RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಮಕ್ಕಳೊಂದಿಗೆ ಚಿನ್ನಿಪನ್ನಿ ಆಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ‌.ಬಿ.ಬಳಗಾರ

ಗೋಕಾಕ:ಮಕ್ಕಳೊಂದಿಗೆ ಚಿನ್ನಿಪನ್ನಿ ಆಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ‌.ಬಿ.ಬಳಗಾರ 

ಮಕ್ಕಳೊಂದಿಗೆ ಚಿನ್ನಿಪನ್ನಿ ಆಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ‌.ಬಿ.ಬಳಗಾರ

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 22 :

 

ಶೈಕ್ಷಣಿಕ ಪ್ರಗತಿ ಪರಿಶೀಲಿಸಲು ಶಾಲೆಗಳಿಗೆ ಭಾರತೀಯ ಬೇಟಿ ನೀಡಿದ ಗೋಕಾಕ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ವಿದ್ಯಾರ್ಥಿಗಳೊಂದಿಗೆ ಚಿನ್ನಿಪನ್ನಿ ಆಡಿ ಸುದ್ದಿಯಾಗಿದ್ದಾರೆ

ಶನಿವಾರದಂದು ಗೋಕಾಕ ವಲಯದ ಗಡ್ಡಿಹೊಳಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಬೇಟಿನೀಡಿದ ಸಂದರ್ಭದಲ್ಲಿ ಶಾಲಾ ಮೈದಾನದಲ್ಲಿ ವಿದ್ಯಾರ್ಥಿಗಳು ಪೀಟ್ ಇಂಡಿಯಾ ಅಂಗವಾಗಿ ಚಿನ್ನಿಪನ್ನಿ ಆಡುತ್ತಿದ್ದ ಸಂದರ್ಭದಲ್ಲಿ ಬಿಇಒ ಜಿ‌.ಬಿ.ಬಳಗಾರ ಅವರು ಸಹ ಚಿನ್ನಿಪನ್ನಿ ಆಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

ಶೈಕ್ಷಣಿಕ ಪ್ರಗತಿ ಪರಿಶೀಲಿಸುವ ಮೊದಲು ಮಕ್ಕಳೊಂದಿಗೆ ಸುಮಾರು 20 ನಿಮಿಷಗಳ ಕಾಲ ಸ್ವತಃ ತಾನು ಚಿನ್ನಿಪನ್ನಿ ಹಿಡಿದು ಆಟವಾಡಿ ಮಕ್ಕಳಿಗೆ ಪ್ರೇರಣೆಯಾಗಿದ್ದಾರೆ ಬಿಇಒ ಅವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಸಾಕಷ್ಟು ಕಾಮೆಂಟಗಳು ವ್ಯಕ್ತವಾಗಿವೆ. ಬಿಇಒ ಅವರ ಆಟಕ್ಕೆ ಮುಖ್ಯೋಪಾಧ್ಯಾಯ ಗೋಪಾಲ ಮಾಳಗಿ ಸಾಥ್ ನೀಡಿದ್ದಾರೆ. ಬಿಇಒ ಬಳಗಾರ ಅವರು ಆಟಕ್ಕೆ ಇಳಿಯುತ್ತಿದ್ದಂತೆ ಭಾರಿ ಉತ್ಸಾಹದಿಂದ ಆಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಬಿಇಒ ಸಾಹೇಬರಿಗೆ ಆಟದ ನಿಯಮಗಳನ್ನು ಹೇಳಿ ಋಷಿ ಪಟ್ಟರು

ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿ ಕೊಂಡಾಗಿನಿಂದಲೂ ಸಹ ಹಲವಾರು ರಚನಾತ್ಮಕ ಕಾರ್ಯಗಳನ್ನು ಮಾಡಿ ಶಿಕ್ಷಕ ಮತ್ತು ಮಕ್ಕಳ ಪ್ರೀತಿಗೆ ಪಾತ್ರರಾಗಿದ್ದಾರೆ

Related posts: