ಖಾನಾಪುರ: ಸಾವಿಗೆ ಅಹ್ವಾನಿಸುತ್ತಿರುವ ರಾಜ್ಯ ಹೆದ್ದಾರಿ ಸೇತುವೆ: ಜೀವ ಕೈಯಲ್ಲಿ ಹಿಡಿದು ಸಂಚರಿಸುತ್ತಿರುವ ಪ್ರಯಾಣಿಕರು
ಸಾವಿಗೆ ಅಹ್ವಾನಿಸುತ್ತಿರುವ ರಾಜ್ಯ ಹೆದ್ದಾರಿ ಸೇತುವೆ: ಜೀವ ಕೈಯಲ್ಲಿ ಹಿಡಿದು ಸಂಚರಿಸುತ್ತಿರುವ ಪ್ರಯಾಣಿಕರು
ವಿಶೇಷ ಲೇಖನ : ಕಾಶೀಮ ಹಟ್ಟಿಹೊಳ್ಳಿ
ಖಾನಾಪುರ ಜೂ 2: ತಾಲೂಕಿನ ಪೂರ್ವಭಾಗದ ಗಡಿಅಂಚಿಯಲ್ಲಿರುವ ಲಿಂಗನಮಠ ಗ್ರಾಮಕ್ಕೆ ಸಮೀಪದಲ್ಲಿರುವ ಧಾರವಾಡ-ರಾಮನಗರ ರಾಜ್ಯ ಹೆದ್ದಾರಿ ಸೇತುವೆ ಮೃತ್ಯುವಿಗೆ ಅಹ್ವಾನಿಸುತ್ತಿದೆ. ಏಕೆಂದರೆ ಕಳೆದ 3-4 ವರ್ಷಗಳಿಂದ ಜಿವಿಆರ್ ಕಂಪನಿಯವರು ಧಾರವಾಡದಿಂದ-ರಾಮನಗರ ವರೆಗೆ ರಸ್ತೆ ಹಾಗೂ ಸೇತುವೆ ನಿರ್ಮಾಣದ ಕಾರ್ಯ ಕೈಗೆತ್ತಿಕೊಂಡಿದ್ದರು. ಆದರೆ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಬಾರ್ಡರನಲ್ಲಿರುವ ಶತಮಾನದಷ್ಟು ಈ ಹಳೆಯ ಸೇತುವೆ ಈಗಾಗಲೇ ಹಲವರ ಜೀವ ತೆಗೆದುಕೊಂಡಿದ್ದು ಇನ್ನೂ ಕೆಲವರಿಗೆ ಘಾಯವನ್ನುಂಟು ಮಾಡಿದೆ. ಇದನ್ನು ಅರಿತ ಜಿವಿಆರ್ ಕಂ ಯವರು ಕಳೆದ 3-4 ವರ್ಷಗಳ ಹಿಂದೆ ಈ ಶತಮಾನದಷ್ಟು ಹಳೆಯದಾದ ಸೇತುವೆಯ ಪಕ್ಕದಲ್ಲೇ ಹೊಸ ಸೇತುವೆಯ ಕಾರ್ಯ ಆರಂಭಿಸಿತ್ತು.
ಇದನ್ನು ಗಮನಿಸಿದ ನಿತ್ಯ ಇಲ್ಲಿಂದ ಪ್ರಯಾಣಿಸುವ ಜನರು ಇನ್ನೆನು ಹೊಸ ಸೇತುವೆ ನಿರ್ಮಾಣ ಆಗಿ ಅವಘಡಗಳು ಆಗುವುದು ತಪ್ಪುತ್ತವೆ ಎಂದು ಜನ ಊಹಿಸಿದ್ದರು. ಆದೆ ಕನಸ್ಸು ಹೂಸಿಗೊಳಸಿದ ಗುತ್ತಿಗೆದಾರರು “ಭಾರವಾಯಿತು ಟೆಂಡರ್” ಎಂಬ ದರಿದ್ರ ದೆವ್ವ ಅಂಟಿಸಿಕೋಂಡು ಇನ್ನೂವರೆಗೆ ಸೇತುವೆ ಕೆಲಸ ಪೂರ್ಣಗೊಳಿಸದೆ, ಹದಗಟ್ಟಿರುವ ರಸ್ತೆ ದುರಸ್ತಿ ಮಾಡದೆ ಹಾಗೂ ಹಳೆಯ ಸೇತುವೆಗೆ ತಡೆಗೊಡೆ ನಿರ್ಮಿಸದೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅವಘಡಗಳು ಸಂಭವಿಸುವ ಹಾಗೇ ಆಗಿದೆ ಎಂದು ಪ್ರಯಾಣಿಕರು ಆಗ್ರಹಿಸುತ್ತಿದ್ದಾರೆ.
ಈ ಹಳೆಯ ಸೇತುವೆಯೇ ಮುಖಾಂತರವೆ ನಿತ್ಯ ಸಂಚರಿಸುವ ಧಾರವಾಡ, ಅಳ್ನಾವರ, ಹಳಿಯಾಳ, ಬೆಳಗಾವಿ ಹಾಗೂ ಗೋವಾ ಕ್ಕೆ ಹೋಗುವ ಪ್ರಯಾಣಿಕರು ಜೀವ ಮುಷ್ಟಿಯಲ್ಲಿಟ್ಟುಕೊಂಡು ದಾಟುವಂತಾಗಿದೆ,
ಮಾರುತಿ ಹರಿಜನ : ಖಾನಾಪುರ ತಾಲೂಕಾ ಜಿಜೆಪಿ ಮುಖಂಡರು
ಕಳೆದ ತಿಂಗಳು ಪಕ್ಕದ ಗ್ರಾಮದ ಯುವಕ ಟ್ರಾಕ್ಟರ್ ಮೂಲಕ ಸಂಚರಿಸುವಾಗ ಸೇತುವೆ ಮೇಲಿದ್ದ ತೆಗ್ಗುಗುಂಡಿಗೆ ವಾಹನ ಇಳಿದಾಗ, ಹರಸಾಹಸ ಪಟ್ಟು ತೆಗ್ಗುಗುಂಡಿ ದಾಟಿಸುವಾಗ ಸೇತುವೆಗೆ ತಡೆಗೋಡೆ ಇಲ್ಲದಿರುವುರಿಂದ ಕೆಳಗೆ ಬಿದ್ದು ಗಂಭಿರ ಗಾಯಗೊಂಡಿದ್ದಾನೆ. ಇನ್ನಾದರೂ ಸಂಭಂಧಪಟ್ಟವರು ನಿದ್ದೆಯಿಂದ ಹೋರಬಂದು ಅವಘಡಗಳನ್ನು ತಪ್ಪಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಾ.ಕೆ.ಬಿ.ಹಿರೇಮಠ : ಅಧ್ಯಕ್ಷರು ಗ್ರಾಪಂ ಲಿಂಗನಮಠ
ಅವಘಡಗಳನ್ನು ಸಂಭವಿಸುದನ್ನು ಅರಿತು ಕಳೆದ ಮಾರ್ಚ ತಿಂಗಳಿನಲ್ಲೆ ಕಡಬಗಟ್ಟಿ ಕ್ರಾಸನಲ್ಲಿರುವ ಜಿವಿಆರ್ ಆಫಿಸ್ ಗೆ ಭೇಟಿ ನೀಡಿ ಲಿಂಗನಮಠ ಗ್ರಾಪಂ ಮುಖಾಂತರ ಮನವಿಯನ್ನು ಸಲ್ಲಿಸಿ, ಸಂಭಂಧಪಟ್ಟ ಅಧಿಕಾರಿಗಳ ಜೋತೆ ನೇರವಾಗಿ ಮಾತನಾಡಿದ್ದೆವೆ, ಆದರೂ ಇನ್ನೂ ವರೆಗೆ ಸಮಸ್ಯಗೆ ಪರಿಹಾರ ಸಿಕ್ಕಿಲ್ಲ, ಒಂದು ವೇಳೆ ಸಂಭಂಧಪಟ್ಟವರ ನಿರ್ಲಕ್ಷಣ ಹೀಗೆ ಮುಂದುವರೆದರೆ ಸುತ್ತಮುತಲಿನ ಗ್ರಾಮಸ್ಥರೆಲ್ಲರೂ ಸೇರಿಕೋಂಡು “ರಸ್ತಾ ರೋಖೋ” ಮಾಡಲಾಗುವದು.
ಅಧಿಕಾರಿಗಳುಜಿವಿಆರ್ ಕಡಬಗಟ್ಟಿ ಕ್ರಾಸ್ ಆಫೀಸ್ :