ಗೋಕಾಕ:ವಿದ್ಯಾರ್ಥಿಗಳು ಸಾರಿಗೆ ನಿಯಮಗಳನ್ನು ಪಾಲಿಸಿ : ಗುರುನಾಥ ಚೌವ್ಹಾಣ
ವಿದ್ಯಾರ್ಥಿಗಳು ಸಾರಿಗೆ ನಿಯಮಗಳನ್ನು ಪಾಲಿಸಿ : ಗುರುನಾಥ ಚೌವ್ಹಾಣ
ಗೋಕಾಕ ಜ 21 : ವಿದ್ಯಾರ್ಥಿಗಳು ಸಾರಿಗೆ ನಿಯಮಗಳನ್ನು ಪಾಲಿಸಿ ಜಾಗರುಕತೆಯಿಂದ ವಾಹನ ಚಲಾಯಿಸಿ ಅಪಘಾತಗಳನ್ನು ತಪ್ಪಿಸುವಂತೆ ನಗರ ಪೊಲೀಸ ಠಾಣೆಯ ಪಿಎಸ್‍ಐ ಗುರುನಾಥ ಚೌವ್ಹಾಣ ಹೇಳಿದರು.
ಅವರು ಸೋಮವಾರದಂದು ನಗರದ ಲಕ್ಷ್ಮೀ ಎಜ್ಯುಕೇಶನ್ ಟ್ರಸ್ಟ್‍ನ ಸಭಾಭವನದಲ್ಲಿ ನಗರದ ಶಹರ ಠಾಣೆ ಹಾಗೂ ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಪದವಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಕಾನೂನು ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ವಾಹನ ಚಲಾಯಿಸುವಾಗ ವಾಹನ ಪರವಾಣಿಗೆಯೊಂದಿಗೆ ಹೇಲ್ಮಿಟ ಹಾಗೂ ಸೀಟ್ ಬೆಲ್ಟ್ ಗಳನ್ನು ಕಡ್ಡಾಯವಾಗಿ ಉಪಯೋಗಿಸಬೇಕು. ವಾಹನಗಳನ್ನು ನಿಧಾನವಾಗಿ ಚಲಾಯಿಸಿ ತಮ್ಮ ಅಮೂಲ್ಯವಾದ ಜೀವದ ರಕ್ಷಣೆಯೊಂದಿಗೆ ಇತರರ ಜೀವದ ರಕ್ಷಣೆ ಮಾಡಬೇಕು. ಸಾರಿಗೆ ನಿಯಮಗಳನ್ನು ತಾವು ಪಾಲಿಸಿ ಇತರರಲ್ಲೂ ಜಾಗೃತಿ ಮೂಡಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಎಸ್.ಜಿ.ಬೆಟಗಾರ, ರಾಷ್ಟ್ರೀಯ ಸೇವಾ ಯೋಜನೆ ಘಟಕದ ಮುಖ್ಯಸ್ಥ ಎನ್.ಎಂ.ತೋಟಗಿ ಹಾಗೂ ಉಪನ್ಯಾಸಕರು,ವಿದ್ಯಾರ್ಥಿಗಳು ಇದ್ದರು.