ಬೆಳಗಾವಿ:ಪುರೋಹಿತ ಶಾಹಿಗಳ ಕೈಗಳಲ್ಲಿ ಸಿಲುಕಿ ಧರ್ಮಗಳು ನಲುಗುತ್ತಿವೆ : ನಿಜಗುಣಾನಂದ ಸ್ವಾಮೀಜಿ
ಪುರೋಹಿತ ಶಾಹಿಗಳ ಕೈಗಳಲ್ಲಿ ಸಿಲುಕಿ ಧರ್ಮಗಳು ನಲುಗುತ್ತಿವೆ : ನಿಜಗುಣಾನಂದ ಸ್ವಾಮೀಜಿ
ಬೆಳಗಾವಿ ಡಿ 6: ಪುರೋಹಿತ ಶಾಹಿಗಳ ಕೈಯಲ್ಲಿ ಉಳಿದ ಧರ್ಮಗಳು ನಲುಗುತ್ತಿವೆ. ಟಿ.ವಿ ಮಾಧ್ಯಮಗಳು ಒಂದೊಂದು ಪಕ್ಷಕ್ಕೆ ಸೀಮಿತವಾಗಿವೆ ಎಂದು ನಿಜಗುಣಾನಂದ ಸ್ವಾಮೀಜಿ ಹೇಳಿದರು. ನಗರದ ಸದಾಶಿವನಗರದ ಬುದ್ಧ ಬಸವ ಅಂಬೇಡ್ಕರ ಸ್ಮಶಾನದಲ್ಲಿ ನಡೆಯುತ್ತಿರುವ ಮಾನವ ಬಂಧುತ್ವ ವೇದಿಕೆವತಿಯಿಂದ ಆಯೋಜಿತ ಮೌಢ್ಯ ವಿರೋಧಿ ದಿನಾಚರಣೆಯಲ್ಲಿ ಮಾತನಾಡುತ್ತ ಅವರು ಮಾಧ್ಯಮ ಎಂಬುದು ಉದ್ಯಮವಾಗಿದೆ. 98% ಜನರನ್ನು 2% ಜನರು ನಿಯಂತ್ರಿಸುತ್ತಿದ್ದಾರೆ. ತಿಳಿದವರು ತಿಳಿಯದವರಿಗೆ ತಿಳಿಯದಂತೆ ಹೇಳುವ ಮಾತೇ ಉಪದೇಶ ವಾಗುತ್ತಿದೆ. ಯುವಕರು ಅಂಬೇಡ್ಕರ್ ರವರ ಪುಸ್ತಕಗಳನ್ನು ಓದಬೇಕು. ಧರ್ಮದ ಹೆಸರಿನಲ್ಲಿ ಮೇಲ್ವರ್ಗದವರು ಕೆಳವರ್ಗದವರ ಮೇಲೆ ಅತ್ಯಾಚಾರ ನಡೆಸಿದ್ದಾರೆ ಇದಕ್ಕೆ ದೇವದಾಸಿ ಪದ್ಧತಿಯೇ ಸಾಕ್ಷಿ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸತೀಶ ಜಾರಕಿಹೊಳಿ, ನಟ ಪ್ರಕಾಶ ರೈ ಮತ್ತಿತರರು ಉಪಸ್ಥಿತರಿದ್ದರು.