ಗೋಕಾಕ:ವಿದ್ಯಾರ್ಥಿಗಳನ್ನು ಪ್ರತಿಭಾವಂತರನ್ನಾಗಿ ಮಾಡುವಲ್ಲಿ ಗುರುಗಳ ಪಾತ್ರ ಮಹತ್ವದಾಗಿದೆ : ಚೇತನ ಅಲವಾಡೆ

ವಿದ್ಯಾರ್ಥಿಗಳನ್ನು ಪ್ರತಿಭಾವಂತರನ್ನಾಗಿ ಮಾಡುವಲ್ಲಿ ಗುರುಗಳ ಪಾತ್ರ ಮಹತ್ವದಾಗಿದೆ : ಚೇತನ ಅಲವಾಡೆ
ಗೋಕಾಕ ಜ 9 : ವಿದ್ಯಾರ್ಥಿಗಳನ್ನು ಪ್ರತಿಭಾವಂತರನ್ನಾಗಿ ಮಾಡುವಲ್ಲಿ ಗುರುಗಳ ಪಾತ್ರ ಮಹತ್ವದಾಗಿದ್ದು, ವಿದ್ಯಾರ್ಥಿಗಳಿಗೆ ತಾಯಿ ಮತ್ತು ತಂದೆಯೆ ಮೊದಲ ಪಾಠಶಾಲೆ ಎಂದು ಚಿಕ್ಕೋಡಿ ಕೆ.ಎಲ್.ಇ ಮಹಾವಿದ್ಯಾಲಯದ ಪ್ರಾಚಾರ್ಯ ಚೇತನ ಅಲವಾಡೆ ಹೇಳಿದರು.
ಗೋಕಾಕ ಶಿಕ್ಷಣ ಸಂಸ್ಥೆಯ ಮಾಡರ್ನ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಂದಿನ ಪ್ರಸ್ತುತ ಯುಗದಲ್ಲಿ ಮೊಬೈಲ್ ವಿದ್ಯಾರ್ಥಿಗಳನ್ನು ಮೊದಲು ಮಾಡಿಕೊಂಡು ಸಮಾಜದ ಎಲ್ಲಾ ಸಮೂಹಗಳ ಮೇಲೆ ವ್ಯತಿರಿಕ್ತ ಪರಿಣಾಮ ಬಿರುತ್ತಿದೆ. ಮೊಬೈಲ್ ಇಲ್ಲದ ಬದುಕಲು ಸಾಧ್ಯವಿಲ್ಲ ಎಂಬಾರ್ಥದಲ್ಲಿ ನಾವು ಬದುಕುತ್ತಿದ್ದೇವೆ.
ವಿದ್ಯಾರ್ಥಿ ಜೀವನದಲ್ಲಿ ಗುರಿಗಳನ್ನು ಹೊಂದಿ ವಿದ್ಯಾರ್ಥಿಗಳು ಅಭ್ಯಾಸ ಮಾಡಬೇಕು. ವಿದ್ಯಾರ್ಥಿಗಳು ಶಾಲೆಯಲ್ಲಿ ಮೊದಲ ಸ್ಥಾನ ಬರಬೇಕು ಎಂದು ಭಾವಿಸದೆ. ವ್ಯಕ್ತಿತ್ವವನ್ನು ರೂಪಿಸಿಕೊಂಡು ಬದುಕನ್ನು ಕಟ್ಟಿಕೊಳ್ಳಬೇಕು. ಭಾಷೆ , ವ್ಯಕ್ತಿತ್ವ ರೂಪಿಸಿಕೊಳ್ಳಲು ಕಲಿಕೆ ಒಂದು ಅಂಗವಾಗಿದೆ. ವಿದ್ಯಾರ್ಥಿಗಳಿಗೆ ಪಾಲಕರು ಮತ್ತು ಶಿಕ್ಷಕರು ಚಿಕ್ಕ, ಚಿಕ್ಕ ಗುರಿಗಳನ್ನು ನೀಡಿ ಅವರಿಗೆ ಬಲಿಷ್ಠ ಮಾಡಬೇಕು. ಮಕ್ಕಳಲ್ಲಿ ವಿದ್ಯಾಭ್ಯಾಸದ ಬಗ್ಗೆ ಆಸಕ್ತಿ ಮೂಡಿಸುವದರ ಜೊತೆಗೆ ಜಗತ್ತಿನಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಅವರಿಗೆ ಮಾಹಿತಿ ನೀಡಬೇಕು ಅಂದಾಗ ಮಾತ್ರ ಅವರು ಜೀವನದಲ್ಲಿ ಯಶಸ್ವಿ ಬದುಕು ಕಟ್ಟುಕೊಳ್ಳಲು ಸಾಧ್ಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕ್ರೀಡೆಯಲ್ಲಿ ಭಾಗವಹಿಸಿ ಪ್ರಥಮ ,ದ್ವಿತೀಯ ,ತೃತೀಯ ಸ್ಥಾನ ಪಡೆದ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಸತ್ಕರಿಸಿ, ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕ ಎನ್.ಸಿ ಪಟ್ಟಣಶೆಟ್ಟಿ ವಹಿಸಿದ್ದರು
ಈ ಸಂದರ್ಭದಲ್ಲಿ ಕಾರ್ಯದರ್ಶಿ ಆರ್.ಎಂ.ವಾಲಿ, ಮುಖ್ಯೋಪಾಧ್ಯಾಯ ಎಸ್.ಕೆ ಮಠದ, ಪ್ರಧಾನ ಗುರುಮಾತೆ ಕೆ.ಎಚ್.ಮೇಟಿ, ವಿದ್ಯಾರ್ಥಿ ಪ್ರತಿದಿಗಳಾದ ಕುಮಾರ ಮಣಿಕಂಠ ಕುರಬೇಟ್, ಕುಮಾರಿ ಸಹಾನ ಪತ್ತಾರ ಉಪಸ್ಥಿತರಿದ್ದರು.