RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ಪಕ್ಷ ಗೆಲ್ಲಬೇಕಾದರೆ ಕಾರ್ಯಕರ್ತರ ಶ್ರಮ ಬಹುಮುಖ್ಯವಾಗಿದೆ : ಲೋಕೋಪಯೋಗಿ ಸಚಿವ ಸತೀಶ

ಗೋಕಾಕ:ಪಕ್ಷ ಗೆಲ್ಲಬೇಕಾದರೆ ಕಾರ್ಯಕರ್ತರ ಶ್ರಮ ಬಹುಮುಖ್ಯವಾಗಿದೆ : ಲೋಕೋಪಯೋಗಿ ಸಚಿವ ಸತೀಶ 

ಪಕ್ಷ ಗೆಲ್ಲಬೇಕಾದರೆ ಕಾರ್ಯಕರ್ತರ ಶ್ರಮ ಬಹುಮುಖ್ಯವಾಗಿದೆ : ಲೋಕೋಪಯೋಗಿ ಸಚಿವ ಸತೀಶ

ಗೋಕಾಕ ಮಾ 28 : ಪಕ್ಷ ಗೆಲ್ಲಬೇಕಾದರೆ ಕಾರ್ಯಕರ್ತರ ಶ್ರಮ ಬಹುಮುಖ್ಯವಾಗಿದ್ದು, ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳು ಲೋಕಸಭಾ ಚುನಾವಣೆಗೆ ಶ್ರೀರಕ್ಷೆಯಾಗಿವೆ ಎಂದು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಗುರುವಾರದಂದು ನಗರದ ಶ್ರೀ ಮಹಾಲಕ್ಷ್ಮಿ ಸಭಾಭವನದಲ್ಲಿ ಲೋಕಸಭಾ ಚುನಾವಣೆ ನಿಮಿತ್ತ ಅರಭಾವಿ ಮತ್ತು ಗೋಕಾಕ ವಿಧಾನಸಭಾ ಮತಕ್ಷೇತ್ರಗಳ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇಶಕ್ಕೆ ಹೆಚ್ಚು ನೀರಾವರಿ ಸೌಲಭ್ಯ ಗಳನ್ನು ಕಲ್ಪಿಸದ ಪಕ್ಷ ಕಾಂಗ್ರೆಸ ಬಿಜೆಪಿಗೆ ಇಲ್ಲಿಯವರೆಗೆ ಒಂದೆ ಒಂದು ಡ್ಯಾಂ ಮತ್ತು ವಿಶ್ವ ವಿದ್ಯಾಲಯ ಕಟ್ಟಲು ಸಾಧ್ಯವಾಗಿಲ್ಲ. ದೇಶದ ಅಭಿವೃದ್ಧಿಯಾಗಲ್ಲಿಕ್ಕೆ ಕಾಂಗ್ರೆಸ್ ನೀಡಿದ ಶಿಕ್ಷಣ ನೀತಿ ಇಂದಿಗೂ ಸಹಕಾರಿಯಾಗಿದೆ.
ಬಿಜೆಪಿ ಪಕ್ಷದವರು ಮೋದಿಯೇ ಗ್ಯಾರಂಟಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಕೊಟ್ಟ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿದೆ ಎಂದ ಅವರು ಗೋಕಾಕದಲ್ಲಿ ಜನ ಸೇರಿಸುವುದು ದೊಡ್ಡ ಕೆಲಸವಲ್ಲ ನಾವು ಹಣಕೊಟ್ಟು ನಾವು ಜನರನ್ನು ಕರೆಸಿಲ್ಲಾ ಆದರೂ ಇಷ್ಟು ಜನ ಸೇರಿದ್ದಾರೆ ಮುಂದೆ ಹತ್ತು ಸಾವಿರ ಜನರನ್ನು ಸೇರಿಸಿ ಸಮಾವೇಶ ಮಾಡೋಣ ಎಂದರು.

ರಾಜ್ಯದ ಪತ್ರಿ ಮಹಿಳೆ ಕಾಂಗ್ರೆಸ್ ಗ್ಯಾರಂಟಿಯ ಲಾಭ ಪಡೆಯುತ್ತಿದ್ದಾರೆ. ಮೋದಿ ಅವರ ವೈಫಲ್ಯಗಳನ್ನು ಮತ್ತು ಕಾಂಗ್ರೆಸ್ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸಿ ಹೇಳಿ ಕಾಂಗ್ರೆಸ್ ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದ ಅವರು ಬೆಳಗಾವಿ ಮತ್ತು ಚಿಕ್ಕೋಡಿ ನೂರಕ್ಕೆ ನೂರರಷ್ಟು ಕಾಂಗ್ರೆಸ್ ಗೆಲ್ಲುತ್ತದೆ ಅವರ ಗೆಲುವಿನಲ್ಲಿ ತಾವು ಫಾಲದಾರರಾಗಿ ಎಂದು ಹೇಳಿದರು. ಗೋಕಾಕ ಮತ್ತು ಅರಭಾವಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಸಾಕಷ್ಟು ಕೆಲಸ ಮಾಡಿದ್ದೇನೆ ಮುಂದೆಯೂ ಮಾಡಲು ಕಾಂಗ್ರೆಸ್ ಬೆಂಬಲಿಸಬೇಕು ಎಂದರು‌.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ ಕಾಂಗ್ರೆಸ್ ಪಕ್ಷ 23ರ ವಿಧಾನಸಭಾ ಚುನಾವಣೆಯಲ್ಲಿ 135 ಅಭ್ಯರ್ಥಿಗಳು ಗೆಲ್ಲುವ ಮೂಲಕ ದೇಶದಲ್ಲಿ ಇತಿಹಾಸ ಸೃಷ್ಟಿಸಿದೆ. ಕೊವಿಡ ಸಂದರ್ಭದಲ್ಲಿ ಹೆಣದ ಮೇಲೆ ರಾಜಕೀಯ ಮಾಡಿದ ಬಿಜೆಪಿ ಪಕ್ಷವನ್ನು ಇಂದು ಸೋಲಿಸಬೇಕು. ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳನ್ನು ಇಡೀ ರಾಜ್ಯ ಎದುರು ನೋಡುತ್ತಿದೆ. ಹಿಂದೆ ಈ ಭಾಗದ ಸಂಸದರನ್ನು ತಾವು ಐದು ಬಾರಿ ಆರಿಸಿ ಕಳಿಸಿದ್ದರು ಸಹ ಯಾವುದೇ ಅಭಿವೃದ್ಧಿ ಯಾಗಿಲ್ಲ ಇಂದು ಅವರನ್ನು ಬದಲಿಸುವ ಕಾಲ ಬಂದಿದೆ. ಚಿಕ್ಕೋಡಿ ಮತ್ತು ಲೋಕಸಭಾ ಕ್ಷೇತ್ರದ ಯುವ ಅಭ್ಯರ್ಥಿಗಳು ಮುಂದೆ ಮಾದರಿಯಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾರೆ. ಕಾಂಗ್ರೆಸ್ ಪಕ್ಷ ಐದು ವರ್ಷದ ವರೆಗೆ ನಿರಂತರ ಇರುತ್ತದೆ. ಬಿಜೆಪಿಯ ಕೆಟ್ಟ ಸರಕಾರದ ಅವಧಿಯಲ್ಲಿ ಏನು ಅಭಿವೃದ್ಧಿ ಆಗಿಲ್ಲ ಆದರೆ ನಾವು ನುಡಿದಂತೆ ನಡೆದು ಪಂಚ ಗ್ಯಾರಂಟಿಗಳನ್ನು ತಂದು ಅವುಗಳನ್ನು ಅನುಷ್ಠಾನ ಗೊಳಿಸಿದ್ದೇವೆ. ಬಿಜೆಪಿಯವರು ಸಭ್ ಕಾ ಸಾಥ್ ಖುದ್ ಕಾ ವಿಕಾಸ ಮಾಡುತ್ತಿದ್ದಾರೆ. ಲೋಕಸಭೆ ಅಭ್ಯರ್ಥಿ ಮಾಡಲು ಬಿಜೆಪಿ ಅವರಿಗೆ ಜಿಲ್ಲೆಯಲ್ಲಿ ಒಬ್ಬ ಅಭ್ಯರ್ಥಿ ಸಿಗಲಿಲ್ಲ ಇದು ಜಿಲ್ಲೆಯ ಪ್ರತಿಷ್ಠಿತೆ ವಿಷಯವಾಗಿದ್ದು, ಎಲ್ಲರೂ ಒಗ್ಗೂಡಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಸರ್ವ ಜಾತಿಯ ವಿಕಾಸ ಮಾಡುವುದೆ ನಮ್ಮ ಕರ್ತವ್ಯವಾಗಿದೆ. ದೇಶಕ್ಕೆ ಪ್ರಾಣವನ್ನು ತ್ಯಾಗ ಮಾಡಿದ ಪಕ್ಷವನ್ನು ಇಂದು ಗೆಲ್ಲಿಸಬೇಕು. ಬಿಜೆಪಿಯವರು ಡೊಂಗಿ ದೇಶ ಭಕ್ತರು ಎಂದು ಟೀಕಿಸಿದ ಅವರು ಸತೀಶ್ ಜಾರಕಿಹೊಳಿ ಮತ್ತು ನಾನು ನಿರಂತರ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇವೆ. ರಾಜ್ಯದಲ್ಲಿ 28 ಕ್ಷೇತ್ರಗಳಲ್ಲಿ 20 ಕ್ಷೇತ್ರಗಳನ್ನು ಗೆಲ್ಲುತ್ತೇವೆ ಅದರಲ್ಲಿ ಬೆಳಗಾವಿ ಮತ್ತು ಚಿಕ್ಕೋಡಿಯು ಇರುತ್ತದೆ ಎಂದು ಭವಿಷ್ಯ ನುಡಿದರು.

ಲೋಕಸಭಾ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ ಮಾತನಾಡಿ 2014 ರ ಲೋಕಸಭಾ ಚುನಾವಣೆಯಲ್ಲಿ ಗೋಕಾಕ ಮತ್ತು ಅರಭಾವಿ ಕ್ಷೇತ್ರದಲ್ಲಿ ತಾಯಿಗೆ ಬೆಂಬಲ ನೀಡಿದ ಹಾಗೆ ನನಗೂ ನೀಡಬೇಕು.. ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಪಕ್ಷವು ಬಲಿಷ್ಠವಾಗಿದ್ದು, ಕಾಂಗ್ರೆಸ್ ಪಕ್ಷ ಕೊಟ್ಟ ಭರವಸೆಯನ್ನು ಈಡೇರಿಸಿದೆ. ನುಡಿದಂತೆ ನಡೆಯುವ ಪಕ್ಷ ಕಾಂಗ್ರೆಸ್ ಪಕ್ಷ. ಬಿಜೆಪಿಯವರು ಹತ್ತು ರೂಪಾಯಿ ಕೆಲಸ ಮಾಡಿ ನೂರು ರೂಪಾಯಿ ಪ್ರಚಾರ ಪಡೆಯುತ್ತಾರೆ. ನಾವು ಸಾವಿರ ರೂಪಾಯಿ ಕೆಲಸ ಮಾಡಿ ಹತ್ತು ರೂಪಾಯಿ ಪ್ರಚಾರ ಪಡೆಯುದಿಲ್ಲ ಮುಂದೆ ನಾವು ಸಹ ನಮ್ಮ ನಾಯಕರು ಮತ್ತು ಪಕ್ಷ ಏನು ಕೆಲಸ ಮಾಡುತ್ತದೆ ಅದಕ್ಕೆ ಪೂರಕ ಪ್ರಚಾರ ಪಡೆಯಬೇಕು ಎಂದ ಅವರು ಕಾಂಗ್ರೆಸ್ ಪಕ್ಷದ ಕಾರ್ಯಗಳನ್ನು ಮನೆ,ಮನೆಗೆ ತಲುಪಿಸಿ ನನ್ನ ಗೆಲುವುವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಿದ್ದಲಿಂಗ ದಳವಾಯಿ, ಚಂದ್ರಶೇಖರ್ ಕೊಣ್ಣೂರ, ವಿವೇಕ ಜತ್ತಿ, ಡಾ.ಮಹಾಂತೇಶ ಕಡಾಡಿ, ಅನಿಲ ದಳವಾಯಿ, ಶಂಕರ ಗಿಡನ್ನವರ, ಜಾಕೀರ ನಧಾಪ, ಪ್ರಕಾಶ ಡಾಂಗೆ, ಬಸನಗೌಡ ಹೊಳೆಯಾಚೆ, ಲಕ್ಕಪ್ಟ ಲಕ್ಕೊರಿ ಭ್ರಮಣ್ಣ ಉಪ್ಪಾರ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕಲ್ಪನಾ ಜೋಶಿ, ರಮೇಶ್ ಉಟಗಿ , ಎಂ,ಆರ್.ಬೋವಿ, ಬಾಳಪ್ಪ ಬೇಳಕೂಡ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

Related posts: