RNI NO. KARKAN/2006/27779|Tuesday, October 13, 2026
You are here: Home » breaking news » ಗೋಕಾಕ:ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಬಾಯ್ಲರ ಪ್ರದೀಪನ ಕಾರ್ಯಕ್ರಮಕ್ಕೆ ಚಾಲನೆ

ಗೋಕಾಕ:ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಬಾಯ್ಲರ ಪ್ರದೀಪನ ಕಾರ್ಯಕ್ರಮಕ್ಕೆ ಚಾಲನೆ 

ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಬಾಯ್ಲರ ಪ್ರದೀಪನ ಕಾರ್ಯಕ್ರಮಕ್ಕೆ ಚಾಲನೆ

ಗೋಕಾಕ ಅ 12 : ಸಹಕಾರಿ ಕ್ಷೇತ್ರದ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯು ಈ ಭಾಗದ ರೈತರ ಜೀವನಾಡಿಯಾಗಿ ಅವರ ಆರ್ಥಿಕ ಪ್ರಗತಿಯೊಂದಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅರಭಾಂವಿ ದುರದುಂಡೇಶ್ವರ ಮಠದ ಶ್ರೀ ಗುರುಬಸವಲಿಂಗ ಮಹಾಸ್ವಾಮಿಗಳು ಹೇಳಿದರು.
ಅವರು, ರವಿವಾರದಂದು ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಬಾಯ್ಲರ ಪ್ರದೀಪನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ರೈತ ಬಾಂಧವರು ನಮ್ಮದೆ ಕಾರ್ಖಾನೆ ಎಂದು ಸಹಕಾರ ನೀಡುತ್ತ ಅದರ ಅಭಿವೃದ್ಧಿಗೆ ಸಹಕಾರ ನೀಡುತ್ತ ಬಂದಿದ್ದಿರಿ, ಮುಂದೆಯು ಸಹಕಾರ ನೀಡುತ್ತ ಅದರ ಅಭಿವೃದ್ಧಿಗೆ ಸಹಕಾರ ನೀಡಿ ಅದರ ಅಭಿವೃದ್ಧಿಗೆ ಸಹಕರಿಸುತ್ತಿರುವದು ವಿಶೇಷ, ಈದೇ ರೀತಿ ಮುಂದೇಯು ಸಹಕಾರ ನೀಡಿ, ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಮಾರ್ಗದರ್ಶನದಲ್ಲಿ ಆಡಳಿತ ಮಂಡಳಿ, ಸಿಬ್ಬಂಧಿಯ ಶ್ರಮದೊಂದಿಗೆ ಹೆಮ್ಮರವಾಗಿ ಬೆಳೆಯಲೆಂದು ಹಾರೈಸಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಚೇರಮನ ಶಿದ್ಲಿಂಗಪ್ಪ ಕಂಬಳಿ, ಮಲ್ಲಿಕಾರ್ಜುನ ಕಬ್ಬೂರ, ಬಸನಗೌಡ ಪಾಟೀಲ, ಕೆಂಚನಗೌಡ ಪಾಟೀಲ, ಗಿರೀಶ ಹಳ್ಳೂರ, ಮಹಾದೇವಪ್ಪ ಭೋವಿ, ಭೂತಪ್ಪ ಗೋಡೇರ, ಮಾಳಪ್ಪ ಜಾಗನೂರ, ಲಕ್ಷ್ಮಣ ಗಣಪ್ಪಗೋಳ, ಶಿವಲಿಂಗಪ್ಪ ಪೂಜೇರಿ, ಜಗದೀಶ ಬಂಡ್ರೋಳಿ, ಅರುಣ ಮಹಾರೆಡ್ಡಿ, ಆರೀಫ ಪಾಟೀಲ, ಅಲ್ಲಪ್ಪ ಗುಡೇನ್ನವರ, ಲಕ್ಕವ್ವ ಬೆಳಗಲಿ, ಶಾಹೀನ ಅಖ್ತರ, ವಿನೀತ ಪಾಟೀಲ ಇದ್ದರು.

Related posts: