ಗೋಕಾಕ:ಚಾಂಪಿಯನ್ ಆಫ್ ಚಾಂಪಿಯನ್ ಆಗಿ ದಾವಣಗೆರೆಯ ಮಂಜುನಾಥ್ ಐಯರ್ ಆಯ್ಕೆ

ಚಾಂಪಿಯನ್ ಆಫ್ ಚಾಂಪಿಯನ್ ಆಗಿ ದಾವಣಗೆರೆಯ ಮಂಜುನಾಥ್ ಐಯರ್ ಆಯ್ಕೆ
ಗೋಕಾಕ ಜ 20 : 12ನೇ ಸತೀಶ್ ಶುಗರ್ಸ ಕ್ಲಾಸಿಕ ದೇಹಧಾಡ್ಯ ತಾಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದ ಸ್ವರ್ಧೆಗಳು ಸೋಮವಾರದಂದು ಸಾಯಂಕಾಲ ನಗರದ ಶ್ರೀ ಮಹರ್ಷಿ ವಾಲ್ಮೀಕಿ ತಾಲೂಕು ಕ್ರೀಡಾಂಗಣದಲ್ಲಿ ನಿರ್ಮಿಸಿದ ಭವ್ಯ ವರ್ಣರಂಜಿತ ವೇದಿಕೆಯಲ್ಲಿ ಜರುಗಿದವು.
ರಾಜ್ಯ ಮಟ್ಟದ ದೇಹಧಾಡ್ಯ ಸ್ವರ್ಧೆಯಲ್ಲಿ ಚಾಂಪಿಯನ್ ಆಫ್ ಚಾಂಪಿಯನ್ ಆಗಿ ದಾವಣಗೆರೆಯ ಮಂಜುನಾಥ್ ಐಯರ್ ಆಯ್ಕೆಯಾಗಿ ನಗದು 2 ಲಕ್ಷರೂ ಮತ್ತು ಆಕರ್ಷಕ ಟ್ರೋಫಿಯನ್ನು ಪಡೆದರೆ, ಮೊದಲನೇಯ ರನ್ನರಫ್ ಆಗಿ ಬೆಂಗಳೂರಿನ ಕುಮಾರ ಕೆ 1 ಲಕ್ಷ ರೂ ನಗದು ಮತ್ತು ಟ್ರೋಫಿ , ಎರಡನೇ ರನ್ನರಫ್ ಆಗಿ ಉಡುಪಿಯ ಸ್ವರೂಪ ಬಂಗೇರಾ 50 ಸಾವಿರ ನಗದು ಮತ್ತು ಟ್ರೋಫಿ ಹಾಗೂ ಬೆಸ್ಟ್ ಫೋಸರ ಆಗಿ ದಾವಣಗೆರೆಯ ವರೂಣ ಕುಮಾರ್ ಆಯ್ಕೆಯಾಗಿ 10 ಸಾವಿರ ನಗದು ಮತ್ತು ಟ್ರೋಫಿಯನ್ನು ತಮ್ಮದಾಗಿಸಿಕೊಂಡರು.
ಜಿಲ್ಲಾ ಮಟ್ಟದ ದೇಹಧಾಡ್ಯ ಸ್ವರ್ಧೆಯಲ್ಲಿ ಚಾಂಪಿಯನ್ ಆಫ ಚಾಂಪಿಯನ್ ಆಗಿ ಬೆಳಗಾವಿಯ ಪ್ರಶಾಂತ್ ಕನ್ನೂಕರ ಆಯ್ಕೆಯಾಗಿ ನಗದು 1.50 ಲಕ್ಷ ರೂ ಮತ್ತು ಆಕರ್ಷಕ ಟ್ರೋಫಿಯನ್ನು ಪಡೆದರೆ, ಮೊದಲನೇ ರನ್ನರಫ್ ಆಗಿ ಬೆಳಗಾವಿಯ ವೆಂಕಟೇಶ್ ತಹಶೀಲ್ದಾರ ನಗದು 1 ಲಕ್ಷ ನಗದು ಮತ್ತು ಟ್ರೋಫಿ, ಎರಡನೇ ರನ್ನರಫ್ ಆಗಿ ಬೆಳಗಾವಿಯ ವಿಶಾಲ ಚವ್ಹಾಣ 50 ಸಾವಿರ ನಗದು ಮತ್ತು ಟ್ರೋಫಿ ಹಾಗೂ ಬೆಸ್ಟ್ ಪೋಸರ್ ಆಗಿ ಬೆಳಗಾವಿಯ ಉಮೇಶ್ ಗಣ್ಣಗನೆ ಆಯ್ಕೆಯಾಗಿ 10 ಸಾವಿರ ನಗದು ಮತ್ತು ಟ್ರೋಫಿಯನ್ನು ತಮ್ಮದಾಗಿಸಿಕೊಂಡರು.
ತಾಲೂಕು ಮಟ್ಟದ ದೇಹದಾಡ್ಯ ಸ್ವರ್ಧೆಯಲ್ಲಿ ಚಾಂಪಿಯನ್ ಆಫ್ ಚಾಂಪಿಯನ್ ಆಗಿ ಆಕಾಶ ಹಂಜಿ ಆಯ್ಕೆಯಾಗಿ 50 ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿಯನ್ನು ಪಡೆದರೆ, ಮೊದಲನೇ ರನ್ನರಫ್ ಆಗಿ ಸಾಗರ ಹಾದಿಮನಿ ನಗದು 25 ಸಾವಿರ ಮತ್ತು ಟ್ರೋಫಿ, ಎರಡನೇ ರನ್ನರಫ್ ಆಗಿ ಸಾಗರ ಕಳ್ಳಿಮನಿ ನಗದು 15 ಸಾವಿರ ಮತ್ತು ಟ್ರೋಫಿ ಹಾಗೂ ಬೆಸ್ಟ್ ಪೋಸರ ಆಗಿ ಇರ್ಫಾನ ಇರಾನಿ ನಗದು 10 ಸಾವಿರ ಮತ್ತು ಟ್ರೋಫಿಯನ್ನು ತಮ್ಮದಾಗಿಸಿಕೊಂಡರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ರೂವಾರಿಗಳಾದ ಲೋಕೋಪಯೋಗಿ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಡಿ.ಸಿ.ಸಿ ಮತ್ತು ಆಪೇಕ್ಸ ಬ್ಯಾಂಕ್ ನಿರ್ದೇಶಕ ರಾಹುಲ್ ಜಾರಕಿಹೊಳಿ, ಐಬಿಬಿಎಫ್ ಸದಸ್ಯ ಅಜೀತ ಸಿದ್ದನ್ನವರ,ಕೆಎಬಿಬಿ ಅಧ್ಯಕ್ಷ ಜೆ.ನಿಲಕಂಠ, ಪ್ರಧಾನ ಕಾರ್ಯದರ್ಶಿ ಜೆ.ಡಿ.ಭಟ್ಟ್, ಬೆಳಗಾವಿ ಜಿಲ್ಲಾ ದೇಹಧಾಡ್ಯ ಸಂಘದ ಅಧ್ಯಕ್ಷ ಗಂಗಾಧರ ಎಂ, ಕಾರ್ಯದರ್ಶಿ ಹೆಮಂತ್ ಹವಳ, ತಾಲೂಕು ದೇಹಧಾಡ್ಯ ಸಂಘದ ಅಧ್ಯಕ್ಷ ಸಂಜಯ ದೇವರಮನಿ, ಉಪಾಧ್ಯಕ್ಷ ರಿಯಾಜ ಚೌಗಲಾ, ಕಾರ್ಯಾಧ್ಯಕ್ಷ ಕಾಟೇಶ ಗೋಕಾವಿ, ಕಾರ್ಯದರ್ಶಿ ರಮೇಶ ಕಳ್ಳಿಮನಿ ಉಪಸ್ಥಿತರಿದ್ದರು.

