ಗೋಕಾಕ:ಅರಣ್ಯ ಇಲಾಖೆಯಲ್ಲಿ ಅರಣ್ಯ ವೀಕ್ಷಕರ ಪಾತ್ರ ಮಹತ್ವವಾಗಿದೆ : ಆರ್.ಎಫ್.ಓ ಹೆಗಡೆ

ಅರಣ್ಯ ಇಲಾಖೆಯಲ್ಲಿ ಅರಣ್ಯ ವೀಕ್ಷಕರ ಪಾತ್ರ ಮಹತ್ವವಾಗಿದೆ : ಆರ್.ಎಫ್.ಓ ಹೆಗಡೆ
ಗೋಕಾಕ ಜ 31 : ಘಟಪ್ರಭಾ ವಿಭಾಗದ ಗೋಕಾಕ ವಲಯದ ಅರಣ್ಯ ಇಲಾಖೆಯಲ್ಲಿ 34 ವರ್ಷಗಳ ಸೇವೆಯ ನಂತರ ಸೇವಾ ನಿವೃತ್ತಿ ಹೊಂದಿದ ಅರಣ್ಯ ವೀಕ್ಷಕ ಅಬ್ದುಲರಜಾಕ ಜಾಂಬೋಟಕರ ಅವರಿಗೆ ಅರಣ್ಯ ಇದಾಖೆಯ ಸಿಬ್ಬಂದಿಗಳು ಶನಿವಾರದಂದು ನಗರದ ವಲಯ ಅರಣ್ಯಾಧಿಕಾರಿಗಳ ಕಛೇರಿಯಲ್ಲಿ ಸತ್ಕರಿಸಿ, ಬೀಳ್ಕೋಟರು.
ಇದೇ ಸಂದರ್ಭದಲ್ಲಿ ಮಾತನಾಡಿದ ವಲಯ ಅರಣ್ಯ ಅಧಿಕಾರಿ ಆನಂದ ಹೆಗಡೆ ಅರಣ್ಯ ಇಲಾಖೆಯಲ್ಲಿ ಅರಣ್ಯ ವೀಕ್ಷಕರ ಪಾತ್ರ ಮಹತ್ವವಾಗಿದ್ದು, ಅರಣ್ಯ ರಕ್ಷಣೆಯಲ್ಲಿ ಅವರ ಕಾರ್ಯ ಅತ್ಯಂತ ಹಿರಿಯದಾಗಿದೆ. ಅರಣ್ಯ ವೀಕ್ಷಕ ಅಬ್ದುಲರಜಾಕ ಅವರು ಕಳೆದ 34 ವರ್ಷಗಳಿಂದ ಅಹರ್ನಿಶಿ ಕಾರ್ಯಮಾಡಿದ್ದಾರೆ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಹನುಮಂತ ಇಂಗಳಗಿ, ಮಲ್ಲಪ್ಪ ತೇಲಿ, ಸಾಗರ ಪನಗುತ್ತಿ, ಸಂಪದ ಶಿಂಪಿ , ಎಚ್.ಜಿ.ಹಮ್ಮನ್ನವರ, ಸುರೇಶ ಕುಂದರಗಿ, ಗಸ್ತು ಅರಣ್ಯ ಪಾಲಕ ಮಹಾಂತೇಶ ಜಾಮೂನಿ, ಎಸ್.ಡಿ.ಎ ವಾಸಿಮ್ ಬಾಂಗಿ ಉಪಸ್ಥಿತರಿದ್ದರು.
