ಗೋಕಾಕ:ನಾಳೆ ಹಡಗಿನಾಳ ಗ್ರಾಮದಲ್ಲಿ ಪ್ರಥಮ ಜಾನಪದ ಸಮ್ಮೇಳನ : ಮಹಾಂತೇಶ ತಾವಂಶಿ ಮಾಹಿತಿ

ನಾಳೆ ಹಡಗಿನಾಳ ಗ್ರಾಮದಲ್ಲಿ ಪ್ರಥಮ ಜಾನಪದ ಸಮ್ಮೇಳನ : ಮಹಾಂತೇಶ ತಾವಂಶಿ ಮಾಹಿತಿ
ಗೋಕಾಕ ಜ 2 : ಗೋಕಾಕ ತಾಲೂಕಿನ ಪ್ರಪ್ರಥಮ ತಾಲೂಕು ಮಟ್ಟದ ಕನ್ನಡ ಜಾನಪದ ಸಮ್ಮೇಳನ ಜನೇವರಿ 4, ರವಿವಾರದಂದು ಹಡಗಿನಾಳ ಗ್ರಾಮದಲ್ಲಿ ನಡೆಯಲಿದೆ ಎಂದು ಕಸಾಪ ಮಾಜಿ ಅಧ್ಯಕ್ಷ ಮಹಾಂತೇಶ ತಾವಂಶಿ ಹೇಳಿದರು .
ಶುಕ್ರವಾರದಂದು ನಗರದ ಶ್ರೀ ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯದಲ್ಲಿ ಜರುಗಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ರವಿವಾರ 04 ಜನವರಿ ಬೆಳಿಗ್ಗೆ : 08-00 ಗಂಟೆಗೆ ರಾಷ್ಟ್ರ ಧ್ವಜಾರೋಹಣವನ್ನು ಎಸ್.ಬಿ.ಸೊಂಡೂರ, ನಾಡ ಧ್ವಜಾರೋಹಣವನ್ನು ಕಜಾಪ ಜಿಲ್ಲಾಧ್ಯಕ್ಷ ಮೋಹನ ಗುಂಡ್ಲೂರ ನೆರವೇರಿಸುವರು, ಪರಿಷತ್ತು ಧ್ವಜಾರೋಹಣವನ್ನು ತಾಲೂಕು ಅಧ್ಯಕ್ಷ ಜಯಾನಂದ ಮಾದರ ನೆರವೇರಿಸುವರು. ಮುಂಜಾನೆ 8:30 ಕ್ಕೆ ನಾಡದೇವಿ ಶ್ರೀ ಭುವನೇಶ್ವರಿ ಹಾಗೂ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ನಡೆಯಲಿದ್ದು, ಕಾಂಗ್ರೆಸ್ ಮುಖಂಡ ಡಾ.ಮಹಾಂತೇಶ ಕಡಾಡಿ ಮೆರವಣಿಗೆಗೆ ಚಾಲನೆ ನೀಡುವರು. ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ , ಪ್ರಕಾಶ ಹಿರೇಮಠ ಮೆರವಣಿಗೆಯ ನೇತೃತ್ವ ವಹಿಸುವರು.
ಮುಂಜಾನೆ 10-30 ಗಂಟೆಗೆ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಶ್ರೀ ಮ.ನಿ.ಪ್ರ.ಸ್ವ. ಮುರುಘರಾಜೇಂದ್ರ ಮಹಾಸ್ವಾಮಿಗಳು ಶೂನ್ಯಸಂಪಾದನಮಠ, ಗೋಕಾಕ ಮತ್ತು ಶ್ರೀ ಮ.ನಿ.ಪ್ರ.ಸ್ವ. ಡಾ.ಅಮರಸಿದ್ಧೇಶ್ವರ ಮಹಾಸ್ವಾಮಿಗಳು ಶ್ರೀ ಅಡವಿಸಿದ್ಧೇಶ್ವರ ಮಠ,ಅಂಕಲಗಿ ಮತ್ತು ಕುಂದರಗಿ ಹಾಗೂ ಪ.ಪೂ.ಶ್ರೀ ಮುತ್ತೇಶ್ವರ ಸ್ವಾಮಿಗಳು ಹಡಗಿನಾಳ ವಹಿಸುವರು.
ಅಧ್ಯಕ್ಷತೆಯನ್ನು ಅರಬಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಹಿಸುವರು. ಸಮ್ಮೇಳನದ ಉದ್ಘಾಟನೆಯನ್ನು ಹಂಪಿ ವಿಶ್ವವಿದ್ಯಾಲಯದ ಜಾನಪದ ವಿಭಾಗದ ಮುಖ್ಯಸ್ಥ ಡಾ.ಸಿ.ಟಿ.ಗುರುಪ್ರಸಾದ ನೆರವೇರಿಸುವರು. ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಕಜಾಪ ರಾಜ್ಯಾಧ್ಯಕ್ಷ ಜಾನಪದ ಡಾ.ಎಸ್.ಬಾಲಾಜಿ ಬಿಡುಗಡೆ ಗೋಳಿಸುವರು.ಗ್ರಂಥ ಲೋಕಾರ್ಪಣೆಯನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ ಶಹಜಾನ ಮುದಕವಿ ನೆರವೇರಿಸುವರು.ಸಮ್ಮೇಳನದ ಸರ್ವಾಧ್ಯಕ್ಷ ಬಸವಣ್ಣೆಪ್ಪ ಕಬಾಡಗಿ, ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ, ಬಸಗೌಡ ಪಾಟೀಲ್, ಡಾ.ರಾಜೇಂದ್ರ ಸಣ್ಣಕ್ಕಿ, ರಾಮಣ್ಣ ಹುಕ್ಕೇರಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರುವರು.
ನಂತರ ಪ್ರಸ್ತುತ ಚಿಂತನೆ ವಿಷಯದ ಕುರಿತು ವಿಚಾರಗೋಷ್ಠಿ, ಜಾನಪದ ಜಗುಲಿ ಕಟ್ಟೆ ಕುರಿತು ಸಂವಾದಗೋಷ್ಠಿ ನಡೆಯಲಿದ್ದು, ನಾಡಿನ 25 ಹೆಸರಾಂತ ಜಾನಪದ ಕಲಾವಿದರಿಗೆ ಡಾ.ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿ ಪ್ರದಾನ ಹಾಗೂ ಗೌರವ ಸನ್ಮಾನ ಸಮಾರಂಭ ಜರುಗಲಿದೆ. ಸಾಯಂಕಾಲ 5 ಘಂಟೆಗೆ ಸಮಾರೋಪ ಸಮಾರಂಭ ಜರುಗಲಿದ್ದು, ದಿವ್ಯ ಸಾನಿಧ್ಯವನ್ನು ಸುಣಧೋಳಿಯ ಶ್ರೀ ಶಿವಾನಂದ ಮಹಾಸ್ವಾಮಿಗಳು ವಹಿಸುವರು. ಅಧ್ಯಕ್ಷತೆಯನ್ನು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ವಹಿಸುವರು.ಸಮ್ಮೇಳನದ ಸರ್ವಾಧ್ಯಕ್ಷ ಬಸವೆಣ್ಣೆಪ್ಪಾ ಕಬಾಡಗಿ, ಕಿರುತೆರೆ ನಟಿ ಶ್ರೀಮತಿ ಮಾಲತಿಶ್ರೀ ಮೈಸೂರು, ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ, ಅಶೋಕ್ ಪೂಜಾರಿ,ಮಹಾಂತೇಶ ತಾವಂಶಿ, ಶ್ರೀಮತಿ ರಜನಿ ಜಿರಗ್ಯಾಳ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರುವರು.ನಂತರ ರಾತ್ರಿ ಜಾನಪದ ಸಡಗರ ಸಂಭ್ರಮ ಕಾರ್ಯಕ್ರಮಗಳು ಜರಗಲಿದ್ದು, ಸಾಹಿತಾಶಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೋಳಿಸಬೇಕು ಎಂದು ಮಹಾಂತೇಶ ತಾವಂಶಿ ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕಜಾಪ ತಾಲೂಕು ಅಧ್ಯಕ್ಷ ಜಯಾನಂದ ಮಾದರ,ಸ್ಮರಣ ಸಂಚಿಕೆ ಸಂಪಾದಕ ಸಾದಿಕ್ ಹಲ್ಯಾಳ, ನ್ಯಾಯವಾದಿ ಬಲದೇವ ಸಣ್ಣಕ್ಕಿ, ವಿದ್ಯಾ ಮಗದುಮ್ಮ, ಈಶ್ವರಚಂದ್ರ ಬೆಟಗೇರಿ, ಡಾ.ಅರುಣ ಸವತಿಕಾಯಿ ಉಪಸ್ಥಿತರಿದ್ದರು.
