RNI NO. KARKAN/2006/27779|Wednesday, October 15, 2025
You are here: Home » breaking news » ಘಟಪ್ರಭಾ:ಎಲ್ಲ ದಾನಗಳಲ್ಲಿ ರಕ್ತದಾನ ಶ್ರೇಷ್ಠವಾದದ್ದು : ಭೀಮಶಿ ಬಿರನಾಳಿ

ಘಟಪ್ರಭಾ:ಎಲ್ಲ ದಾನಗಳಲ್ಲಿ ರಕ್ತದಾನ ಶ್ರೇಷ್ಠವಾದದ್ದು : ಭೀಮಶಿ ಬಿರನಾಳಿ 

ಎಲ್ಲ ದಾನಗಳಲ್ಲಿ ರಕ್ತದಾನ ಶ್ರೇಷ್ಠವಾದದ್ದು : ಭೀಮಶಿ ಬಿರನಾಳಿ

 

 

ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಡಿ 11 :

 

 

ಎಲ್ಲ ದಾನಗಳಲ್ಲಿ ರಕ್ತ ದಾನ ಶ್ರೇಷ್ಠವಾಗಿದೆ ಎಂದು ಗ್ರಾ.ಪಂ ಸದಸ್ಯ ಭೀಮಶಿ ಬಿರನಾಳಿ ಹೇಳಿದರು.
ಅವರು ಸಮೀಪದ ಶಿಂದಿಕುರಬೇಟ ಗ್ರಾಮದಲ್ಲಿ ಶ್ರೀ ಹನುಮಾನ ದೇವರ ಕಾರ್ತೀಕೋತ್ಸವ ನಿಮಿತ್ಯ ಸ್ವಯಂ ಪ್ರೇರಿತ ರಕ್ತದಾನ ಶಿಬಿರದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಯುವಕರು ಶ್ರೀ ಹನುಮಾನ ದೇವರ ಕಾರ್ತೀಕೋತ್ಸವ ನಿಮಿತ್ಯ ರಕ್ತದಾನ ಶಿಬಿರ ಆಯೋಜನೆ ಮಾಡಿದ್ದು ಶ್ಲಾಘನೀಯವಾಗಿದೆ. ರಕ್ತದಾನ ಮಹಾದಾನ ರಕ್ತದಾನ ಮಾಡಿ ಜೀವ ಉಳಿಸಿ, ರಕ್ತದಾನವು ಒಂದು ಪುಣ್ಯದ ಕಾರ್ಯವಾಗಿದೆ ಎಂದರು.
ಶ್ರೀ ಹನುಮಾನ ದೇವರ ದೇವಸ್ಥಾನದಲ್ಲಿ ರೋಟರಿ ಸೇವಾ ಸಂಘದ ಡಾ: ಬಿ.ಸಿ.ಆಜರಿ ಸ್ಮರಣಾರ್ಥ ರೋಟರಿ ರಕ್ತ ಭಂಡಾರ ಗೋಕಾಕ ಇವರ ಆಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ವಿಠ್ಠಲ ದೇವರ ದೇವ ಋಷಿ ಮುರೆಪ್ಪ ಪೂಜೇರಿ ವಹಿಸಿದ್ದರು. ಶಿಕ್ಷಕ ಎಸ್.ಆರ್.ತರಾಳ, ವಿಠ್ಠಲ ಕರೋಶಿ, ರೋಟರಿ ಸಿಬ್ಬಂದಿಗಳಾದ ವಿನೋದ ಸುಪಲಿ, ಮಹಾದೇವ ಕುಂಬಾರ, ಸಂಘಟಕರಾದ ಮಹೇಶ ಕಾಳ್ಯಾಗೋಳ, ನಾಗಪ್ಪ ವಾಸೇದಾರ, ಗೋವಿಂದ ಪೂಜೇರಿ, ಮಂಜುನಾಥ ಯಲ್ಲಟ್ಟಿ, ಹರೀಶ ಪತ್ತಾರ, ನಾರಾಯಣ ಕದಂ, ಶಿವಾನಂದ ಬೆಳಗಲಿ, ಮಹೇಶ ದೇವಮಾನೆ ಸೇರಿದಂತೆ ಇತರರು ಇದ್ದರು.
ರಕ್ತದಾನ ಶಿಬಿರದಲ್ಲಿ 55 ಜನ ಯುವಕರು ರಕ್ತದಾನ ಮಾಡಿದರು.

Related posts: