RNI NO. KARKAN/2006/27779|Monday, April 29, 2024
You are here: Home » breaking news » ಬೆಳಗಾವಿ:ಗೋಕಾಕದಲ್ಲಿಯ ದಬ್ಬಾಳಿಕೆ ಸಂಸ್ಕೃತಿ ಬೇರೆ ಕ್ಷೇತ್ರಗಳಲ್ಲಿ ವಿಸ್ತರಣೆಗೋಳಲು ಅವಕಾಶ ನೀಡಬೇಡಿ : ಬಿಜೆಪಿ ಮುಖಂಡ ಆಶೋಕ ಪೂಜಾರಿ

ಬೆಳಗಾವಿ:ಗೋಕಾಕದಲ್ಲಿಯ ದಬ್ಬಾಳಿಕೆ ಸಂಸ್ಕೃತಿ ಬೇರೆ ಕ್ಷೇತ್ರಗಳಲ್ಲಿ ವಿಸ್ತರಣೆಗೋಳಲು ಅವಕಾಶ ನೀಡಬೇಡಿ : ಬಿಜೆಪಿ ಮುಖಂಡ ಆಶೋಕ ಪೂಜಾರಿ 

ಗೋಕಾಕದಲ್ಲಿಯ ದಬ್ಬಾಳಿಕೆ ಸಂಸ್ಕೃತಿ ಬೇರೆ ಕ್ಷೇತ್ರಗಳಲ್ಲಿ ವಿಸ್ತರಣೆಗೋಳಲು ಅವಕಾಶ ನೀಡಬೇಡಿ : ಬಿಜೆಪಿ ಮುಖಂಡ ಆಶೋಕ ಪೂಜಾರಿ

ಬೆಳಗಾವಿ ಜು 17: ಗೋಕಾಕನಲ್ಲಿ ನಡೆಯುತ್ತಿರುವ ಹಣ ಮತ್ತು ತೋಳಬಲ ರಾಜಕಾರಣ ಯಮಕನಮರಡಿ ಸೇರಿ ಇತರ ಕ್ಷೇತ್ರದಲ್ಲಿ ವಿಸ್ತರಣೆ ಗೋಳಲು ಜನರು ಅವಕಾಶ ನೀಡ ಬಾರದು ಎಂದು ಬಿಜೆಪಿ ಮುಖಂಡ ಅಶೋಕ ಪೂಜಾರಿ ಹೇಳಿದರು .

ನಗದರ ಸಾಹಿತ್ಯ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಅವರು ಜನರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಮತ್ತು ರಾಜಕೀಯ ವ್ಯವಸ್ಥೆ ಯಮಕನಮರಡಿಗೆ ಬರಬಾರದು ಎಂದು ಸ್ವತಃ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಸತೀಶ ಅವರೇ ಹೇಳುತ್ತಿದ್ದಾರೆ ಎಂದ ಅಶೋಕ ಪೂಜಾರಿ ಗೋಕಾಕದಲ್ಲಿ ತೋಳ್ಬಲ ಮತ್ತು ಹಣ ಬಲ ಬಳಸಿಕೊಂಡು ಚುನಾವಣೆಯಲ್ಲಿ ಅಕ್ರಮ ನಡಸಿ ಗೆದ್ದು ಬರುತ್ತಿದ್ದಾರೆ.

ಚುನಾವಣಾ ಆಯೋಗ ಆಧಾರ್ ಸಂಖ್ಯೆಯನ್ನು ವೋಟರ ಐಡಿ ಜತೆ ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿ ಬರುವ ಜು. 20 ರಂದು ಸಾಂಕೇತಿಕ ಧರಣಿ ನಡೆಸಿ ಗೋಕಾಕದಿಂದ ನಿಯೋಗವನ್ನು ತೆಗೆದುಕೊಂಡು ಹೋಗಿ ಕೇಂದ್ರ ಚುನಾವಣಾ ಆಯೋಗಕ್ಕೆ ಒತ್ತಾಯ ಮಾಡಲಾಗುವುದು ಎಂದರು.

ಡಾ.ಎ.ವೈ ಪಂಗನ್ನವರ ಮಾತನಾಡಿ ಆಧಾರ್ ಲಿಂಕ್
ಮಾಡುವದರಿಂದ ಚುನಾವಣೆಯಲ್ಲಿ ಅಕ್ರಮ ತಡೆಯಲು ಸಹಕಾರಿ ಯಾಗುತ್ತದೆ ಹಣಬಲ ಮತ್ತು ತೊಳ್ಬಲದಿಂದ ಆಯ್ಕೆಯಾಗುತ್ತಿರುವ ವ್ಯಕ್ತಿಗಳನ್ನು ತಡೆಯಲು ಸಾಧ್ಯ ಆಗುತ್ತದೆ. ಭೂತಮಟ್ಟದ ಮತ ಏಣಿಕೆ ಮಾಡುವುದರಿಂದ ಜನರು ಒಂದು ಪಕ್ಷದ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಹೀಗಾಗಿ ಭೂತ ಏಣಿಕೆ ಕೈ ಬಿಟ್ಟು ಹೊಸ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ಮಾಜಿ ಜಿಪಂ. ಅಧ್ಯಕ್ಷ ಈರಣ್ಣಾ ಕಡಾಡಿ ಮಾತನಾಡಿ ಚುನಾವಣೆ ನಡೆಯುವ ಹಿಂದಿನ ದಿನದವರೆಗೂ ಮತದಾರರ ಪಟ್ಟಿಗೆ ಸೇರ್ಪಡೆಗೆ ಅವಕಾಶ ಇರುವುದರಿಂದ ಪ್ರಭಾವಿ ವ್ಯಕ್ತಿಗಳು ದುರಪಯೋಗ ಮಾಡಿಕೊಳ್ಳುತ್ತಿದ್ದಾರೆ ಇದನ್ನು ಚುನಾವಣಾ ಆಯೋಗ ತಡೆಯಬೇಕು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅರವಿಂದ ದಳವಾಯಿ, ಎಂ. ಟಿ. ಪಾಟೀಲ, ಈಶ್ವರ ಕಟ್ಟಿ, ಈರಣ್ಣಾ ಅಂಗಡಿ, ಎಂ.ಟಿ.ಪಾಟೀಲ ಮತ್ತಿತರರು ಉಪಸ್ಥಿತರಿದ್ದರು

Related posts: