ಘಟಪ್ರಭಾ:ವಿವಿಧ ಕಾಮಗಾರಿಗಳಿಗೆ ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ ಅವರಿಂದ ಚಾಲನೆ

ವಿವಿಧ ಕಾಮಗಾರಿಗಳಿಗೆ ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ ಅವರಿಂದ ಚಾಲನೆ
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಜು 3 :
ಸಮೀಪದ ಪಾಮಲದಿನ್ನಿ ಗ್ರಾಮದಲ್ಲಿ ರಾಜೀವ ಗಾಂಧಿ ಸೇವಾ ಕೇಂದ್ರ ಕಟ್ಟಡ ನಿರ್ಮಾಣದ ಅಡಿಗಲ್ಲು ಸಮಾರಂಭವನ್ನು ಗೋಕಾಕ ಶಾಸಕಕರಾದ ರಮೇಶ ಜಾರಕಿಹೊಳಿ ಇವರ ಅನುಪಸ್ತಿಯಲ್ಲಿ ಕಾರ್ಮಿಕ ಮುಖಂಡರಾದ ಅಂಬಿರಾವ್ ಪಾಟೀಲ ಬುಧವಾರ ನೆರೆವೇರಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದ ಅವರು ಸರ್ಕಾರಿ ಪ್ರೌಢ ಶಾಲೆ ಆರ್.ಎಂ.ಎಸ್.ಎ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ನೂತನ ಕಟ್ಟಡ ಹಾಗೂ ಅಟಲ್‍ಜಿ ಟೆಕ್ನಿಕಲ್ ಲ್ಯಾಬ ಮತ್ತು ಗ್ರಾಮದ ಎಸ್.ಸಿ ಕಾಲೋನಿಯ ಭಜಂತ್ರಿಗಲ್ಲಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಬಾಳವ್ವಾ ಲ.ಪ್ರದಾನಿ, ಉಪಾಧ್ಯಕ್ಷ ಲಕ್ಕಪ್ಪಾ ರಾಜಾಪೂರೆ, ಜಿ.ಪಂ ಸದಸ್ಯೆ ಮೀನಾಕ್ಷಿ ಸುಧೀರ ಜೋಡಟ್ಟಿ, ಬಿಇಓ ಅಜೀತ ಮನ್ನಿಕೇರಿ, ತಾ.ಪಂ ಸದಸ್ಯ ಸಿದ್ದವ್ವಾ ಶಂಕರ ಸಂಪಗಾರ, ಸಿದ್ಧಪ್ಪಾ ಬಂಗಿ, ವಿಠ್ಠಲ ಬಂಗಿ, ಗ್ರಾ.ಪಂ ಸರ್ವ ಸದಸ್ಯರು ಹಾಗೂ ಗ್ರಾಮದ ಹಿರಿಯರು ಗ್ರಾಮಸ್ಥರು ಪಂಚಾಯತ ಅಭೀವೃದ್ದಿ ಅಧಿಕಾರಿಗಳು, ಕಾರ್ಯದರ್ಶಿ ಹಾಗೂ ಸಿಬ್ಬಂದಿ ವರ್ಗದವರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.