RNI NO. KARKAN/2006/27779|Thursday, January 15, 2026
You are here: Home » breaking news » ಗೋಕಾಕ:ಕೆ.ಎಲ್.ಇ. ಸಂಸ್ಥೆ ಗುಣಮಟ್ಟದ ಸೇವೆಯಿಂದ ಇಂದು ಅತಿ ದೊಡ್ಡ ಸಂಸ್ಥೆಯಾಗಿದೆ : ಎಂ.ಡಿ. ಚುನಮರಿ

ಗೋಕಾಕ:ಕೆ.ಎಲ್.ಇ. ಸಂಸ್ಥೆ ಗುಣಮಟ್ಟದ ಸೇವೆಯಿಂದ ಇಂದು ಅತಿ ದೊಡ್ಡ ಸಂಸ್ಥೆಯಾಗಿದೆ : ಎಂ.ಡಿ. ಚುನಮರಿ 

ಕೆ.ಎಲ್.ಇ. ಸಂಸ್ಥೆ ಗುಣಮಟ್ಟದ ಸೇವೆಯಿಂದ ಇಂದು ಅತಿ ದೊಡ್ಡ ಸಂಸ್ಥೆಯಾಗಿದೆ : ಎಂ.ಡಿ. ಚುನಮರಿ

ಗೋಕಾಕ ನ 13 : ಸಪ್ತರ್ಷಿಗಳಿಂದ ಆರಂಭಗೊಂಡ ಕೆ.ಎಲ್.ಇ. ಸಂಸ್ಥೆ ಗುಣಮಟ್ಟದ ಸೇವೆಯಿಂದ ಇಂದು ಅತಿ ದೊಡ್ಡ ಸಂಸ್ಥೆಯಾಗಿ ದೇಶ ವಿದೇಶಗಳಲ್ಲಿ ದೇಶ-ವಿದೇಶಗಳಲ್ಲೂ ಪಸರಿಸಿದೆ ಎಂದು ಕೆ.ಎಲ್‌.ಇ. ಸ್ಥಳೀಯ ಸಂಸ್ಥೆಗಳ ಆಡಳಿತ ಮಂಡಳಿ ಮುಖ್ಯಸ್ಥ ಎಂ.ಡಿ.ಚುನಮರಿ ಹೇಳಿದರು.
ಗುರುವಾರ ಕೆ.ಎಲ್‌.ಇ. ಸಂಸ್ಥೆಯ ಇಲ್ಲಿನ ಸಿ.ಎಸ್‌.ಅಂಗಡಿ ಪ.ಪೂ. ಮಹಾವಿದ್ಯಾಲಯದಲ್ಲಿ ಕೆ.ಎಲ್‌.ಇ. ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳ ಎಸ್‌.ಎಸ್‌.ಎಲ್‌.ಸಿ. ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಸೆಲೆಸ್ಟಿಯಲ್‌ ಸಿಂಫನಿ ಸ್ಪರ್ಧೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
1916ರಲ್ಲಿ ಪ್ರಾರಂಭಗೊಂಡ ಸಂಸ್ಥೆ ಇಂದು 110ನೇ ವರ್ಷದಲ್ಲಿ ಪಾದಾರ್ಪಣೆಗೊಳ್ಳುತ್ತಿದೆ. ಜನತೆಯ ಆರೋಗ್ಯ ರಕ್ಷಣೆಯೊಂದಿಗೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರ ಬದುಕನ್ನು ಉಜ್ವಲಗೊಳಿಸುತ್ತಿದೆ. ವಿದ್ಯಾರ್ಥಿಗಳಲ್ಲಿಯ ಪ್ರತಿಭೆಯನ್ನು ಗುರ್ತಿಸಿ, ಪ್ರೋತ್ಸಾಹಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇಂತಹ ವೇದಿಕೆಗಳಲ್ಲಿ ವಿದ್ಯಾರ್ಥಿಗಳು ತಮ್ಮಲ್ಲಿಯ ಪ್ರತಿಭೆಯನ್ನು ಪ್ರದರ್ಶಿಸಿ ಪ್ರತಿಭಾನ್ವಿತರಾಗಿರಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಚಿಕ್ಕೋಡಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಆರ್‌.ಎಸ್‌. ಸೀತಾರಾಮ, ಸಂಸ್ಥೆಯ ಆಡಳಿತಾಧಿಕಾರಿ ಜಿ.ಎಂ.ಅಂದಾನಿ, ಸಂಸ್ಥೆಯ ವಿವಿಧ ಕಾಲೇಜುಗಳ ಪ್ರಾಚಾರ್ಯರಾದ ಎಂ.ಎನ್‌.ಕೌಜಲಗಿ, ಎಂ.ಎ.ಪಾಟೀಲ ಮತ್ತು ಡಾ. ಈರಣ್ಣ ಕಾಜಗಾರ, ಅರ್ಜುನಸಿಂಗ ಅಜೇರಿ, ಮುಖ್ಯೋಪಾಧ್ಯಾಯ ಜಿ.ಎಂ.ಬಿರಾದಾರ ಇದ್ದರು.

Related posts: