ಗೋಕಾಕ:ಬಿಲಕುಂದಿಯಲ್ಲಿ ಘೋಡಗೇರಿಯ ಲಕ್ಷ್ಮೀ ತಳವಾರಗೆ ಸನ್ಮಾನ

ಬಿಲಕುಂದಿಯಲ್ಲಿ ಘೋಡಗೇರಿಯ ಲಕ್ಷ್ಮೀ ತಳವಾರಗೆ ಸನ್ಮಾನ
ಗೋಕಾಕ ಎ 11 : ಗೋಕಾಕ ಸಮಗ್ರ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ತಾಲೂಕಿನ ಬಿಲಕುಂದಿ ಗ್ರಾಮದ ಶ್ರೀ ಬಸವೇಶ್ವರ ಕನ್ನಡ ಮಾಧ್ಯಮ ಪೂರ್ವ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ 2017-18ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದಶಮಾನೋತ್ಸವ ಮತ್ತು ಬಿಳ್ಕೋಡುವ ಸಮಾರಂಭವು ದಿ.14ರಂದು ಮುಂಜಾನೆ 8 ಗಂಟೆಗೆ ಶ್ರೀ ಬಸವೇಶ್ವರ ಶಾಲಾ ಆವರಣದಲ್ಲಿ ಜರುಗಲಿದ್ದು ಈ ಸಮಾರಂಭಕ್ಕೆ ವಿಶೇಷ ಆಹ್ವಾನಿತರಾಗಿ ಮತ್ತು ಸನ್ಮಾನಿತರಾಗಿ ಜೀ ಕನ್ನಡ ವಾಹಿನಿಯ ಸರಿಗಮಪ ಲಿಟಲ್ ಚಾಂಪಿಯನ್ ಸ್ಪರ್ಧಾಳು ಘೋಡಗೇರಿಯ ಲಕ್ಷ್ಮೀ ತಳವಾರ ಆಗಮಿಸುವರು.
ಸಮಾರಂಭದ ದಿವ್ಯ ಸಾನಿಧ್ಯವನ್ನು ಬಿಲಕುಂದಿಯ ಸಿದ್ಧಾರೂಢಮಠದ ಮಾತೋಶ್ರೀ ಶಾಂತಮ್ಮಾತಾಯಿ ವಹಿಸುವರು.ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಬಸಪ್ಪ ಕಳ್ಳಿಗುದ್ದಿ ಉದ್ಘಾಟಿಸುವರು. ಮಹಾದೇವ ಹೊಸತೋಟ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಪ್ರೋ: ಮಲ್ಲಿಕಾರ್ಜುನ ಹೊಟ್ಟಿನ್ನವರ, ಪಂಡಿತಗೌಡ ನಾಯ್ಕರ, ಗುರುನಾಥ ಜೊತ್ತೇನ್ನವರ, ವಿಠ್ಠಲ ಸವದತ್ತಿ, ಮಲ್ಲಪ್ಪ ಬಳಿಗಾರ, ಶಿವಲಿಂಗಪ್ಪ ರಾ.ಬಳಿಗಾರ, ಭಾರತಿ ಚಿಪ್ಪಲಕಟ್ಟಿ ಆಗಮಿಸುವರು. ಸಂಜೆ 5 ಗಂಟೆಗೆ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಮತ್ತು ಮನರಂಜನಾ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸುಣಧೋಳಿಯ ಶ್ರೀ ಜಡಿಸಿದ್ದೇಶ್ವರ ಮಠದ ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಜಿ ವಹಿಸುವರು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಶಿವಲಿಂಗಪ್ಪ ಮ.ಬಳಿಗಾರ ವಹಿಸುವರು. ಧಾರವಾಡದ ಕೃಷಿ ವಿಶ್ವವಿದ್ಯಾಲಯದ ನಿರ್ದೇಶಕ ಡಾ: ರಾಜೇಂದ್ರ ಸಣ್ಣಕ್ಕಿ, ವಿ.ವೈ.ಕೊಳದೂರ, ಶಿವನಗೌಡ ಪಾಟೀಲ, ವಿಕ್ರಮ ಅಂಗಡಿ, ಪ್ರಕಾಶ ಹಾದಿಮನಿ, ಲಲಿತ ಭಂಡಾರಿ ಹಾಗೂ ಮಹಾನಿಂಗಪ್ಪ ನಾಯ್ಕ, ಮಹಾದೇವ ಭಂಗಿ, ಪ್ರಭು ಇಟ್ನಾಳ, ಶಿವಪ್ಪ ಕಳ್ಳಿಗುದ್ದಿ ಆಗಮಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಶಿವಲಿಂಗಪ್ಪ ಮ.ಬಳಿಗಾರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.