ಹುಕ್ಕೇರಿ:ಹಿಡಕಲ್ ಜಲಾಶಯದ ಉದ್ಯಾನವನವನ್ನು ಕೆ.ಆರ್.ಎಸ್ ಮಾದರಿಯಲ್ಲಿ ಅಭಿವೃದ್ದಿ : ಸಚಿವ ರಮೇಶ
ಹಿಡಕಲ್ ಜಲಾಶಯದ ಉದ್ಯಾನವನವನ್ನು ಕೆ.ಆರ್.ಎಸ್ ಮಾದರಿಯಲ್ಲಿ ಅಭಿವೃದ್ದಿ : ಸಚಿವ ರಮೇಶ
ಹುಕ್ಕೇರಿ ಅ 12 : ಹಿಡಕಲ್ ಜಲಾಶಯದ ಆವರಣದಲ್ಲಿ ಇರುವ ಉದ್ಯಾನವನವನ್ನು ಕೆ.ಆರ್.ಎಸ್ ಮಾದರಿಯಲ್ಲಿ ಅಭಿವೃದ್ಧಿ ಪಡೆಸಲಾಗುವದು ಎಂದು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಹೇಳಿದರು
ರವಿವಾರದಂದು ಬೆಳ್ಳಿಗೆ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯಕ್ಕೆ ಬಾಗಿನಿ ಅರ್ಪಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು ಕಳೆದ ಹಲವು ವರ್ಷಗಳಿಂದ ಹಿಡಕಲ್ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು , ರೈತರು ನೀರನ್ನು ಸರಿಯಾಗಿ ಸದ್ಬಳಕೆ ಮಾಡಿಕೋಳ್ಳಬೇಕೆಂದು ಸಲಹೆ ನೀಡಿದರು
ಈ ಸಂದರ್ಭದಲ್ಲಿ ಹುಕ್ಕೇರಿ ಶಾಸಕ ಉಮೇಶ ಕತ್ತಿ , ರಾಯಬಾಗ ಶಾಸಕ ರ್ದುಯೋಧನ ಐಹೋಳೆ , ವಿಪ ಸದಸ್ಯ ಮಹಾಂತೇಶ ಕವಟಗಿಮಠ , ಎಸಿ ಕವಿತಾ ಯೋಗಪ್ಪನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು