RNI NO. KARKAN/2006/27779|Friday, October 17, 2025
You are here: Home » breaking news » ಗೋಕಾಕ:ಶಿಕ್ಷಕ ಜೈಪಾಲ್ ಭಜಂತ್ರಿ ಅಮಾನತ್ತಿಗೆ ಕರವೇ ಆಗ್ರಹ

ಗೋಕಾಕ:ಶಿಕ್ಷಕ ಜೈಪಾಲ್ ಭಜಂತ್ರಿ ಅಮಾನತ್ತಿಗೆ ಕರವೇ ಆಗ್ರಹ 

ಶಿಕ್ಷಕ ಜೈಪಾಲ್ ಭಜಂತ್ರಿ ಅಮಾನತ್ತಿಗೆ ಕರವೇ ಆಗ್ರಹ

ಗೋಕಾಕ ಅ 10 : ಮಕ್ಕಳಿಂದ ಶಾಲೆಯ ಶೌಚಾಲಯ ಮತ್ತು ದ್ವಿಚಕ್ರ ವಾಹನ ಕ್ಲೀನ್ ಮಾಡಿಸಿದ ಬಡಿಗವಾಡ ಪ್ರಾಥಮಿಕ ಶಾಲೆಯ ಶಿಕ್ಷಕ ಜೈಪಾಲ ಭಜಂತ್ರಿ ಯನ್ನು ಈ ಕೂಡಲೇ ಅಮಾನತು ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಆಗ್ರಹಿಸಿದ್ದಾರೆ

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮಕ್ಕಳಿಗೆ ಶಿಕ್ಷಣ , ವಿಧ್ಯೆ ಬುದ್ದಿ ಹೇಳಬೇಕಾದ ಶಿಕ್ಷಕ ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛ ಗೋಳಿಸಿ ಅಮಾನವೀಯ ಕೃತ್ಯ ವೆಸಗಿದ್ದಾರೆ ಕೂಡಲೇ ಶಿಕ್ಷಣಾಧಿಕಾರಿ ಮತ್ತು ಉಪನಿರ್ದೇಶಕರು ಎಚ್ಚೆತ್ತುಕೊಂಡು ಶಿಕ್ಷಣ ಜೈಪಾಲನನ್ನು ಅಮಾನತು ಮಾಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಕೈಗೋಳಲಾಗುವದೆಂದು ಖಾನಪ್ಪನವರ ಹೇಳಿದ್ದಾರೆ

Related posts: