ಗೋಕಾಕ:ನಗರದಲ್ಲಿ ಗಮನಸೆಳೆದ ಜೋಡೆತ್ತಿನ ಗಾಡಿ ಶರ್ತುಗಳು

ನಗರದಲ್ಲಿ ಗಮನಸೆಳೆದ ಜೋಡೆತ್ತಿನ ಗಾಡಿ ಶರ್ತುಗಳು
ಗೋಕಾಕ ಜು 6 : ಗೋಕಾಕ ನಗರದ ಗ್ರಾಮದೇವತೆಯರ ಜಾತ್ರಾ ಮಹೋತ್ಸವದ ಅಂಗವಾಗಿ ರವಿವಾರದಂದು ಹಮ್ಮಿಕೊಂಡಿದ್ದ ಭಾರಿ ಜೋಡೆತ್ತಿನ ಗಾಡಿ ಶರ್ತಿನಲ್ಲಿ ಎತ್ತುಗಳ ರೋಮಾಂಚನಕಾರಿ ಓಟ ಗಮನ ಸೆಳೆದವು.
ಯರಗಟ್ಟಿಯ ಅಜೀತ ದೇಸಾಯಿ ಇವರ ಎತ್ತುಗಳು ಪ್ರಥಮ, ನಿಖಿಲ್ ದೇಸಾಯಿ ಇವರ ಎತ್ತುಗಳು ದ್ವಿತೀಯ, ಗೋಕಾಕ ತಾಲೂಕಿನ ಮೇಲ್ಮಟ್ಟಿ ಗ್ರಾಮದ ನಾಯಿಕ ಇವರ ಎತ್ತುಗಳು ತೃತೀಯ ಸ್ಥಾನ ಪಡೆದುಕೊಂಡವು.
ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ್ ಶರ್ತು ಗಳಿಗೆ ಚಾಲನೆ ನೀಡಿ, ಗ್ರಾಮೀಣ ಭಾಗದ ಸೊಗಡನ್ನು ಬಿಂಬಿಸುವಂತಹ ಮತ್ತು ರೈತರು ನೋಡುವಂತಹ ಹಳ್ಳಿಯ ಕ್ರೀಡೆ ಜೋಡೆತ್ತಿನ ಗಾಡಿ ಶರ್ತು ಆಗಿದ್ದು, ಶರ್ತುಗಳಲ್ಲಿ ಭಾಗವಹಿಸಿದವರಿಗೆ ಅಭಿನಂದನೆಗಳು ಸಲ್ಲಿಸಿದರು.
ಜೋಡೆತ್ತಿನ ಶರ್ತುಗಳಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಗೆದ್ದ ಎತ್ತುಗಳಿಗೆ ನಗದು 5 ಲಕ್ಷ ರೂ, , ದ್ವಿತೀಯ ಬಹುಮಾನ ಗೆದ್ದ ಎತ್ತುಗಳಿಗೆ ನಗದು 3 ಲಕ್ಷ ರೂ ಹಾಗೂ ತೃತೀಯ ಬಹುಮಾನ ಗೆದ್ದ ಎತ್ತುಗಳಿಗೆ ನಗದು 2 ಲಕ್ಷ ರೂ ಬಹುಮಾನವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಪ್ರಕಾಶ್ ಮುರಾರಿ, ಯುವ ನಾಯಕ ಅಮರನಾಥ ಜಾರಕಿಹೊಳಿ, ಜಿಪಂ ಮಾಜಿ ಸದಸ್ಯ ಟಿ.ಆರ್.ಕಾಗಲ್, ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ, ಜಾತ್ರಾ ಕಮಿಟಿಯ ಪ್ರಭು ಚವ್ಹಾಣ, ಅಡಿವೆಪ್ಪ ಕಿತ್ತೂರ, ಸಗೀರ ಕೋತವಾಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.