RNI NO. KARKAN/2006/27779|Wednesday, January 14, 2026
You are here: Home » breaking news » ಘಟಪ್ರಭಾ:ಅತ್ಯಾಚಾರಿಗೆ ಕಠಿಣ ಶಿಕ್ಷೆ ವಿಧಿಸಿ : ಘಟಪ್ರಭಾದಲ್ಲಿ ಸಮತಾ ಸೈನಿಕ ದಳ ಪ್ರತಿಭಟನೆ

ಘಟಪ್ರಭಾ:ಅತ್ಯಾಚಾರಿಗೆ ಕಠಿಣ ಶಿಕ್ಷೆ ವಿಧಿಸಿ : ಘಟಪ್ರಭಾದಲ್ಲಿ ಸಮತಾ ಸೈನಿಕ ದಳ ಪ್ರತಿಭಟನೆ 

ಅತ್ಯಾಚಾರಿಗೆ ಕಠಿಣ ಶಿಕ್ಷೆ ವಿಧಿಸಿ : ಘಟಪ್ರಭಾದಲ್ಲಿ ಸಮತಾ ಸೈನಿಕ ದಳ ಪ್ರತಿಭಟನೆ

ಘಟಪ್ರಭಾ ಸೆ 19 : ಕಳೆದ ಎರಡು ದಿನಗಳ ಹಿಂದೆ 6 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಗೋಕಾಕ ನಗರ ನಿವಾಸಿ ಬಸವರಾಜ ಬೋಸಲೆಗೆ ಕಠಿಣ ಶಿಕ್ಷೆ ವಿದಿಸಬೇಕೆಂದು ಒತ್ತಾಯಿಸಿ ಘಟಪ್ರಭಾ ಸಮತಾ ಸೈನಿಕ ದಳದ ಪದಾಧಿಕಾರಿಗಳು ಘಟಪ್ರಭಾ ಪಿ.ಎಸ್.ಆಯ್ ಅವರ ಮುಖಾಂತರ ಮಾನ್ಯ ರಾಜ್ಯಪಾಲರಿಗೆ ಬುಧವಾರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅರ್ಜುನ ಗಂಡವ್ವಗೋಳ, ಶಂಕರ ಸಣ್ಣಕ್ಕಿ, ರಿಯಾಜ ಮುಲ್ಲಾ, ರಾಜು ಪೀರಜಾದೆ, ಸುರೇಶ ಪೂಜಾರಿ, ಜರೀನಾ ಇನಾಮದಾರ, ಆಸೀಪ ಉಸ್ತಾದ, ಮುನ್ನಾ ಪಾಚ್ಛಾಪುರೆ, ಮಕಸೂದ ಮುಲ್ಲಾ, ಅಪ್ಪಾಸಾಬ ಮುಲ್ಲಾ, ವೀರಭದ್ರ ಗಂಡವ್ವಗೋಳ, ಪರಶುರಾಮ ಗೋಕಾಕ, ರಿಜವಾನ ದೇಸಾಯಿ, ಸದ್ದಾಮ ಸಯ್ಯದ ಸೇರಿದಂತೆ ಅನೇಕರು ಇದ್ದರು.

Related posts: