ಗೋಕಾಕ:ನವಜಾತ ಶಿಶುಗಳ ಆರೈಕೆ ಕುರಿತು ಒಂದು ದಿನದ ಕಾರ್ಯಾಗಾರ

ನವಜಾತ ಶಿಶುಗಳ ಆರೈಕೆ ಕುರಿತು ಒಂದು ದಿನದ ಕಾರ್ಯಾಗಾರ
ಗೋಕಾಕ ನ 22 : ನಗರದ ಕೆಎಲ್‍ಇ ನರ್ಸಿಂಗ ಕಾಲೇಜಿನಿಂದ ಮಂಗಳವಾರದಂದು ನವಜಾತ ಶಿಶುಗಳ ಆರೈಕೆ ಕುರಿತು ಒಂದು ದಿನದ ಕಾರ್ಯಾಗಾರವನ್ನು ರೋಟರಿ ರಕ್ತ ಭಂಡಾರದಲ್ಲಿ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಾಗಾರವನ್ನು ಉದ್ಘಾಟಿಸಿದ ಡಾ.ಧರೇಪ್ಪ ಚೌಗಲಾ ಇವರು ನವಜಾತ ಶಿಶುಗಳ ಶಾರೀರಿಕ ಬದಲಾವಣೆಗಳನ್ನು ಗರ್ಭಾವಸ್ಥೆಯಲ್ಲೇ ವಹಿಸಬೇಕಾದ ಆರೋಗ್ಯ ಮಾಹಿತಿ ಕುರಿತು ಮಾತನಾಡಿದರು.
ನವಜಾತ ಶಿಶುಗಳ ಆರೈಕೆ ಕುರಿತು ಡಾ.ಉದಯ ಅಂಗಡಿ, ಡಾ.ಆಶಾ ಭಟ್ ಮಾಹಿತಿ ನೀಡಿದರು. ಹಿಮಾಲಯನ್ ಕಂಪನಿಯ ಆನಚಿದರಾವ ತಮ್ಮ ಉತ್ಪನ್ನಗಳ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಕೆಎಲ್‍ಇ ನಿರ್ದೇಶಕ ಜಯಾನಂದ ಮುನವಳ್ಳಿ, ಪ್ರಾಚಾರ್ಯ ಡಾ.ಈರಣ್ಣ ಕಾಜಗಾರ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯವರು ಹಾಗೂ ನರ್ಸಿಂಗ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.