RNI NO. KARKAN/2006/27779|Thursday, January 15, 2026
You are here: Home » breaking news » ಗೋಕಾಕ:ಚಕ್ರ ಎಸೆತ : ಲಕ್ಷ್ಮೀ ಅಳಗೋಡಿ ರಾಜ್ಯ ಮಟ್ಟಕ್ಕೆ ಆಯ್ಕೆ

ಗೋಕಾಕ:ಚಕ್ರ ಎಸೆತ : ಲಕ್ಷ್ಮೀ ಅಳಗೋಡಿ ರಾಜ್ಯ ಮಟ್ಟಕ್ಕೆ ಆಯ್ಕೆ 

ಚಕ್ರ ಎಸೆತ : ಲಕ್ಷ್ಮೀ ಅಳಗೋಡಿ ರಾಜ್ಯ ಮಟ್ಟಕ್ಕೆ ಆಯ್ಕೆ

ಗೋಕಾಕ ಅ 5 : ತಾಲೂಕಿನ ಬಿಲಕುಂದಿ ಗ್ರಾಮದ ಶ್ರೀ ಬಸವೇಶ್ವರ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಲಕ್ಷ್ಮೀ ದೇವೆಂದ್ರ ಅಳಗೋಡಿ ಇವಳು ಚಿಕ್ಕೋಡಿಯಲ್ಲಿ ಜರುಗಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ಕ್ರೀಡಾಕೂಟದ ಚಕ್ರ ಎಸೆತ ಕ್ರೀಡೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಗೊಂಡು ಶಾಲೆಗೆ ಮತ್ತು ಮೂಡಲಗಿ ವಲಯಕ್ಕೆ ಕೀರ್ತಿ ತಂದು ಕೊಟ್ಟಿದ್ದಾಳೆ.
ಸಾಧನೆ ಗೈದ ಈ ವಿದ್ಯಾರ್ಥಿನಿಗೆ ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ.ಗಂಗಾಧರ ಹಾಗೂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಲಿಂಗಪ್ಪ ಬಳಿಗಾರ, ಮುಖ್ಯೋಪಾಧ್ಯಾಯ ಪಿ.ಎಂ.ನಾಯ್ಕರ,ದೈಹಿಕ ಶಿಕ್ಷಕ ಜಿ.ಬಿ.ಪಾಟೀಲ ಸೇರಿದಂತೆ ಶಿಕ್ಷಕ ವೃಂದ ಹಾಗೂ ಗ್ರಾಮದ ಮುಖಂಡರು,ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

Related posts: