ಗೋಕಾಕ:ದಿನನಿತ್ಯ ಜಪ ಮಾಡುವ ಮೂಲಕ ಪುಣ್ಯ ಪ್ರಾಪ್ತಿಯಾಗುತ್ತದೆ : ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ
ದಿನನಿತ್ಯ ಜಪ ಮಾಡುವ ಮೂಲಕ ಪುಣ್ಯ ಪ್ರಾಪ್ತಿಯಾಗುತ್ತದೆ : ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ
ಗೋಕಾಕ ಸೆ 3 : ಇಂದಿನ ಒತ್ತಡದ ಜೀವನದಲ್ಲಿ ಮನುಷ್ಯ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದು ವಿರಳ ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಜನರು ಶ್ರಾವಣ ಮಾಸದಲ್ಲಿ ಧಾರ್ಮಿಕ ಕಾರ್ಯ ಹಮ್ಮಿಕೊಂಡಿದ್ದು ಶ್ಲಾಘನೀಯವಾಗಿದೆ ಎಂದು ಶೂನ್ಯ ಸಂಪಾದನಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ ಹೇಳಿದರು.
ಅವರು ರವಿವಾರದಂದು ಸಂಜೆ ತಾಲೂಕಿನ ಮೆಳವಂಕಿ ಗ್ರಾಮದ ಬಸವ ನಗರದ ಬಸವೇಶ್ವರ ಜಾತ್ರಾ ಕಮೀಟಿ ಹಾಗೂ ಜೈ ಬಜರಂಗಿ ಗೆಳೆಯರ ಬಳಗದವರ ವತಿಯಿಂದ ಶ್ರಾವಣ ಮಾಸದ ನಿಮಿತ್ಯ ಶ್ರೀ ಬಸವೇಶ್ವರ ಜನಕಲ್ಯಾಣ ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷರು ಹಾಗೂ ಇಲ್ಲಿಯ ಶೂನ್ಯ ಸಂಪಾದನಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ ಅವರಿಗೆ ಹಾಗೂ ಮುತ್ಯಾನ ಮೆಳವಂಕಿ ಗ್ರಾಮದ ಶ್ರೀ ಸಿದ್ದಾರೂಢ ಮಠದ ಪೂಜ್ಯ ಶ್ರೀ ಹರಿಹರಾನಂದ ಮಹಾಸ್ವಾಮಿಜಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನಮ ಶಿವಾಯ ಹಾಗೂ ಪಂಚಭೂತ ಎಂಬುದು ಐದು ಅಕ್ಷರದಲ್ಲಿ ಹುಟ್ಟಿದ್ದು ಅದನ್ನು ದಿನನಿತ್ಯ ಜಪ ಮಾಡುವ ಮೂಲಕ ಪುಣ್ಯ ಪ್ರಾಪ್ತಿಯಾಗುತ್ತದೆ, ಮನುಷ್ಯ ದುಡಿದ ಹಣದಲ್ಲಿ ಒಂದಿಷ್ಟು ಹಣ ಧಾರ್ಮಿಕ ಕಾರ್ಯದಲ್ಲಿ ತೊಡಗಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಮೆಳವಂಕಿ ಗ್ರಾಮದ ಶರಣರು, ಸಂತರು, ಗ್ರಾಮದ ಪ್ರಮುಖ ಹಿರಿಯರು, ಗ್ರಾ.ಪಂ ಅಧ್ಯಕ್ಷರು, ಸದಸ್ಯರು ಹಾಗೂ ಜೈ ಬಜರಂಗಿ ಗೆಳೆಯರ ಬಳಗದವರು ಉಪಸ್ಥಿತರಿದ್ದರು.