RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಪರಿಶ್ರಮದ ಮೆಟ್ಟಿಲುಗಳನ್ನು ಏರಿದಾಗ ಮಾತ್ರ ಯಶಸ್ಸನ್ನು ಸಾಧಿಸಲು ಸಾಧ್ಯ : ಶಿಕ್ಷಕಿ ಜಿ.ಜಿ.ಹಿರೇಮಠ

ಗೋಕಾಕ:ಪರಿಶ್ರಮದ ಮೆಟ್ಟಿಲುಗಳನ್ನು ಏರಿದಾಗ ಮಾತ್ರ ಯಶಸ್ಸನ್ನು ಸಾಧಿಸಲು ಸಾಧ್ಯ : ಶಿಕ್ಷಕಿ ಜಿ.ಜಿ.ಹಿರೇಮಠ 

ಪರಿಶ್ರಮದ ಮೆಟ್ಟಿಲುಗಳನ್ನು ಏರಿದಾಗ ಮಾತ್ರ ಯಶಸ್ಸನ್ನು ಸಾಧಿಸಲು ಸಾಧ್ಯ : ಶಿಕ್ಷಕಿ ಜಿ.ಜಿ.ಹಿರೇಮಠ

ಗೋಕಾಕ ನ 29 : ವಿದ್ಯಾರ್ಥಿಗಳು ಪರಿಶ್ರಮದ ಮೆಟ್ಟಿಲುಗಳನ್ನು ಏರಿದಾಗ ಮಾತ್ರ ಯಶಸ್ಸನ್ನು ಸಾಧಿಸಲು ಸಾಧ್ಯ ಎಂದು ಶಿಕ್ಷಕಿ ಜಿ.ಜಿ.ಹಿರೇಮಠ ಹೇಳಿದರು.
ಅವರು ಬುಧವಾರದಂದು ನಗರದ ಎನ್‍ಇಎಸ್ ಶಾಲೆಯ ಸಭಾಂಗಣದಲ್ಲಿ ನಿವೃತ್ತಿ ನಿಮಿತ್ಯ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದವರು ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಾಂತ್ರಿಕತೆಯ ಸದುಪಯೋಗದಿಂದ ಪ್ರಯತ್ನಶೀಲರಾಗಿ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕೆಂದು ಹೇಳಿದರು.
ಸಂಸ್ಥೆಯ ಉಪಾಧ್ಯಕ್ಷ ಬಿ.ಎಸ್.ಗುರೋಶಿ, ನಿರ್ದೇಶಕ ಎಸ್.ಜಿ.ಕೌತನಾಳಿ, ಕಾರ್ಯದರ್ಶಿ ಪ್ರಕಾಶ ಕುರುಬೇಟ, ಶಿಕ್ಷಕರಾದ ಬಿ.ಆರ್.ಚಿಪ್ಪಲಕಟ್ಟಿ, ಎಂ.ಎಸ್.ಕಲಗುಡಿ, ಎಸ್.ಎಸ್.ಅಂಗಡಿ, ಮುಖೋಪಾಧ್ಯಾಯ ಎಸ್.ಎಸ್.ಲಗಮಪ್ಪಗೋಳ ಮಾತನಾಡಿ ವೃತ್ತಿಗೆ ನಿವೃತ್ತಿ ಇದ್ದು, ಪ್ರವೃತ್ತಿಗೆ ನಿವೃತ್ತಿ ಇಲ್ಲ ಹಿರೇಮಠ ಅವರು ತಮ್ಮ ಅನುಭವದ ಸೇವೆಯನ್ನು ಶೈಕ್ಷಣಿಕ ಕ್ಷೇತ್ರಕ್ಕೆ ಸಲ್ಲಿಸಿ ಶಿಕ್ಷಣದ ಪ್ರಗತಿಗೆ ಶ್ರಮಿಸುವಂತೆ ಕರೆ ನೀಡಿದರು.
ಕಾರ್ಯಕ್ರಮವನ್ನು ಬಿ.ಎಚ್.ಪಾಟೀಲ ಸ್ವಾಗತಿಸಿದರು.ಆರ್.ಐ.ಬಡಿಗೇರ ವಂದಿಸಿದರು.

Related posts: