ಘಟಪ್ರಭಾ:ಲಕ್ಷ್ಮೀ ಕೆಂಪ್ಪಣ್ಣಾ ಕಾಪಸಿ ಶಾಲೆಗೆ ಪ್ರಥಮ
ಲಕ್ಷ್ಮೀ ಕೆಂಪ್ಪಣ್ಣಾ ಕಾಪಸಿ ಶಾಲೆಗೆ ಪ್ರಥಮ
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಮೇ 4 :
ಸಮೀಪದ ಹುಣಶ್ಯಾಳ ಪಿ.ಜಿ ಗ್ರಾಮದ ಸರಕಾರಿ ಪ್ರೌಢ ಶಾಲೆ ವಿದ್ಯಾರ್ಥಿನಿ ಲಕ್ಷ್ಮೀ ಕಾಪಸಿ ಅವಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 586 (93.76%) ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.
ಶೃದ್ಧಾ ಮಹೇಶ ಶಿರಗೆ (585 93.6 % ), ದ್ವಿತೀಯ, ಜೋತಿ ಗಂಗಪ್ಪ ಡಬ್ಬನವರ (576 92.16%) ತೃತೀಯ ಸ್ಥಾನ ಪಡೆದುಕೊಂಡು ಶಾಲೆಗೆ ಮತ್ತು ಗ್ರಾಮಕ್ಕೆ ಕೀರ್ತಿ ತಂದು ಕೊಟ್ಟಿದ್ದಾರೆ.
ಈ ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದ, ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.