ಖಾನಾಪುರ :ಜೆಡಿಎಸ್ ಅಭ್ಯರ್ಥಿಯಾಗಿ ನಾಸಿರ ಬಾಗವಾನ ನಾಮಪತ್ರ ಸಲ್ಲಿಕೆ

ಜೆಡಿಎಸ್ ಅಭ್ಯರ್ಥಿಯಾಗಿ ನಾಸಿರ ಬಾಗವಾನ ನಾಮಪತ್ರ ಸಲ್ಲಿಕೆ
ಖಾನಾಪುರ ಏ 23 : ಖಾನಾಪುರ ವಿಧಾನ ಸಭಾ ಮತ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾದ ನಾಸೀರ ಬಾಗವಾನ ಅವರು ತಮ್ಮ ಸಂಗಡಿಗರೊಂದಿಗೆ ಚುನಾವಣಾ ಅಧಿಕಾರಿ ಬಾಲಕೃಷ್ಣ ಅವರಿಗೆ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸುವ ಮುಂಚೆ ಖಾನಾಪುರದ ಚೌರಾಶಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ತದನಂತರ ಬಸವೇಶ್ವರ, ಬಿ.ಆರ್.ಅಂಬೇಡ್ಕರ್ ಮತ್ತು ಶಿವಾಜಿ ಮಹಾರಾಜರ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡುವುದರ ಕಾರ್ಯಕರ್ತರ ಜೋತೆಗೆ ತಹಶಿಲ್ದಾರ ಕಛೇರಿಗೆ ಆಗಮಿಸಿ ಚುನಾವಣಾ ಅಧಿಕಾರಿಯಾದ ಬಾಲಕೃಷ್ಣ ಅವರಿಗೆ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸುವ ಸಂಧರ್ಭದಲ್ಲಿ ಜೆಡಿಎಸ್ ಮುಖಂಡರಾದ ವಕೀಲ ಸಿ.ಬಿ.ಅಂಬೋಜಿ, ಬ್ಲಾಕ್ ಅಧ್ಯಕ್ಷ ಮಹಾಂತೇಶ ಸಂಬರಗಿ, ಬಿಎಸ್ಪಿ ಶರದ ಹೊನ್ನಾಯಕ, ರಯೀಸ ಬಾಗವಾನ ಅವರು ಜೋತೆಗಿದ್ದರು.