ಗೋಕಾಕ:ಪ್ರವಾಹ ಪೀಡಿತ ವಿದ್ಯಾರ್ಥಿಗಳಿಗೆ ನೋಟ್ ಬುಕ್ಕ ,ಸ್ಕೂಲ್ ಬ್ಯಾಗ್ ವಿತರಣೆ

ಪ್ರವಾಹ ಪೀಡಿತ ವಿದ್ಯಾರ್ಥಿಗಳಿಗೆ ನೋಟ್ ಬುಕ್ಕ ,ಸ್ಕೂಲ್ ಬ್ಯಾಗ್ ವಿತರಣೆ
ನಮ್ಮ ಬೆಳಗಾವಿ ಇ – ವಾರ್ತೆ ಗೋಕಾಕ ಸೆ 24 :
ನೆರೆ ಹಾವಳಿಯಿಂದ ಎಲ್ಲವನ್ನು ಕಳೆದುಕೊಂಡ ಪ್ರವಾಹ ಪೀಡಿತ ವಿದ್ಯಾರ್ಥಿಗಳಿಗೆ ಇಲ್ಲಿಯ ದಿವಂಗತ ಕುಮಾರಿ ದೀಪಾ ಎಮ್.ನಾಯ್ಕರ ಸೇವಾ ಸಮಿತಿ ಮತ್ತು ಗೋಕಾಕ ಗೆಳೆಯರ ಬಳಗ ಇವರ ಸಹಯೋಗದಲ್ಲಿ ನೋಟ್ ಬುಕ್ಕ ,ಸ್ಕೂಲ್ ಬ್ಯಾಗ್ ವಿತರಿಸಲಾಯಿತು.
ಮಂಗಳವಾರದಂದು ನಗರದ ಫಾತಿಮಾ ಹೈಸ್ಕೂಲ್ ಮತ್ತು ಕ್ರೆಷ್ಟನ್ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋಕಾಕಿನ ಕನ್ನಡ ಗಂಡು ಮಕ್ಕಳ ಶಾಲೆ , ಯುಬಿಎಸ್ ಶಾಲೆ ,ಯುಜಿಎಸ್ ಶಾಲೆ ಸೇರಿದಂತೆ ಸುಮಾರು 7 ಕ್ಕೂ ಹೆಚ್ಚು ಖಾಸಗಿ ಶಾಲೆಗಳ ಸುಮಾರು 1000 ಮಕ್ಕಳಿಗೆ ನೋಟ್ ಬುಕ್ಕ, ಬ್ಯಾಗಗಳನ್ನು ವಿತರಿಸಲಾಯಿತು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸಮಿತಿಯ ಮುಖಂಡ ಸಂತೋಷ ನಾಯ್ಕರ ಭಾವೈಕತೆಗೆ ಹೆಸರಾಗಿರುವ ಗೋಕಾಕ ನಗರ ಪ್ರಕೃತಿ ವಿಕೋಪಕ್ಕೆ ಸಿಲುಕಿ ಜನ ಜೀವನ ಅಸ್ತವ್ಯಸ್ತ ಮಾಡಿ ಎಲ್ಲವನ್ನು ಹಾನಿಮಾಡಿರುವದು ನಂಬಲು ಸಾಧ್ಯವಿಲ್ಲ. ಪ್ರವಾಹಕ್ಕೆ ತುತ್ತಾಗಿರುವ ಎಲ್ಲರನ್ನು ಸಂತೈಸಿ ಮತ್ತೆ ಅವರು ಜೀವನ ಕಟ್ಟಿಕೋಳ್ಳಲು ನಾವೆಲ್ಲರು ಸಹಾಯ ಸಹಕಾರ ನೀಡಬೇಕಾಗಿದೆ ಆ ದಿಸೆಯಲ್ಲಿ ದಿ.ಕುಮಾರಿ ದೀಪಾ ನಾಯ್ಕರ ಸೇವಾ ಸಮಿತಿಯಿಂದ ವಿದ್ಯಾರ್ಥಿಗಳು ನೋಟ್ ಬುಕ್ ಬ್ಯಾಗಗಳನ್ನು ವಿತರಿಸಲಾಗುತ್ತಿದೆ ಇದರ ಸದುಪಯೋಗ ಪಡೆದು ವಿದ್ಯಾರ್ಥಿಗಳು ಚನ್ನಾಗಿ ಅಭ್ಯಾಸ ಮಾಡಿ ಶಾಲೆಯ ಹೆಸರು ಹೆಚ್ಚಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮವನ್ನು ಸಿ.ಆರ್.ಪಿ ಎನ್.ಎಮ್.ಮುಲ್ಲಾ ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಜು ಜಾಧವ ,ಮುಸ್ತಾಕ ಖಂಡಾಯತ,ಮಹೇಶ ಗಣಾಚಾರಿ,ರಫೀಕ ಮುಲ್ಲಾ, ಸಮೀ ತೇರದಾಳ,ಪ್ರಕಾಶ ಬಾಗಲಿ,ರಫೀಕ ಮೋಮಿನ, ಮಸೂದ ಬಾಳಪ್ರವೇಶ, ಸಲ್ಲಿಂ ಮುಲ್ಲಾ, ಶಬ್ಬಿರ ಮುಧೋಳ, ಬೀಮಶಿ ಮೊರೆ, ದಸ್ತಗಿರಿ ಬಾಳಪ್ರವೇಶ,ಮಲ್ಲಿಕ ಮುಲ್ಲಾ ಶಿಕ್ಷಕರುಗಳಾದ ಕೆ.ಎಮ್ ಬೇಗ್, ಎನ್.ಎನ್.ಕಮನಾ,ಆರ್.ಎಚ್.ಸೈಯದ್, ವಾಯ್.ಎ.ಮೋಕಾಶಿ,ಎಮ್.ಜೆ.ಮುಲ್ಲಾ ಸೇರಿದಂತೆ ಅನೇಕರು ಇದ್ದರು