RNI NO. KARKAN/2006/27779|Tuesday, December 30, 2025
You are here: Home » breaking news » ಗೋಕಾಕ : ನವೆಂಬರ್ 1ರ ಒಳಗೆ ಗೋಕಾಕ ಜಿಲ್ಲೆಯಾಗದಿದ್ದರೆ ನಿರಂತರ ಹೋರಾಟ : ಅಶೋಕ ಪೂಜಾರಿ ಗುಡುಗು

ಗೋಕಾಕ : ನವೆಂಬರ್ 1ರ ಒಳಗೆ ಗೋಕಾಕ ಜಿಲ್ಲೆಯಾಗದಿದ್ದರೆ ನಿರಂತರ ಹೋರಾಟ : ಅಶೋಕ ಪೂಜಾರಿ ಗುಡುಗು 

ನವೆಂಬರ್ 1ರ ಒಳಗೆ ಗೋಕಾಕ ಜಿಲ್ಲೆಯಾಗದಿದ್ದರೆ ನಿರಂತರ ಹೋರಾಟ : ಅಶೋಕ ಪೂಜಾರಿ ಗುಡುಗು

ಗೋಕಾಕ ಅ 3 : ಬರುವ ನವೆಂಬರ್ 1ರ ಒಳಗೆ ಗೋಕಾಕ ನೂತನ ಜಿಲ್ಲೆ ಘೋಷಣೆ ಮಾಡದೆ ಹೋದರೆ ನವೆಂಬರ್ 2 ರಿಂದ ನಿರಂತರ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಹೇಳಿದರು

ಶುಕ್ರವಾರದಂದು ನಗರದ ಅವರ ಸ್ವ-ಗೃಹದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಗೋಕಾಕ ನೂತನ ಜಿಲ್ಲೆಗೆ ಆಗ್ರಹಿಸಿ ಗೋಕಾಕ ಜಿಲ್ಲಾ ಚಾಲನಾ ಸಮಿತಿ ಹಾಗೂ ನ್ಯಾಯವಾದಿಗಳ ಸಂಘ ಮತ್ತು ತಾಲೂಕಿನ ಎಲ್ಲಾ ಸಂಘ,ಸಂಸ್ಥೆಗಳ ನೇತೃತ್ವದಲ್ಲಿ ಪಕ್ಷಾತೀತವಾಗಿ ಮುಂದಿನ ದಿನಗಳಲ್ಲಿ ನಿರಂತರ ಹೋರಾಟಗಳನ್ನು ಸಂಘಟಿಸಲಾಗುವುದು. ಸರಕಾರವೇ ರಚಿಸಿದ ಆಯೋಗಗಳು ಈಗಾಗಲೇ ಗೋಕಾಕ ಜಿಲ್ಲೆಯಾಗಲು ಸೂಕ್ತ ಎಂದು ಹೇಳಿದರು ಸಹ ಇಲ್ಲಿಯವರೆಗೆ ಗೋಕಾಕ ಜಿಲ್ಲೆ ಆಗುವ ಯೋಗ ಕೂಡಿ ಬಂದಿಲ್ಲ ಇದಕ್ಕೆ ರಾಜಕೀಯ ಹಿತಾಸಕ್ತಿ ಇಲ್ಲದಿರುವುದು ದೊಡ್ಡ ದುರಂತ ಎಂದ ಅವರು. ಕೇಂದ್ರ ಸರಕಾರದ ನಿರ್ದೇಶನದಂತೆ ಬರುವ ಡಿಸೆಂಬರ್ 31ರ ಒಳಗೆ ರಾಜ್ಯ ಸರಕಾರಗಳು ಗಡಿ ಪ್ರದೇಶಗಳನ್ನು ವಿಗಂಡನೆ ಮಾಡಬೇಕು ಒಂದು ವೇಳೆ ಮಾಡದೇ ಹೋದರೆ ಮುಂದಿನ 3 ವರ್ಷಗಳ ಕಾಲ ಯಾವುದೇ ಭೂ ಪ್ರದೇಶಗಳನ್ನು ವಿಭಜಿಸುವ ಹಾಗಿಲ್ಲ, ಹಾಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ಅವರು ಕೂಡಲೇ ಎಚ್ಚತ್ತುಕೊಂಡು ಜಿಲ್ಲೆಯ ಎಲ್ಲಾ ಶಾಸಕರನ್ನು ಸೇರಿಸಿ ಅವರ ಅಭಿಪ್ರಾಯ ಪಡೆದುಕೊಂಡು ಜಿಲ್ಲೆ ವಿಭಜನೆಗೆ ಚಾಲನೆ ನೀಡಬೇಕು ಎಂದು ಆಗ್ರಹಿಸಿದರು.
ಮಾಜಿ ಮುಖ್ಯಮಂತ್ರಿ ದಿವಗಂತ ಜೆ.ಎಚ್.ಪಟೇಲ್ ಅವರು ಮಾಡಿದ ಆದೇಶವೇ ಬದಲಾವಣೆ ಆಗಿರುವಾಗ ಕೂಡಲೇ ಸರಕಾರ ಎಚ್ಚರಗೊಂಡು ಗಡಿ ಪ್ರದೇಶ ಗುರುತಿಸುವ ಕಾರ್ಯಕ್ಕೆ ಚಾಲನೆ ನೀಡಬೇಕು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಜಿಲ್ಲೆಗೂ ನ್ಯಾಯ ಕೊಡಬೇಕು ಮತ್ತು ತಾವು ಹುಟ್ಟಿ ಬೆಳೆದ ಊರಿಗೂ ನ್ಯಾಯ ದೊರಕಿಸಬೇಕು ಎಂದರು.

ಈ ಸಂದರ್ಭದಲ್ಲಿ ಪ್ರೋ.ಅರ್ಜುನ್ ಪಂಗಣ್ಣವರ, ಸಂಜೀವ ಪೂಜಾರಿ, ಬಾಳಯ್ಯ ಕಂಬಿ, ಸದಾಕತಅಲಿ ಮಕಾನದಾರ, ಪ್ರವೀಣ ನಾಯಿಕ, ಮಲ್ಲಪ್ಪ ಜಟ್ಟೆನ್ನವರ,ಲಿಂಗಪ್ಪ ಅಮಿನಭಾವಿ ಉಪಸ್ಥಿತರಿದ್ದರು.

Related posts: