RNI NO. KARKAN/2006/27779|Thursday, January 15, 2026
You are here: Home » breaking news » ಗೋಕಾಕ:ಲಿಂ. ಡಾ. ಶಿವಕುಮಾರ ಮಹಾಸ್ವಾಮಿಗಳ ಅಗಲಿಕೆಯಿಂದ ಕರುನಾಡಿಗೆ ತುಂಬಲಾರದ ನಷ್ಟವಾಗಿದೆ : ಪುಂಡಲೀಕಪ್ಪ ಪಾರ್ವತೇರ

ಗೋಕಾಕ:ಲಿಂ. ಡಾ. ಶಿವಕುಮಾರ ಮಹಾಸ್ವಾಮಿಗಳ ಅಗಲಿಕೆಯಿಂದ ಕರುನಾಡಿಗೆ ತುಂಬಲಾರದ ನಷ್ಟವಾಗಿದೆ : ಪುಂಡಲೀಕಪ್ಪ ಪಾರ್ವತೇರ 

ಲಿಂ. ಡಾ. ಶಿವಕುಮಾರ ಮಹಾಸ್ವಾಮಿಗಳ ಅಗಲಿಕೆಯಿಂದ ಕರುನಾಡಿಗೆ ತುಂಬಲಾರದ ನಷ್ಟವಾಗಿದೆ : ಪುಂಡಲೀಕಪ್ಪ ಪಾರ್ವತೇರ

ಬೆಟಗೇರಿ ಜ 21 : ನಡೆದಾಡುವ ದೇವರು, ತ್ರಿವಿಧ ದಾಸೋಹಿ ತುಮಕೂರು ಸಿದ್ದಗಂಗಾ ಮಠದ ಲಿಂ. ಡಾ. ಶಿವಕುಮಾರ ಮಹಾಸ್ವಾಮಿಗಳ ಅಗಲಿಕೆಯಿಂದ ಕರುನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿಶ್ವಗುರು ಬಸವಣ್ಣ ಅಭಿಮಾನಿ ಬಳಗದ ಪ್ರಧಾನ ಸಂಚಾಲಕ ಪುಂಡಲೀಕಪ್ಪ ಪಾರ್ವತೇರ ಸಂತಾಪ ಸೂಚಿಸಿ ಕಂಬನಿ ಮಿಡಿದಿದ್ದಾರೆ.
ಡಾ. ಶಿವಕುಮಾರ ಮಹಾಸ್ವಾಮಿಜಿ ನಿಧನ ಹಿನ್ನಲೆಯಲ್ಲಿ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಸೋಮವಾರ ಜ.21 ರಂದು ನಡೆದ ಶ್ರದ್ಧಾಂಜಲಿ ಶೋಕ ಸಭೆಯಲ್ಲಿ ಅವರು, ಸಮಾನತೆಯ ಹರಿಕಾರರಾಗಿ, ಶಾಂತಿ ಸದ್ಭಾವನೆಯ ಮೂಲಕ ನೀತಿ ನಿರೂಪಣೆ ಮಾಡುತ್ತಿದ್ದ ಲಿಂ. ಡಾ. ಶಿವಕುಮಾರ ಶ್ರೀಗಳು ಭಕ್ತರಿಗೆ ಪ್ರೇರಣಾ ಶಕ್ತಿಯಾಗಿದ್ದರು. ಶ್ರೀಗಳ ನಿಧನದಿಂದ ಈ ನಾಡು ಒಬ್ಬ ಮಹಾನ್ ಸಂತ ಶ್ರೇಷ್ಠರನನ್ನು ಕಳೆದುಕೊಂಡಂತಾಗಿದೆ ಎಂದು ತಿಳಿಸಿದ್ದಾರೆ.
ಸಿದ್ಧಗಂಗಾ ಶ್ರೀಗಳ ಅಗಲಿಕೆಗೆ ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ, ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ, ಪತ್ರೇಪ್ಪ ನೀಲಣ್ಣವರ, ಮಲ್ಲೇಶ ಪಣದಿ, ಈರಣ್ಣ ಸಿದ್ನಾಳ, ಶ್ರೀಶೈಲ ಗಾಣಗಿ, ಎಂ.ಐ.ನೀಲಣ್ಣವರ, ದುಂಡಪ್ಪ ಕಂಬಿ, ಈಶ್ವರ ಮುಧೋಳ, ಈಶ್ವರ ಬಳಿಗಾರ, ಈರಪ್ಪ ದೇಯಣ್ಣವರ, ಶ್ರೀಧರ ದೇಯಣ್ಣವರ ಸೇರಿದಂತೆ ಸ್ಥಳೀಯ ವಿಶ್ವಗುರು ಬಸವಣ್ಣ ಅಭಿಮಾನಿ ಬಳಗದ ಪದಾಧಿಕಾರಿಗಳು, ಸದಸ್ಯರು, ಶರಣರು, ಗಣ್ಯರು, ಸ್ಥಳೀಯರು ಕಂಬನಿ ಮಿಡಿದು ಸಂತಾಪ ಶೋಕ ವ್ಯಕ್ತಪಡಿಸಿದ್ದಾರೆ.

Related posts: