ಗೋಕಾಕ:ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರಿಗೆ ಎಲ್ಲ ಜಮಾತಗಳ ಬೆಂಬಲ

ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರಿಗೆ ಎಲ್ಲ ಜಮಾತಗಳ ಬೆಂಬಲ
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ನ 27 :
ನಗರದ ಬೆಲ್ಲದ ಪೇಟೆಯಲ್ಲಿ ಮುಸ್ಲೀಂ ಜಮಾತಗಳೊಂದಿಗೆ ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ ಅವರು ನಡೆಸಿದ ಪ್ರಚಾರ ಸಭೆಯಲ್ಲಿ ಗೋಕಾಕ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರಿಗೆ ಎಲ್ಲ ಜಮಾತಗಳು ಬೆಂಬಲ ಸೂಚಿಸಿದರು.
ಬುಧವಾರ ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ಥಳೀಯ ಜಾಮೀಯಾ ಮಸ್ಜಿದ, ಮಹ್ಮದಿಯಾ ಮಸ್ಜಿದ, ನೂರಾನಿ ಮಸ್ಜಿದ, ಮದೀನಾ ಮಸ್ಜಿದ, ಕುರೇಶ ಜಮಾತ ಹಾಗೂ ಬಾಗವಾನ ಜಮಾತಗಳ ಆಧÀ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸದಸ್ಯರು ಭಾಗವಹಿಸಿ ಗೋಕಾಕ ಮತಕ್ಷೆತ್ರದ ಬಿಜೆಪಿ ಅಭ್ಯರ್ಥಿಯಾದ ರಮೇಶ ಜಾರಕಿಹೋಳಿಗೆ ಬೆಂಬಲ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಸ್ಲಿಂ ಸಮಾಜದ ಅನೇಕ ಮುಖಂಡರು, ಶಾಸಕ ರಮೇಶ ಜಾರಕಿಹೊಳಿ ಅವರು ಸಮಾಜದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸುವ ಜೊತೆಗೆ ಪಟ್ಟಣದ ಎಲ್ಲ ಜಮಾತಗಳ ಸದಸ್ಯರೊಂದಿಗೆ ಉತ್ತಮ ಸಂಬಂಧÀವನ್ನು ಹೊಂದಿದ್ದಾರೆ. ಅವರು ಯಾವುದೇ ಪಾರ್ಟಿಯಲ್ಲಿದ್ದರೂ ಸಹ ನÀಮಗೆ ವ್ಯಕ್ತಿ ಮುಖ್ಯವಾಗಿದ್ದರಿಂದ ನಾವು ರಮೇಶ ಜಾರಕಿಹೊಳಿ ಅವರಿಗೆ ಬೆಂಬಲಿಸಿ ಪ್ರಚಂಡ ಬಹುಮತದಿಂದ ಆರಸಿಕೊಡುವದಾಗಿ ಭರವಸೆ ನೀಡಿದರು.
ಸಭೆಯನ್ನದ್ದೇಶಿಸಿ ಮಾತನಾಡಿದ ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ, ಪಟ್ಟಣದ ಎಲ್ಲ ಸಮಾಜದವರಿಗೆ ಸಹಕಾರ ನೀಡಿದ್ದೇವೆ. ತಮ್ಮ ಎಲ್ಲ ಅಶೋತ್ತರಗಳಿಗೆ ಸ್ಪಂದಿಸುವದಾಗಿ ಹೇಳಿ ಈ ಬಾರಿ ರಮೇಶ ಜಾರಕಿಹೋಳಿಯವರನ್ನು ಪ್ರಚಂಡ ಬಹುಮತದಿಂದ ಆರಿಸಿ ತರಬೇಕಾಗಿ ಕೇಳಿಕೊಂಡರು.
ಈ ಸಂದರ್ಭದಲ್ಲಿ ಹಿರಿಯರಾದ ಡಿ.ಎಮ್.ದಳವಾಯಿ, ಜಿ.ಎಸ್.ರಜಪೂತ, ಸುರೇಶ ಕಾಡದವರ, ಸುದೀರ ಜೋಡಟ್ಟಿ, ರಾಮಪ್ಪ ತುಕ್ಕಾನಟ್ಟಿ, ಈಶ್ವರ ಮಟಗಾರ, ಶಿವುಪುತ್ರ ಕೊಗನೂರ, ಭರಮು ಹುಲ್ಲೋಳ್ಳಿ, ಸುರೇಶ ಪೂಜೇರಿ ಮುಸ್ಲಿಂ ಸಮಾಜದ ಹಿರಿಯರಾದ ನೂರಹ್ಮದ ಪೀರಜಾದೆ, ಯೂನುಸ ಶೇಖ, ಫಯಾಜ ಶೇಖ, ಗೌಸ ಬಾಗವಾನ, ಬಾದಶಾ ಸಯ್ಯದ, ಶಬ್ಬಿರ ಜಮಖಂಡಿ, ಮೊಹ್ಮದ ಮುಜಾವರ, ಕುತಬುದಿನ್ ಕಡಲಗಿ, ಮೌಲಾಲಿ ಬಾಗವಾನ, ಜಹಾಂಗೀರ ಬಾಗವಾನ, ದೌಲತ ದೇಸಾಯಿ, ಮೊಹ್ಮದ ಮೋಮಿನ, ರಜಾಕ ಚೌಧರಿ, ದಾದು ಬೇಪಾರಿ, ಸರಫರಾಜ ಬಾಗವಾನ, ರಶೀದ ಚೌಧರಿ, ಹಸನ ಇಂಗಳೆ, ಜಮಾಲ ಸಯ್ಯದ, ದಿಲಾವರ ಬಾಳೇಕುಂದ್ರಿ, ಜುಬೇರ ಡಾಂಗೆ, ಪ.ಪಂ ಸದಸ್ಯರಾದ ಸಲೀಮ ಕಬ್ಬೂರ, ಇಮ್ರಾನ ಬಟಕುರ್ಕಿ, ಗಂಗಾದರ ಬಡಕುಂದ್ರಿ, ಮಲ್ಲು ಕೋಳಿ, ನಾಗರಾಜ ಚಚಡಿ, ಪ್ರವೀನ ಮಟಗಾರ, ಉಪಸ್ಥಿತರಿದ್ದರು.