RNI NO. KARKAN/2006/27779|Monday, August 4, 2025
You are here: Home » breaking news » ಮೂಡಲಗಿ:ಮೂಡಲಗಿ ವಲಯವು ಶೈಕ್ಷಣಿಕವಾಗಿ ಎಲ್ಲ ಚಟುವಟಿಕೆಗಳಲ್ಲಿ ಮುಂದಿದ್ದೆ: ಡಿಡಿಪಿಐ ಎಮ್.ಜಿ ದಾಸರ

ಮೂಡಲಗಿ:ಮೂಡಲಗಿ ವಲಯವು ಶೈಕ್ಷಣಿಕವಾಗಿ ಎಲ್ಲ ಚಟುವಟಿಕೆಗಳಲ್ಲಿ ಮುಂದಿದ್ದೆ: ಡಿಡಿಪಿಐ ಎಮ್.ಜಿ ದಾಸರ 

ಮೂಡಲಗಿ ವಲಯವು ಶೈಕ್ಷಣಿಕವಾಗಿ ಎಲ್ಲ ಚಟುವಟಿಕೆಗಳಲ್ಲಿ ಮುಂದಿದ್ದೆ: ಡಿಡಿಪಿಐ ಎಮ್.ಜಿ ದಾಸರ

ಮೂಡಲಗಿ ಏ 15 : ಮೂಡಲಗಿ ವಲಯವು ಶೈಕ್ಷಣಿಕವಾಗಿ ಎಲ್ಲ ಚಟುವಟಿಕೆಗಳಲ್ಲಿ ಮುಂದಿದ್ದು, ಮುರಾರ್ಜಿ ಪ್ರವೇಶ ಬಯಸಿ ಅರ್ಜಿ ಸಲ್ಲಿಸಿದ್ದ 5120 ಮಕ್ಕಳಲ್ಲಿ 185 ಮಕ್ಕಳು ಗೈರಾಗುವ ಮೂಲಕ 4935 ಮಕ್ಕಳು ಪರೀಕ್ಷೆಗೆ ಹಾಜರಾಗಿ ರಾಜ್ಯದಲ್ಲಿಯೇ ಅತಿ ಹೆಚ್ಚು ಮಕ್ಕಳು ಪ್ರವೇಶ ಪರೀಕ್ಷೆಗೆ ಹಾಜರಾಗಿರುವ ವಲಯವಾಗಿದೆ ಎಂದು ಚಿಕ್ಕೋಡಿ ಡಿಡಿಪಿಐ ಎಮ್.ಜಿ ದಾಸರ ತಿಳಿಸಿದರು.
ಅವರು ರವಿವಾರ ಜರುಗಿದ ಮುರಾರ್ಜಿ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಯ ಮೂಡಲಗಿ ಮತ್ತು ನಾಗನೂರ ಕೇಂದ್ರಗಳಲ್ಲಿ ಭೇಟಿ ನೀಡಿ ಇಲ್ಲಿಯ ಸ್ಪರ್ಧಾತ್ಮಕ ಪರೀಕ್ಷೆಯ ಭಾಗವಹಿಸುವಿಕೆ ಕುರಿತು ಹರ್ಷವ್ಯಕ್ತಪಡಿಸಿದರು. ಮೂಡಲಗಿ ತಾಲೂಕಿನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕುರಿತು ಪ್ರಾಥಮಿಕ ಹಂತದಿಂದ ಇಂತಹ ತಯಾರಿಯಾಗುವದರಿಂದ ಉನ್ನತ ತರಗತಿಯಗಳಲ್ಲಿ ಅತಿ ಹೆಚ್ಚಿನ ಚಟುವಟಿಕೆಗಳಲ್ಲಿ ಭಾಗವಹಿಸಲು ಸಹಾಯಕವಾಗುತ್ತದೆ. ಶೈಕ್ಷಣಿಕವಾಗಿ ಮಗುವಿನ ಅಭಿವೃದ್ಧಿ ಕಾಣಲು ಮಗುವಿಗೆ ಪ್ರಾರಂಭದಲ್ಲಿಯೇ ಸ್ಪರ್ಧಾ ಮನೋಬಾವಣೆಯನ್ನು ಬೆಳೆಸಿದಾಗ ಮುಂದೆ ತನ್ನ ಭವಿಷ್ಯ ರೂಪಿಸಿಕೋಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಚಿಕ್ಕೋಡಿ ಡೈಟ್ ಪ್ರಾಚಾರ್ಯ ಮೋಹನ ಜೀರಗ್ಯಾಳ, ಡಿಡಿಪಿಐ ಕಛೇರಿ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಮೂಡಲಗಿ ಬಿ.ಇ.ಒ ಅನೀಲಕುಮಾರ ಗಂಗಾಧರ ಅವರನ್ನೂಳಗೊಂಡ ಮೂರು ತಂಡಗಳು 21 ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಮೇಲ್ವಿಚಾರಣೆ ನಡೆಸಿದರು. ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣಾಧಿಕಾರಿ ಎಸ್.ಎ ನಾಡಗೌಡರ, ಪಿ.ಬಿ ಮದಬಾಂವಿ, ಆರ್.ಎಸ್ ಕಡಿ, ಕೆ.ಎಲ್.ಮೀಶಿ, ಪರೀಕ್ಷಾ ಕೇಂದ್ರಗಳ ಅಧಿಕ್ಷಕರು ಹಾಗೂ ಮೆಲ್ವಿಚಾರಕರು ಹಾಜರಿದ್ದರು. ಸಿ.ಪಿ.ಐ ವೆಂಕಟೇಶ ಮುರನಾಳ ಹಾಗೂ ಸಿಬ್ಬಂದಿ ವರ್ಗ ಅಗತ್ಯ ಬಂದೂ ಬಸ್ತ ಏರ್ಪಡಿಸಿದ್ದರು.

Related posts: