಡಿದ್ದು, ಮಗುವಾಗಿಯೇ ಈ ಪುಸ್ತಕವನ್ನು ಓದಿದರೆ ಇದರ ಮಹತ್ವ ಅರಿವಾದೀತು, ಮತ್ತು ಇಂದಿನ ಮಕ್ಕಳಿಗೆ ನೀತಿ ಪರಿಸರ ಪ್ರಜ್ಞೆ ಸಾಮಾಜಿಕ ಸಂಬಂಧಗಳನ್ನು ಬೆಸುಗೆ ಹಾಕುವ ಕೆಲಸವನ್ನು ಈ ಕೃತಿ ಸಾರುತ್ತದೆ ಎಂದರು.
ಕೃತಿಕಾರ ಲಕ್ಷ್ಮಣ ಚೌರಿ ಇದೊಂದು ಪ್ರಯೋಗಾತ್ಮಕ ಕೃತಿಯನ್ನಾಗಿ ಬರೆದದ್ದು, ವಿಮರ್ಶಕರು ಈ ಪುಸ್ತಕವನ್ನು ಪರಿಶೀಲಿಸುವ ಅವಶ್ಯಕತೆಯಿದೆ ಎಂದರು.
ಡಾ ಸುರೇಶ ಹನಗಂಡಿ ಅಭಿನಂದನ ನುಡಿಯಾಡಿದರು. ಪ್ರೊ, ಮಹಾನಂದ ಪಾಟೀಲ ಸ್ವಾಗತಿಸಿದರು, ಪ್ರಾ, ಜಯಾನಂದ ಮಾದರ ಪರಿಚಯಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಲೀಲಾ ಪಾಟೀಲ ನಿರೂಪಿಸಿದರು. ಪ್ರೊ,ವಿದ್ಯಾ ರೆಡ್ಡಿ ವಂದಿಸಿದರು, ಉದ್ದಣ್ಣಾ ಗೋಡೇರ ಪ್ರಾರ್ಥಿಸಿದರು.

ಡಾ. ದಾ.ರಾ ಬೇಂದ್ರೆ ಜನ್ಮದಿನದ ನಿಮಿತ್ಯ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ, ಭಾವಚಿತ್ರ ಪೇಂಟಿಂಗ್ ಸ್ಪರ್ಧೆಯ ವಿಜೇತ ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯದ ಕಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಪುಷ್ಪಾ ಮುರಗೋಡ ಬಲದೇವ ಸಣ್ಣಕ್ಕಿ ಬಿ,ಬಿ,ಪಟಗುಂದಿ ಮಲ್ಲಮ್ಮ ದಳವಾಯಿ ಬಸವರಾಜ ಮುರಗೋಡ ವಿಜಯ ಮುಂಗರವಾಡಿ ಪ್ರೋ, ವಾಲೀಕಾರ ಮಂಜು ಗೊರಗುದ್ದಿ ಉಪಸ್ಥಿತರಿದ್ದರು.

Related posts: