RNI NO. KARKAN/2006/27779|Thursday, October 16, 2025
You are here: Home » breaking news » ಗೋಕಾಕ:ಕ್ಷೇತ್ರದಲ್ಲಿ ಕೈಗಾರಿಕ ಉದ್ಯಮಕ್ಕೆ ಹೆಚ್ಚಿನ ಮಹತ್ವ ನೀಡಿ ಉದ್ಯೋಗ ಅವಕಾಶ ಕಲ್ಪಿಸಲು ಯೋಜನೆಗಳನ್ನು ಸಿದ್ದಪಡಿಸಲಾಗುತ್ತಿದೆ : ಶಾಸಕ ರಮೇಶ

ಗೋಕಾಕ:ಕ್ಷೇತ್ರದಲ್ಲಿ ಕೈಗಾರಿಕ ಉದ್ಯಮಕ್ಕೆ ಹೆಚ್ಚಿನ ಮಹತ್ವ ನೀಡಿ ಉದ್ಯೋಗ ಅವಕಾಶ ಕಲ್ಪಿಸಲು ಯೋಜನೆಗಳನ್ನು ಸಿದ್ದಪಡಿಸಲಾಗುತ್ತಿದೆ : ಶಾಸಕ ರಮೇಶ 

ಕ್ಷೇತ್ರದಲ್ಲಿ ಕೈಗಾರಿಕ ಉದ್ಯಮಕ್ಕೆ ಹೆಚ್ಚಿನ ಮಹತ್ವ ನೀಡಿ ಉದ್ಯೋಗ ಅವಕಾಶ ಕಲ್ಪಿಸಲು ಯೋಜನೆಗಳನ್ನು ಸಿದ್ದಪಡಿಸಲಾಗುತ್ತಿದೆ : ಶಾಸಕ ರಮೇಶ

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 21 :

 

ಕ್ಷೇತ್ರದಲ್ಲಿ ಕೈಗಾರಿಕ ಉದ್ಯಮಕ್ಕೆ ಹೆಚ್ಚಿನ ಮಹತ್ವ ನೀಡಿ ಉದ್ಯೋಗ ಅವಕಾಶ ಕಲ್ಪಿಸಲು ಯೋಜನೆಗಳನ್ನು ಸಿದ್ದಪಡಿಸಲಾಗುತ್ತಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಶನಿವಾರದಂದು ನಗರದ ಕೈಗಾರಿಕ ಪ್ರದೇಶದಲ್ಲಿ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದಿ ನಿಗಮದಿಂದ 1.12 ಕೋಟಿ ರೂಗಳ ವೆಚ್ಚದಲ್ಲಿ ಅಡ್ಡ ರಸ್ತೆಗಳ ಡಾಂಬರಿಕರಣ, ಚರಂಡಿ ಹಾಗೂ ಬೀದಿ ದೀಪಗಳ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ಷೇತ್ರದ ಶಿವಾಪೂರ(ಕೊ) ಗ್ರಾಮದಲ್ಲಿ ಸುಮಾರು 400 ಎಕರೆ ಪ್ರದೇಶವನ್ನು ಕೈಗಾರಿಕಾ ಉದ್ದಿಮೆಯನ್ನು ಸ್ಥಾಪಿಸಲು ಯೋಜನೆಯನ್ನು ಸಿದ್ದಪಡಿಸಲಾಗಿದ್ದು, ಶೀಘ್ರದಲ್ಲಿಯೇ ಅದನ್ನು ಕಾರ್ಯಗತಗೊಳಿಸಿ ಈ ಭಾಗದ ಉದ್ದಿಮೆದಾರರಿಗೂ ಹಾಗೂ ಯುವ ಜನತೆಗೆ ಉದ್ಯೋಗ ಕಲ್ಪಿಸಲಾಗುವುದು. ಇನ್ನೂ ಹಲವಾರು ಹೊಸ-ಹೊಸ ಯೋಜನೆಗಳೊಂದಿಗೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಎಸ್.ವಿ.ದೇಮಶೆಟ್ಟಿ, ಮುಖಂಡರುಗಳಾದ ಸಿದ್ದಲಿಂಗ ದಳವಾಯಿ, ಶಾಮಾನಂದ ಪೂಜೇರಿ, ದುರ್ಗಪ್ಪ ಶಾಸ್ತ್ರಿಗೊಲ್ಲರ, ಜ್ಯೋತಿಭಾ ಸುಭಂಜಿ, ಚಿದಾನಂದ ದೇಮಶೆಟ್ಟಿ, ಬಸವಂತ ದಾಸನವರ, ಚಂದ್ರಕಾಂತ ಈಳಿಗೇರ, ನಗರಸಭೆ ಸದಸ್ಯರಾದ ಗಿರೀಶ ಖೋತ, ಜಯಾನಂದ ಹುಣಶ್ಯಾಳ, ಹರೀಶ ಬೂದಿಹಾಳ, ಸಿದ್ದಪ್ಪ ಹುಚ್ಚರಾಯಪ್ಪಗೋಳ, ಶ್ರೀಶೈಲ ಯಕ್ಕುಂಡಿ ಗುತ್ತಿಗೆದಾರರಾದ ಹಣಮಂತ ದಾಸನ್ನವರ, ಕಲ್ಲಪ್ಪ ಇಟ್ನಾಳ, ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ಜಿ.ಕೆ.ಕುಲಕರ್ಣಿ ಸೇರಿದಂತೆ ಅನೇಕರು ಇದ್ದರು.

Related posts: