RNI NO. KARKAN/2006/27779|Thursday, January 15, 2026
You are here: Home » breaking news » ಗೋಕಾಕ:ಮೆಟ್ರಿಕ್ ಪೂರ್ವ , ಮೆಟ್ರಿಕ ನಂತರದ ಬಾಲಕರ ವಸತಿ ನಿಲಯಗಳಿಗೆ ಅರ್ಜಿ ಆಹ್ವಾನ

ಗೋಕಾಕ:ಮೆಟ್ರಿಕ್ ಪೂರ್ವ , ಮೆಟ್ರಿಕ ನಂತರದ ಬಾಲಕರ ವಸತಿ ನಿಲಯಗಳಿಗೆ ಅರ್ಜಿ ಆಹ್ವಾನ 

ಸಾಂಧರ್ಭಿಕ ಚಿತ್ರ

ಮೆಟ್ರಿಕ್ ಪೂರ್ವ , ಮೆಟ್ರಿಕ ನಂತರದ ಬಾಲಕರ ವಸತಿ ನಿಲಯಗಳಿಗೆ ಅರ್ಜಿ ಆಹ್ವಾನ

ಗೋಕಾಕ ಮೇ 25 : ಪರಿಶಿಷ್ಟ ವರ್ಗದ ಇಲಾಖೆಯ ವತಿಯಿಂದ ನಡೆಯುತ್ತಿರುವ ಮೇಲ್ಮನಹಟ್ಟಿಯ ಮೆಟ್ರಿಕ್ ಪೂರ್ವ ವಸತಿ ನಿಲಯಕ್ಕೆ 5-10 ತರಗತಿ ಹಾಗೂ ಗೋಕಾಕದ ಮೆಟ್ರಿಕ ನಂತರದ ಬಾಲಕರ ವಸತಿ ನಿಲಯ (ಎ) ಮತ್ತು (ಬಿ) ಇಲ್ಲಿಗೆ ಕಾಲೇಜ ವಿದ್ಯಾರ್ಥಿಗಳಿಂದ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪ್ರವೇಶ ಪಡೆಯಲು ಇಚ್ಚಿಸುವ ವಿದ್ಯಾರ್ಥಿಗಳು ಆನ್‍ಲೈನ ಮುಖಾಂತರ ಇಲಾಖೆಯ ವೆಬ್‍ಸೈಟ್ www.tw.kar.nic.in ನಲ್ಲಿ ಜೂನ್ 30 ರೊಳಗಾಗಿ ಅರ್ಜಿ ಸಲ್ಲಿಸಬೇಕು. ನಂತರ ಸಲ್ಲಿಸಿದ ಅರ್ಜಿ ಪ್ರತಿಯೊಂದಿಗೆ ಧೃಡಿಕರಿಸಿದ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಬುಕ್, ಆಧಾರ ಕಾರ್ಡ ಝರಾಕ್ಸ ಪ್ರತಿಗಳನ್ನು ಲಗತ್ತಿಸಿ, ತಾಲೂಕಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಛೇರಿಗೆ ಸಲ್ಲಿಸಬೇಕೆಂದು ತಾಲೂಕಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts: