ಗೋಕಾಕ:ಯುವ ಸಮುದಾಯ ಸ್ವಚ್ಚತೆ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ : ವಸಂತರಾವ್ ಕುಲಕರ್ಣಿ
ಯುವ ಸಮುದಾಯ ಸ್ವಚ್ಚತೆ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ : ವಸಂತರಾವ್ ಕುಲಕರ್ಣಿ
ಗೋಕಾಕ ಅ 25 : ಯುವ ಸಮುದಾಯ ಸ್ವಚ್ಚತೆ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಕೊಂಡು ಆರೋಗ್ಯವಂತ ಸಮಾಜ ನಿರ್ಮಿಸಬೇಕೆಂದು ಸಾಹಿತಿ ವಸಂತರಾವ್ ಕುಲಕರ್ಣಿ ಹೇಳಿದರು.
ಅವರು ಶುಕ್ರವಾರದಂದು ನಗರದ ಬಸವಜ್ಯೋತಿ ಐಟಿಐ ಕಾಲೇಜನಲ್ಲಿ ಶ್ರೀ ಶಿವಾನಂದ ಭಾರತಿ ಸ್ವಾಮಿ ಜಾನಪದ ಕಲಾ ಯುವ ಸಂಘ ಜೊಕ್ಕಾನಟ್ಟಿ, ನಗರದ ಬಸವಜ್ಯೋತಿ ಐಟಿಐ ಕಾಲೇಜ, ಆರ್.ಎಲ್.ಮಹಿಳಾ ಪದವಿಪೂರ್ವ ಕಾಲೇಜ ಗೋಕಾಕ, ನೆಹರು ಯುವ ಕೇಂದ್ರ ಬೆಳಗಾವಿ ಇವುಗಳ ಸಂಯುಕ್ತಾಶ್ರಯದಲ್ಲಿ ಗೋಕಾಕ ತಾಲೂಕಾ ಮಟ್ಟದ ನೆರೆಹೊರೆ ಯುವ ಸಂಸತ್ತು ಮತ್ತು ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸರ್ಕಾರದ ಅನೇಕ ಯೋಜನೆಗಳನ್ನು ನೆಹರು ಯುವ ಕೇಂದ್ರದ ಮೂಲಕ ಯುವ ಸಮುದಾಯಕ್ಕೆ ನೀಡುತ್ತಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಯುವ ಸಮುದಾಯವೇ ದೇಶದ ಸಂಪತ್ತುರಾಗಿದ್ದಾರೆ. ದೇಶ ಕಟ್ಟುವ ಕಾರ್ಯ ಯುವಕರ ಮೇಲಿದೆ. ಯುವ ಸಮಾಜದ ಅಭಿವೃದ್ದಿಗೆ ಯುವಕರು ಶ್ರಮಿಸಬೇಕೆಂದು ಹೇಳಿದರು.
ಕರವೇ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಮಾತನಾಡಿ ಯುವಕರು ಸ್ವ ಮನಸ್ಸಿನಿಂದ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಸದೃಢ ಸಮಾಜ ನಿರ್ಮಿಸುವ ಶಿಲ್ಪಿಗಳಾಗುತ್ತಾರೆ. ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯಗಳನ್ನು ಮಾಡಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸತ್ಯಮೇದ ಎಜ್ಯುಕೇಶನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಶೋಕ ಲಗಮಪ್ಪಗೋಳ ವಹಿಸಿದ್ದರು. ವೇದಿಕೆ ಮೇಲೆ ನೆಹರು ಯುವ ಕೇಂದ್ರದ ಲೇಖಪಾಲಕ ಆರ್.ಆರ್.ಮುತಾಲಿಕದೇಸಾಯಿ ಸಚೀನ ಪಾಟೀಲ, ವೈ.ಎಚ್.ಕುರುಬಗಟ್ಟಿ, ಡಾ|ರಮೇಶ ಮಾಳಗಿ, ಎಂ.ಬಿ.ಕಂಬಾರ, ಸಚೀನ ಚಿಂಚಲಿ, ಕೆಂಪಣ್ಣಾ ಶಿಂಗಳಾಪೂರ, ಕಾಡಪ್ಪ ಮಾದರ ,ಯಮನವ್ವ ಜೋಕ್ಕಾನಟ್ಟಿ ಇದ್ದರು.
ಕಾರ್ಯಕ್ರಮವನ್ನು ಅಕ್ಕಮಹಾದೇವಿ ಮಾದರ ಸ್ವಾಗತಿಸಿದರು. ಬಸವರಾಜ ಹರಿಜನ ನಿರೂಪಿಸಿದರು. ಶೆಟ್ಟೆಪ್ಪ ಮಾದರ ವಂದಿಸಿದರು.