RNI NO. KARKAN/2006/27779|Friday, October 17, 2025
You are here: Home » breaking news » ಘಟಪ್ರಭಾ:ಜ್ಞಾನ ಗಂಗೋತ್ರಿ ಶಿಕ್ಷಣ ಸಂಸ್ಥೆ ವಿಧ್ಯಾರ್ಥಿಗಳ ಉಜ್ವಲ ಭವಿಷ್ಯ ನಿರ್ಧರಿಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದೆ : ಎ.ಸಿ.ಮನ್ನಿಕೇರಿ

ಘಟಪ್ರಭಾ:ಜ್ಞಾನ ಗಂಗೋತ್ರಿ ಶಿಕ್ಷಣ ಸಂಸ್ಥೆ ವಿಧ್ಯಾರ್ಥಿಗಳ ಉಜ್ವಲ ಭವಿಷ್ಯ ನಿರ್ಧರಿಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದೆ : ಎ.ಸಿ.ಮನ್ನಿಕೇರಿ 

ಜ್ಞಾನ ಗಂಗೋತ್ರಿ ಶಿಕ್ಷಣ ಸಂಸ್ಥೆ ವಿಧ್ಯಾರ್ಥಿಗಳ ಉಜ್ವಲ ಭವಿಷ್ಯ ನಿರ್ಧರಿಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದೆ : ಎ.ಸಿ.ಮನ್ನಿಕೇರಿ

 

ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಪೆ 26 :

 

ಸಮೀಪದ ರಾಜಾಪೂರ ಗ್ರಾಮದ ಜ್ಞಾನ ಗಂಗೋತ್ರಿ ಶಿಕ್ಷಣ ಸಂಸ್ಥೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಸ್ಪಂದನ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಸತ್ಕಾರ ಸ್ವೀಕರಿಸಿ ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ.ಮನ್ನಿಕೇರಿ ಮಾತನಾಡಿ ಗ್ರಾಮೀಣ ಭಾಗದ ಬಡ ಹಾಗೂ ಪ್ರತಿಭಾವಂತ ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿರುವ ಈ ಸಂಸ್ಥೆ ಸುತ್ತ ಮುತ್ತಲಿನ ಗ್ರಾಮಗಳ ವಿಧ್ಯಾರ್ಥಿಗಳ ಉಜ್ವಲ ಭವಿಷ್ಯ ನಿರ್ಧರಿಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದೆ. ಈ ಶೈಕ್ಷಣಿಕ ಸಾಲಿನ ವಿವಿಧ ಇಲಾಖಾ ಕಾರ್ಯಕ್ರಮಗಳಲ್ಲಿ ಶಾಲೆಯ ಮಕ್ಕಳು ರಾಜ್ಯ ಮಟ್ಟದವರೆಗೂ ಗೆಲುವಿನ ನಗೆ ಬೀರಿರುವು ಮೂಡಲಗಿ ವಲಯದ ಹೆಮ್ಮೆಯಾಗಿದೆ. ಮಕ್ಕಳ ಪ್ರತಿಭೆ ಹೀಗೆಯೇ ಇನ್ನಷ್ಟು ಹಬ್ಬಿ ಸಂಸ್ಥೆಯಿಂದ ಪ್ರತಿಭಾವಂತ ಮಕ್ಕಳು ಹೊರಬರಲಿ ಎಂಬ ಆಶಾ ಭಾವನೆಯನ್ನು ವ್ಯಕ್ತಪಡಿಸಿದರು.
ಗೋಕಾಕ ಟಿ.ಎ.ಪಿ.ಸಿ.ಎಂ.ಎಸ್ ಉಪಾಧ್ಯಕ್ಷ ವಿಠ್ಠಲ ಪಾಟೀಲ ಅವರು ಮಾತನಾಡಿ ನಿಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವುದು ನಿಮ್ಮೇಲ್ಲದ ಆಧ್ಯ ಕರ್ತವ್ಯ ಈ ಕರ್ತವ್ಯವನ್ನು ಎಲ್ಲ ಪಾಲಕರು ತಪ್ಪದೇ ಮಾಡಿ. ನಿಮ್ಮ ಮಕ್ಕಳನ್ನು ಒಂದು ಒಳ್ಳೆಯ ಗುಣಮಟ್ಟದ ಶಿಕ್ಷಣ ನೀಡುವಂತ ಶಾಲೆಗೆ ದಾಖಲು ಮಾಡಿ. ಇಂತಹ ಒಂದು ಒಳ್ಳೆಯ ಶಿಕ್ಷಣ ನೀಡುವಂತಹ ಕೆಲಸವನ್ನು ಜ್ಞಾನ ಗಂಗೋತ್ರಿ ಶಿಕ್ಷಣ ಸಂಸ್ಥೆ ಗ್ರಾಮೀಣ ಪ್ರದೇಶದಲ್ಲಿ ಮಾಡುತ್ತಿರುವುದು ಒಂದು ಶ್ಲಾಘನೀಯ ವಿಷಯವಾಗಿದೆ ಎಂದರು.
ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶಿವಪುತ್ರ ಲ.ಗುಂಡಪ್ಪಗೋಳ, ವಿಠ್ಠಲ್ ಪಾಟೀಲ್, ಬಸವಂತ ಕಮತಿ, ರಾಜು ಬೈರುಗೋಳ. ಬೈರಪ್ಪಾ ಯಂಕ್ಕುಂಡಿ, ಸಂಗಯ್ಯ ಹೂನೂರ, ಬಸವರಾಜ ಹೊಸೂರ, ರಾಮಂಚದ್ರ ಗುಂಡಪ್ಪಗೋಳ, ಬಸವರಾಜ ಪಂಡ್ರೋಳಿ, ಮಲಿಕ್‍ಜಾನ್ ಮುಲ್ಲಾ, ವಿನಯ ಪಾಟೀಲ, ಸಿದ್ದು ಯಕ್ಕುಂಡಿ, ಗೋಪಾಲ ಕೆಂಪವ್ವಗೋಳ, ಎಸ್.ಸಿ.ದಂಡಿನ, ಎಸ್.ಕೆ.ಮುಸಪ್ಪಗೋಳÀ ಸೆರಿದಂತೆ ಊರಿನ ಗುರು ಹಿರಿಯರು, ಪಾಲಕ ಪೋಷಕರು, ಯುವಕ ಸಂಘದ ಯುವಕರು ಉಪಸ್ಥಿತರಿದ್ದರು.
ಶಾಲೆಯ ಸಹ ಶಿಕ್ಷಕಿ ರೇಖಾ ಪೂಜಾರ ಹಾಗೂ ದೀಪಾ ಬಬಲಿ ನಿರೂಪಿಸಿದರು, ಪ್ರಧಾನ ಗುರುಮಾತೆ ಕು. ಶಾಮಲಾ ಬಡಿಗೇರ ಸ್ವಾಗತಿಸಿದರು ಕೆ.ಬಿ.ಜಾಧವ ವಂದಿಸಿರು.

Related posts: