RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ :ಜಲಪಾತಕ್ಕೆ ಈಜಲು ತೆರಳಿದ ವ್ಯಕ್ತಿಯ ಸಾವು : ಗೋಕಾಕ ಫಾಲ್ಸದಲ್ಲಿ ಘಟನೆ

ಗೋಕಾಕ :ಜಲಪಾತಕ್ಕೆ ಈಜಲು ತೆರಳಿದ ವ್ಯಕ್ತಿಯ ಸಾವು : ಗೋಕಾಕ ಫಾಲ್ಸದಲ್ಲಿ ಘಟನೆ 

ಜಲಪಾತಕ್ಕೆ ಹಾರುತ್ತಿರುವ ದೃಶ್ಯ

ಜಲಪಾತಕ್ಕೆ ಈಜಲು ತೆರಳಿದ ವ್ಯಕ್ತಿಯ ಸಾವು : ಗೋಕಾಕ ಫಾಲ್ಸದಲ್ಲಿ ಘಟನೆ

ಗೋಕಾಕ ಜೂ 16 : ಈಜಲು ತೆರಳಿದ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಶನಿವಾರ ಸಾಯಂಕಾಲ ತಾಲೂಕಿನ ಗೋಕಾಕ ಫಾಲ್ಸ ಜಲಪಾತದಲ್ಲಿ ನಡೆದಿದೆ

ಘಟಪ್ರಭಾ ಪಟ್ಟಣದ ನಿವಾಸಿ ರಮಜಾನ ಉಸ್ಮಾನ್ ಖಾಜಿ (35) ಸಾವನ್ನಪ್ಪಿರುವ ದುರ್ಧೈವಿಯಾಗಿದ್ದು , ರಮಜಾನ ಹಬ್ಬದ ಪ್ರಯುಕ್ತ ಊರಿಗೆ ಬಂದಿದ ಇತನು ಗೆಳೆಯರೊಂದಿಗೆ ಗೋಕಾಕ ಫಾಲ್ಸ ಜಲಪಾತಕ್ಕೆ ಈಜಲು ತೆರಳಿದ ಸಂಧರ್ಭದಲ್ಲಿ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ . ಇದಕ್ಕೆ ಸಂಬಂಧಿಸಿದಂತೆ ವಿಡಿಯೋ ಒಂದು ಸಮಾಜಿಕ ಜಾಲತಾಣಗಳಲ್ಲಿ ಹರದಾಡುತ್ತಿದೆ

ಗೋಕಾಕ ಶಹರ ಠಾಣಾವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದ್ದು , ಮೃತದೇಹಕ್ಕಾಗಿ ಶೋಧ ಕಾರ್ಯ ನಡೆದಿದೆ ಎಂದು ತಿಳಿದುಬಂದಿದೆ

Related posts: