RNI NO. KARKAN/2006/27779|Thursday, January 15, 2026
You are here: Home » breaking news » ಘಟಪ್ರಭಾ:ಡಿ.28 ರಿಂದ ಜ.5 ರ ವರೆಗೆ ಜಿಲ್ಲಾ ಮಟ್ಟದ ಶಿಕ್ಷಕರ ಸಹಾಯಕ ಶಿಕ್ಷಣ ಶಿಬಿರವನ್ನು

ಘಟಪ್ರಭಾ:ಡಿ.28 ರಿಂದ ಜ.5 ರ ವರೆಗೆ ಜಿಲ್ಲಾ ಮಟ್ಟದ ಶಿಕ್ಷಕರ ಸಹಾಯಕ ಶಿಕ್ಷಣ ಶಿಬಿರವನ್ನು 

ಡಿ.28 ರಿಂದ ಜ.5 ರ ವರೆಗೆ ಜಿಲ್ಲಾ ಮಟ್ಟದ ಶಿಕ್ಷಕರ ಸಹಾಯಕ ಶಿಕ್ಷಣ ಶಿಬಿರವನ್ನು

ಘಟಪ್ರಭಾ ಡಿ 25 : ಭಾರತ ಸೇವಾದಳ ಜಿಲ್ಲಾ ಸಮಿತಿ ಬೆಳಗಾವಿ ಮತ್ತು ಚಿಕ್ಕೋಡಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಸೇವಾದಳ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಜಿಲ್ಲಾ ಮಟ್ಟದ ಶಿಕ್ಷಕರ ಸಹಾಯಕ ಶಿಕ್ಷಣ ಶಿಬಿರವನ್ನು ಡಿ.28 ರಿಂದ ಜ.5 ರ ವರೆಗೆ ಸ್ಥಳೀಯ ಕರ್ನಾಟಕ ಆರೋಗ್ಯ ಧಾಮ (ಕೆಎಚ್‍ಆಯ್) ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ದಿ.28 ರಂದು ಮುಂಜಾನೆ 10.30 ಕ್ಕೆ ಉದ್ಘಾಟನಾ ಸಮಾರಂಭ ಜರುಗಲಿದ್ದು, ಅಧ್ಯಕ್ಷತೆಯನ್ನು ಭಾರತ ಸೇವಾದಳ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಸಮಿತಿ ಅಧ್ಯಕ್ಷರಾದ ಪ್ರಕಾಶ ದೇಶಪಾಂಡೆ ವಹಿಸಲಿದ್ದಾರೆ. ಉದ್ಘಾಟಕರಾಗಿ ಭಾರತ ಸೇವಾದಳ ಬೆಳಗಾವಿ ಜಿಲ್ಲಾ ಸಮಿತಿ ಅಧ್ಯಕ್ಷರಾದ ಅನೀಲ ಪೋತದಾರ, ಮುಖ್ಯ ಅತಿಥಿಗಳಾಗಿ ಮಾಜಿ ಸಂಸದರು ಹಾಗೂ ಭಾರತ ಸೇವಾದಳ ಕೇಂದ್ರ ಸಮಿತಿ ಸದಸ್ಯರಾದ ರಮೇಶ ಕತ್ತಿ, ರಾಜೇಂದ್ರ ಮಾಳಗಿ ಆಗಮಿಸಲಿದ್ದಾರೆ.
ಡಾ.ಘನಶ್ಯಾಮ ವೈದ್ಯ ಡಾ.ಹರ್ಡೀಕರರಿಗೆ ಪುಷ್ಪಾರ್ಪಣೆ ನೆರವೇರಿಸಲಿದ್ದು, ಚಿಕ್ಕೋಡಿ ಸಾ.ಶಿ ಇಲಾಖೆಯ ಉಪನಿರ್ದೇಶಕ ಎಂ.ಜಿ.ದಾಸರ ಗೌರವ ರಕ್ಷೆ ಸ್ವೀಕರಿಸಲಿದ್ದಾರೆಂದು. ಕ್ಷೇತ್ರ ಶಿಕ್ಷಣಾಧಿಕರಾರಿಗಳಾದ ಅಜೀತ ಮಣ್ಣಿಕೇರಿ ಹಾಗೂ ಜಿ.ಬಿ.ಬಳಿಗಾರ ಉಪಸ್ಥಿತರಿರುವರು. ಶಿಬಿರದ ಮದ್ಯ ರಾಜ್ಯದ ವಿವಿಧ ಅಧಿಕಾರಿಗಳು ಭೆಟ್ಟಿ ನೀಡಲಿದ್ದಾರೆಂದು ಶಿಬಿರಾಧಿಪತಿಗಳು ಹಾಗೂ ಭಾರತ ಸೇವಾದಳ ವಿಭಾಗ ಸಂಘಟಕರಾದ ಬಸವರಾಜ ಹಟ್ಟಿಗೌಡರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts: