ಗೋಕಾಕ:ಹಳೆ ವೈಷಮ್ಯ , ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೋಲೆ : ಗೋಕಾಕ ಫಾಲ್ಸದಲ್ಲಿ ಘಟನೆ
ಹಳೆ ವೈಷಮ್ಯ , ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೋಲೆ : ಗೋಕಾಕ ಫಾಲ್ಸದಲ್ಲಿ ಘಟನೆ
ಗೋಕಾಕ ಅ 20: ಹಳೆ ವೈಷಮ್ಯ ಹಾಗೂ ಕ್ಷುಲ್ಲಕ ಕಾರಣ ಹಿನ್ನೆಲೆಯಲ್ಲಿ ಯುವಕನನ್ನು ಮಾರಕಾಸ್ತ್ರಗಳಿಂದ ಕೋಚ್ಚಿ ಕೊಲೆಗೈದ ಘಟನೆ ಗುರುವಾರ ರಾತ್ರಿ ಗೋಕಾಕ ಫಾಲ್ಸದಲ್ಲಿ ನಡೆದಿದೆ
ಜಮೀಲ ಶೌಕತ ಸುತಾರ (24 ) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ , ನೀರು ತುಂಬುವ ವಿಚಾರವಾಗಿ ಕಳೆದ ಎರೆಡು ತಿಂಗಳ ಹಿಂದೆ ಗ್ರಾಮದಲ್ಲಿ ಸಮೀರ ಜಗಳವಾಡಿದ್ದ ಎನ್ನಲಾಗಿದೆ ಅದೇ ದೈಷವಿಟ್ಪುಕೊಂಡು ನಿನೆ ರಾತ್ರಿ ನಾಲ್ಕು ಜನರ ಗುಂಪು ಸಮೀರ ನೊಂದಿಗೆ ಜಗಳವಾಡಿ ಮಾರಕಾಸ್ತ್ರಗಳಿಂದ ಹಲ್ಲೆನಡೆಸಿದ್ದಾರೆ
ಗಂಭೀರವಾಗಿ ಗಾಯಗೊಂಡ ಜಮೀರನನ್ನು ಚಿಕಿತ್ಸೆಗಾಗಿ ನಿನ್ನೆ ರಾತ್ರಿ ಗೋಕಾಕದ ಸರಕಾರಿ ಆಸ್ಪತ್ರೆಗೆ ದಾಖಲಿಸಿ , ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಇಂದು ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಗಾಯಾಳು ಸಮೀರ ಸಾವನ್ನಪ್ಪಿದ್ದಾನೆ
ಘಟನಾ ಸ್ಥಳಕ್ಕೆ ಬೇಟ್ಟಿ ನೀಡಿರುವ ಬೆಳಗಾವಿ ಜಿಲ್ಲಾ ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿ ಗಡಾದ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು
ಇದಕ್ಕೆ ಸಂಬಂಧಿಸಿದಂತೆ ಶಿವಾಜಿ ಪಂಗನ್ನವರ , ನಾಗೇಶ ಪಂಗನ್ನವರ , ಸಂಜು ಪಂಗನ್ನವರ ಎಂಬ ಒಂದೇ ಕುಟುಂಬದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ .