RNI NO. KARKAN/2006/27779|Tuesday, December 2, 2025
You are here: Home » breaking news » ಗೋಕಾಕ:ಪುಸ್ತಕಗಳು ಮನುಷ್ಯನ ವ್ಯಕ್ತಿತ್ವವ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ : ರಮೇಶ ಅಳಗುಂಡಿ

ಗೋಕಾಕ:ಪುಸ್ತಕಗಳು ಮನುಷ್ಯನ ವ್ಯಕ್ತಿತ್ವವ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ : ರಮೇಶ ಅಳಗುಂಡಿ 

ಪುಸ್ತಕಗಳು ಮನುಷ್ಯನ ವ್ಯಕ್ತಿತ್ವವ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ : ರಮೇಶ ಅಳಗುಂಡಿ

ಬೆಟಗೇರಿ ಜು 25 :ನಿರಂತರ ಒಳ್ಳೆಯ ಪುಸ್ತಕಗಳನ್ನು ಓದುವುದರಿಂದ ಮನುಷ್ಯನಲ್ಲಿ ಹೆಚ್ಚಿನ ಜ್ಞಾನ ಸಂಪಾದನೆಯಾಗುತ್ತದೆ. ಪುಸ್ತಕಗಳೇ ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವೀರಭದ್ರಪ್ಪ ವೀರಸಂಗಪ್ಪ ದೇಯಣ್ಣವರ ಸರ್ಕಾರಿ ಪ್ರೌಢ ಶಾಲೆಯ ಮುಖ್ಯಾಧ್ಯಾಪಕ ರಮೇಶ ಅಳಗುಂಡಿ ಹೇಳಿದರು.
ಗ್ರಾಮದ ವೀರಭದ್ರಪ್ಪ ವೀರಸಂಗಪ್ಪ ದೇಯಣ್ಣವರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಂಗಳವಾರ ಜುಲೈ.24 ರಂದು ನಡೆದ ವಿಶ್ವ ಓದು ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳ ಜೋತೆಗೆ ಮತ್ತೀತರ ಒಳ್ಳೆಯ ಪುಸ್ತಕಗಳನ್ನು ಓದುವ ಹವ್ಯಾಸ ಬೆಳಸಿಕೊಳ್ಳಬೇಕು ಎಂದರು.
ಶಾಲೆಯ ಶಿಕ್ಷಕ ಮಂಜುನಾಥ ಹತ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಯೊಬ್ಬರು ವಿದ್ಯಾರ್ಥಿ ಬದುಕಿನಲ್ಲಿಯೇ ಓದುವ ರೂಢಿ ಬೆಳಸಿಕೊಳ್ಳಬೇಕು. ಶಾಲಾ-ಕಾಲೇಜು ದಿನಗಳಲ್ಲಿ ಹಲವಾರು ಜನ ಸಾಧಕ ವ್ಯಕ್ತಿಗಳ ಪುಸ್ತಕÀÀ ಓದು ಮತ್ತು ಸಮಯಪ್ರಜ್ಞೆ ಹಾಗೂ ಅವರ ಸಾಧನೆಗಳ ಬಗ್ಗೆ ತಿಳಿಸಿದರು.
ಉತ್ತಮ ಬರಹಗಳಿಂದ ಕೂಡಿದ ವಿವಿಧ ಪುಸ್ತಕ, ದಿನ ಪತ್ರಿಕೆ, ನಿಯತಕಾಲಿಕೆಗಳು, ಕಾದಂಬರಿಗಳು, ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳು ಸೇರಿದಂತೆ ಐತಿಹಾಸಿಕ, ಪೌರಾಣಿಕ ಪುಸ್ತಕಗಳ ಕುರಿತು ಶಾಲೆಯ ಎಲ್ಲ ತರಗತಿಯ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೂಡಲಾಯಿತು.
ರಾಕೇಶ ನಡೋಣಿ, ವಿ.ಬಿ.ಬಿರಾದರ, ಎ.ಬಿ.ತಾಂವಶಿ, ಶುಭಾ.ಬಿ., ಜಯಶ್ರೀ ಇಟ್ನಾಳ, ವೀಣಾ ಹತ್ತಿ, ಮಲ್ಹಾರಿ ಪೋಳ, ರಮೇಶ ಬುದ್ನಿ ಸೇರಿದಂತೆ ಶಾಲೆಯ ಶಿಕ್ಷಕರು, ಸಿಬ್ಬಂದಿ, ಎಲ್ಲ ತರಗತಿಯ ವಿದ್ಯಾರ್ಥಿಗಳು, ಇತರರು ಇದ್ದರು.
ಮಲ್ಲಿಕಾರ್ಜುನ ಹಿರೇಮಠ ಸ್ವಾಗತಿಸಿದರು. ಮೋಹನ ತುಪ್ಪದ ಕಾರ್ಯಕ್ರಮ ನಿರೂಪಿಸಿ, ಕೊನೆಗೆ ವಂದಿಸಿದರು.

Related posts: