ಗೋಕಾಕ:ಬುರ್ಕಾ ಧರಿಸಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ವ್ಯಕ್ತಿ ಪೊಲೀಸರ ವಶಕ್ಕೆ : ಗೋಕಾಕದಲ್ಲಿ ಘಟನೆ

ಬುರ್ಕಾ ಧರಿಸಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ವ್ಯಕ್ತಿ ಪೊಲೀಸರ ವಶಕ್ಕೆ : ಗೋಕಾಕದಲ್ಲಿ ಘಟನೆ
ಗೋಕಾಕ ನ 11: ಬುರ್ಕಾ ಧರಿಸಿಕೊಂಡು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯೋರ್ವನನ್ನು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ಸಂಜೆ ಗೋಕಾಕ ನಗರದಲ್ಲಿ ನಡೆದಿದೆ
ನಗರದ ಹೊಸಪೇಠ ಓಣಿಯಲ್ಲಿ ಬುರ್ಕಾ ಧರಿಸಿಕೊಂಡು ಓಡಾಡುತ್ತಿದ್ದ ವ್ಯಕ್ತಿಯನ್ನು ಕಂಡು ಮುಸ್ತಾಕ ಖಂಡಾಯತ ಎಂಬುವವರು ಹಿಡಿದು ಪೋಲಿಸ್ ಠಾಣೆಯ ವಶಕ್ಕೆ ನೀಡಿದ್ದಾರೆ.
ಬುರ್ಕಾ ಧರಿಸಿದ ವ್ಯಕ್ತಿ ಖನಗಾಂವ ಗ್ರಾಮದ ವೆಂಕಟೇಶ ಸಿದ್ದರಾಯಿ ಎಂದು ತಿಳಿದು ಬಂದಿದೆ ಇತನು ಮಲ್ಲಾಪೂರ ಕೆನರಾ ಬ್ಯಾಂಕ್ ನ ಪ್ರಭಾರಿ ಮ್ಯಾನೆಜರ್ ಎಂದು ಹೇಳಲಾಗುತ್ತಿದು ಯಾವ ಕಾರಣಕ್ಕಾಗಿ ಈ ವೇಷ ಧರಿಸಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಎಂದು ಇನ್ನೂ ಸ್ವಷ್ಟವಾಗಿ ತಿಳಿದು ಬಂದಿಲ್ಲ ಈ ಬಗ್ಗೆ ಗೋಕಾಕ ಶಹರ ಠಾಣೆಯ ಪೋಲೀಸರು ವಿಚಾರಣೆ ನಡೆಸುತ್ತಿದ್ದಾರೆ