ಬೆಳಗಾವಿ : ಉತ್ತರ ಕರ್ನಾಟಕ ಬಂದಗೆ ಕವಿನಿಸೇ ಬೆಂಬಲವಿಲ್ಲ : ಹಟ್ಟಿಹೊಳಿ
ಉತ್ತರ ಕರ್ನಾಟಕ ಬಂದಗೆ ಕವಿನಿಸೇ ಬೆಂಬಲವಿಲ್ಲ : ಹಟ್ಟಿಹೊಳಿ
ಬೆಳಗಾವಿ ಜು 30 : ಪ್ರತ್ಯೇಕ ಉತ್ತರ ಕರ್ನಾಟಕಕ್ಕಾಗಿ ಅಗಸ್ಟ್ 2 ರಂದು ಕರೆ ನೀಡಲಾಗಿರುವ ಉತ್ತರ ಕರ್ನಾಟಕ ಬಂದಗೆ ಕರ್ನಾಟಕ ವಿಶ್ವ ನಿರ್ಮಾಣ ಸೇನೆಯ ಬೆಂಬಲವಿಲ್ಲವೆಂದು ಸಂಘಟನೆಯ ಪ್ರಮುಖ ಕಾಶೀಮ ಹಟ್ಟಿಹೊಳಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟನೆ ನೀಡಿರುವ ಅವರು ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ರಾಜ್ಯ ಸರಕಾರ ನಿರ್ಲಕ್ಷಿಸುತ್ತಿದೆ ಎಂದು ವಿವಿಧ ಸಂಘಟನೆಗಳು ಹಾಗೂ ಮಠಾಧಿಶರು ನೀಡಿರುವ “ಅಗಸ್ಟ್ 2 ರ ಬಂದಗೆ” ಕರ್ನಾಟಕ ವಿಶ್ವ ನಿರ್ಮಾಣ ಸೇನೆಯ ಬೆಂಬಲವಿಲ್ಲ. ಅಖಂಡ ಕರ್ನಾಟಕದ ನಿರ್ಮಾಣಕ್ಕಾಗಿ “ಕರ್ನಾಟಕ ಏಕೀಕರಣ” ಚಳುವಳಿಯಲ್ಲಿ ಹಲವಾರು ಮಹನೀಯರು ನಮ್ಮ ಉತ್ತರಕರ್ನಾಟಕದಿಂದ ಭಾಗವಹಿಸಿದ್ದರು. ಅಂತಹ ಮಹನೀಯರು ಒಗ್ಗೂಡಿ ಅಖಂಡ ಕರ್ನಾಟಕ ರಚನೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಕನ್ನಡನಾಡಿನ ನೆಲ, ಜಲ, ಭಾಷೆ, ಶಿಕ್ಷಣ, ಉದ್ಯೋಗದಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಸಿದ್ಧ ಆದರೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ನಡೆಸುತ್ತಿರುವ ಹೋರಾಟಕ್ಕೆ ಮತ್ತು ಅಗಸ್ಟ್ 2 ರಂದು ನೀಡಿರುವ ಬಂದಗೆ “ಕರ್ನಾಟಕ ವಿಶ್ವ ನಿರ್ಮಾಣ ಸೇನೆ” ಸಂಘಟನೆಯ ಬೆಂಬಲವಿಲ್ಲ ಎಂದು ಸಂಘಟನೆಯ ಪ್ರಮುಖ ಕಾಶೀಮ ಹಟ್ಟಿಹೊಳಿ ಪತ್ರಿಕೆಗೆ ತಿಳಿಸಿದ್ದಾರೆ.